ರಾಯಚೂರು ಅ. 17 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆ ವ್ಯಾಪ್ತಿಯಲ್ಲಿ ಪ್ರಸ್ತುತ ಸಾಲಿನಲ್ಲಿ ಹತ್ತಿ ಬೆಂಬಲ ಬೆಲೆಯ ಕಾರ್ಯಕ್ರಮದಡಿ ಖರೀದಿ ಕೇಂದ್ರಗಳು ಮತ್ತು ನೋಂದಣಿ ಪ್ರಕ್ರಿಯೆ ಭಾರತೀಯ ಹತ್ತಿ ನಿಗಮ ವತಿಯಿಂದ ಕನಿಷ್ಠ ಬೆಂಬಲ ಬೆಲೆ (ಎಮ್‌ಎಸ್‌ಪಿ) ಅಡಿಯಲ್ಲಿ ಹತ್ತಿಯನ್ನು ಖರೀದಿಸುವ ಪ್ರಕ್ರಿಯೆಯು 2026ರ ಅಕ್ಟೋಬರ್-22ರಿಂದ ಪ್ರಾರಂಭವಾಗಲಿದೆ.

ಎಮ್‌ಎಸ್‌ಪಿ ಅಡಿಯಲ್ಲಿ ಸುಗಮ ಮತ್ತು ಪಾರದರ್ಶಕ ಖರೀದಿ ಪ್ರಕ್ರಿಯೆಯನ್ನು ಖಚಿತಪಡಿಸಲು, ಸಿಸಿಐಯು "ಕಪಾಸ್ ಕಿಸಾನ್" ಮೊಬೈಲ್ ಆ್ಯಪ್ ಮೂಲಕ ಹತ್ತಿಯನ್ನು (ಕಪಾಸ್) ಖರೀದಿಸುವುದನ್ನು ಮುಂದುವರಿಸಲಿದೆ. ಆದ್ದರಿಂದ ಎಮ್‌ಎಸ್‌ಪಿ ಖರೀದಿ ಸೌಲಭ್ಯವನ್ನು ಪಡೆಯಲು ಎಲ್ಲಾ ಹತ್ತಿ ಬೆಳೆಗಾರರು 31ನೇ ಅಕ್ಟೋಬರ್ 2026 ರೊಳಗೆ "ಕಪಾಸ್ ಕಿಸಾನ್" ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳುವAತೆ ಕೋರಲಾಗಿದೆ. ರೈತರು ತಮ್ಮ ನೋಂದಣಿಯನ್ನು ಪೂರ್ಣಗೊಳಿಸಲು, ಅಗತ್ಯವಿರುವ ಭೂಮಿ ಹಾಗೂ ಬೆಳೆಯ ವಿವರಗಳನ್ನು ಆದಷ್ಟು ಬೇಗ ಅಪ್ಲೋಡ್ ಮಾಡಲು ಸೂಚಿಸಲಾಗಿದೆ.

ರೈತರು ತಮ್ಮ ಅನುಕೂಲಕ್ಕೆ ತಕ್ಕಂತೆ 2026ರ ಅಕ್ಟೋಬರ್ 17 ರಿಂದ 'ಕಪಾಸ್ ಕಿಸಾನ್' ಆ್ಯಪ್ ಮೂಲಕ 2026ರ ಅಕ್ಟೋಬರ್ 22ರ ದಿನಾಂಕಕ್ಕಾಗಿ ಹತ್ತಿ ಮಾರಾಟದ ಸ್ಲಾಟ್‌ಗಳನ್ನು ಕಾಯ್ದಿರಿಸಿ ಕೊಳ್ಳಬಹುದು. ಇದು ಎಮ್‌ಎಸ್‌ಪಿ ಅಡಿಯಲ್ಲಿ ಹತ್ತಿಯನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಪಾರದರ್ಶಕ, ಅನುಕೂಲಕರ ಮತ್ತು ಯಾವುದೇ ತೊಂದರೆಗಳಿಲ್ಲದAತೆ ನಡೆಸಲು ಸಹಕಾರಿಯಾಗುತ್ತದೆ. ಎಲ್ಲಾ ರೈತರು ಕಡ್ಡಾಯವಾಗಿ ನೊಂದಾಯಿಸಿಕೊAಡು ಹತ್ತಿ ಬೆಂಬಲ ಬೆಲೆ ಯೋಜನೆಯ ಸವಲತ್ತನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ರಾಯಚೂರು ಹಾಗೂ ಸಿರವಾರ ಖರೀದಿ ಕೇಂದ್ರಗಳ ಹಿರಿಯ ವಾಣಿಜ್ಯ ಅಧಿಕಾರಿ ಕೆ. ಶ್ಯಾಮಕುಮಾರ ಮೊ.ಸಂಖ್ಯೆ: 8801184777, ಮಾನವಿ ಮತ್ತು ದೇವದುರ್ಗ ಖರೀದಿ ಕೇಂದ್ರಗಳ ಹಿರಿಯ ವಾಣಿಜ್ಯ ಅಧಿಕಾರಿ ರಾಜಶೇಖರ ಸೋಮನ ಗೌಡೂರು ಮೊ. ಸಂಖ್ಯೆ: 8073000918, ಸಿಂಧನೂರು ಖರೀದಿ ಕೇಂದ್ರದ ಹಿರಿಯ ವಾಣಿಜ್ಯ ಅಧಿಕಾರಿ ದಸರಿ ಶಿವಕುಮಾರ ಮೊ. ಸಂಖ್ಯೆ: 8639449110 ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.