ರಾಯಚೂರು : ಕರ್ನಾಟಕ ಕಾರ್ಯಕರ್ತ ಪತ್ರಕರ್ತರ ಸಂಘದಿಂದ ರಾಯಚೂರಿನಲ್ಲಿ ನಡೆಯಲಿರುವ 41ನೇ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನಕ್ಕೆ ಚಿತ್ರ ಕಲಾವಿದರಿಂದ ಸೂಕ್ತ ಲೋಗೊ (ಲಾಂಛನ ) ಗಳನ್ನು ಆಹ್ವಾನಿಸಲಾಗಿದೆ. ರಾಯಚೂರು ಜಿಲ್ಲೆಯ ಇತಿಹಾಸ, ಪರಂಪರೆ, ಸಂಪ್ರದಾಯಗಳನ್ನು ಒಳಗೊಂಡ ಲೋಗೋವನ್ನು ರಚಿಸಿ ಕಳುಹಿಸಲು ಕೋರಲಾಗಿದೆ. ಚಿತ್ರ ಕಲಾವಿದರು ಲೋಗೊಗಳನ್ನು ಕೈಯಿಂದಲೇ ರಚಿಸಿರಬೇಕು. ಎ ಐ ಚಿತ್ರಗಳಿಗೆ ಅವಕಾಶವಿಲ್ಲ.

ನೀವು ಕಳಿಸುವ ಲೋಗೊಗಳು ಉತ್ತಮ ರೆಜುಲೇಷನ್ ಹೊಂದಿರಬೇಕು. ಲಾಂಛನ ಆಯ್ಕೆಯಾದಲ್ಲಿ ಆ ಕಲಾವಿದರನ್ನು ಸಮ್ಮೇಳನದಲ್ಲಿ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಗುವುದು.

ಆಸಕ್ತ ಕಲಾವಿದರು ಅಕ್ಟೋಬರ್ 5ನೇ ತಾರೀಖಿನ ಒಳಗಾಗಿ ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಘಟಕ ರಾಯಚೂರು, ಪತ್ರಿಕಾ ಭವನ, ರಂಗಮಂದಿರದ ಹಿಂದುಗಡೆ, ರಾಯಚೂರು ಈ ವಿಳಾಸಕ್ಕೆ ಕಳಿಸಬೇಕು ಅಥವಾ 7892 011826, 9902921474 ಈ ಸಂಖ್ಯೆಗಳ ವಾಟ್ಸ್ ಅಪ್ ಗೆ ಕಳುಹಿಸುವಂತೆ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ್, ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಪ್ರಕಟಣೆಯಲ್ಲಿ ಕೋರಿದ್ದಾರೆ.