ಮಾನ್ವಿ: ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಬಿ.ವಿ. ನಾಯಕ ಅವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ಮಾನ್ವಿ ಮಂಡಲದ ವತಿಯಿಂದ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಜನ್ಮದಿನವನ್ನು ಆಚರಿಸಲಾಯಿತು.

ಬಿಜೆಪಿ ಮಾನ್ವಿ ಮಂಡಲದ ಅಧ್ಯಕ್ಷ ವೀರಭದ್ರಗೌಡ ಭೋಗವತಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಬಿ.ವಿ. ನಾಯಕ ಅವರ ಅಭಿಮಾನಿಗಳು ಭಾಗವಹಿಸಿ ಜನ್ಮದಿನದ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿದ ಕಾರ್ಯಕರ್ತರು, ಮಾಜಿ ಸಂಸದ ಬಿ.ವಿ. ನಾಯಕ ಅವರಿಗೆ ಶುಭ ಹಾರೈಸಿದರು. ಪಕ್ಷದ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಒಗ್ಗೂಡಿ ಸರಳವಾಗಿ ಜನ್ಮದಿನ ಆಚರಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ತಿಮ್ಮರೆಡ್ಡಿ ಭೋಗವತಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ದೊರೆಬಾಬು, ಕೆ. ನಾಗಕಲಿಂಗಸ್ವಾಮಿ, ಹನುಮೇಶನಾಯಕ ಸಾದಪುರ, ಮಲ್ಲಿಕಾರ್ಜುನಗೌಡ ಸಂಗಪುರ, ನರಸಿಂಹನಾಯಕ, ವೀರೇಶನಾಯಕ ಬೆಟ್ಟದೂರು, ರವಿಕುಮಾರ ಅಲ್ದಾಳ್, ವಕೀಲ ವೀರನಗೌಡ, ನಾಗರಾಜ ಜಲ್ಲಿ, ಶರಣಪ್ಪಗೌಡ, ಸುರೇಶಗೌಡ, ಶರಣಬಸವನಾಯಕ, ಜಯಪ್ಪನಾಯಕ, ಶಿವಲಿಂಗಯ್ಯಸ್ವಾಮಿ, ಶಿವಕುಮಾರಸ್ವಾಮಿ, ಮಂಜುನಾಥ ನಾಯಕ, ಅಯ್ಯಪ್ಪ ನಾಯಕ ಮ್ಯಾಕಲ್, ಅಮರೇಶನಾಯಕ ಜಾನೇಕಲ್, ದುರುಗಪ್ಪ ತಡಕಲ್, ಜಗದೀಶ ಒತ್ತೂರು, ಶರಣಯ್ಯಸ್ವಾಮಿ, ಜಯರಾಜ್, ರಾಹುಲ್, ಗುರುಗೌಡ ಕಣ್ಣೂರು, ವಿಜಯ ಸುಂಕೇಶ್ವರ, ನವೀನ್ ಕುಮಾರ, ಭೀಮಣ್ಣ ಹರವಿ, ಕುಮಾರಸ್ವಾಮಿ, ಚಂದ್ರುನಾಯಕ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.