ಕವಿತಾಳ: ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಸೋಮವಾರ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ವಜನಾಂಗದ ಮುಖಂಡರು ಹಾಗೂ ಗ್ರಾಮಸ್ಥರು ಒಗ್ಗೂಡಿ ಸಂಭ್ರಮದಿಂದ ಆಚರಿಸಿದರು.
ಗ್ರಾಮದ ರಾಯಚೂರು–ಲಿಂಗಸುಗೂರು ಮುಖ್ಯರಸ್ತೆಯಲ್ಲಿರುವ ಮಹರ್ಷಿ ವಾಲ್ಮೀಕಿ ವೃತ್ತ ಹಾಗೂ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಗುರು ಒಳಬಳ್ಳಾರಿ ಚನ್ನಬಸವೇಶ್ವರ, ನಿಜಶರಣ ಅಂಬಿಗರ ಚೌಡಯ್ಯ, ಡಾ. ಬಿ.ಆರ್. ಅಂಬೇಡ್ಕರ್, ಕನಕದಾಸರು ಹಾಗೂ ಟಿಪ್ಪು ಸುಲ್ತಾನ್ ಅವರ ನಾಮಫಲಕಗಳಿಗೂ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮದ ಮುಖಂಡ ಮಲ್ಲಿಕಾರ್ಜುನ ನಾಲ್ವರ್ಕರ್, ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯದ ಮೂಲಕ ಜಗತ್ತಿಗೆ ಸತ್ಯ, ಧರ್ಮ, ನ್ಯಾಯ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ನೀಡಿದ್ದಾರೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರ್ಚಕ ವಿದ್ಯಾನಂದ ಸ್ವಾಮೀಜಿ, ಲಚಮಪ್ಪ ಕೊಂಡಾಲ, ಸಣ್ಣ ದುರುಗಪ್ಪ ಜೋಳದಾರಾಶಿ, ಅಯ್ಯಪ್ಪ ಯದಲದೊಡ್ಡಿ, ಮಲ್ಲಿಕಾರ್ಜುನ ನಾಲ್ವರ್ಕರ್, ವಿಜಯಕುಮಾರ್ ಗುತ್ತೇದಾರ, ವೆಂಕಟೇಶ್ ಯದಲದೊಡ್ಡಿ ಕಾನ್ಯಾಳ, ನಾಗಪ್ಪ ಅರಿಕೇರಿ, ರಂಗಪ್ಪ ಅರಿಕೇರಿ, ಮಲ್ಲಪ್ಪ ಅರಿಕೇರಿ, ಮಲ್ಲಿಕಾರ್ಜುನ ಗೊಬ್ಬಿ, ಗಂಗಪ್ಪ ಯದಲದೊಡ್ಡಿ, ಅಯ್ಯಪ್ಪ ನಾಯಕ ವಾಟರ್ಮ್ಯಾನ್, ಮೌನೇಶ ಯದಲದೊಡ್ಡಿ, ಅಯ್ಯಣ್ಣ ನಾಯಕ, ಬಸವರಾಜ ಪೋಸ್ಟ್ಮಾಸ್ಟರ್, ಅಮರೇಗೌಡ ಗುಡಿಹಾಳ, ಮರೆಪ್ಪ ಹುಣಸಗಿ, ಲಕ್ಷ್ಮೀಕಾಂತ ಭೋವಿ, ಲಕ್ಷ್ಮಣ ಚೌಡ್ಲಿ, ನಾಗರಾಜ ಅರಿಕೇರಿ, ಅಮರೇಶ ಕಮತರ್ ಸೇರಿದಂತೆ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



