ಮಾನ್ವಿ: ಪಟ್ಟಣದ ಲೋಯೋಲಾ ಕಾಲೇಜು ಆವರಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಮಾನ್ವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಬಾಲಕರ ವಿಭಾಗದ 5,000 ಮೀಟರ್ ಓಟದಲ್ಲಿ ವೀರೇಶ ಕೊರವಿ ಪ್ರಥಮ ಸ್ಥಾನ, 400 ಮೀಟರ್ ಓಟದಲ್ಲಿ ಆದನಗೌಡ ಚಡಕಲಗುಡ್ಡ ಪ್ರಥಮ ಸ್ಥಾನ ಪಡೆದಿದ್ದಾರೆ. 100 ಮೀಟರ್ ಓಟ ಹಾಗೂ ಚಕ್ರ ಎಸೆತದಲ್ಲಿ ಅಯ್ಯನಗೌಡ ಚಡಕಲಗುಡ್ಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಬಾಲಕಿಯರ ವಿಭಾಗದ 100 ಮೀಟರ್ ಓಟದಲ್ಲಿ ಚಾಮುಂಡಿ ಉಮಳಿ ಹೊಸೂರು ದ್ವಿತೀಯ ಸ್ಥಾನ, 800 ಮೀಟರ್ ಓಟದಲ್ಲಿ ಭಾಗ್ಯಮ್ಮ ಉಮಳಿ ಹೊಸೂರು ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ವಿಜೇತ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇದಲ್ಲದೆ ಕಬಡ್ಡಿ, ಖೋ-ಖೋ ಹಾಗೂ ವಾಲಿಬಾಲ್ ಸೇರಿದಂತೆ ವಿವಿಧ ಗುಂಪು ಕ್ರೀಡೆಗಳಲ್ಲಿಯೂ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಅಧ್ಯಕ್ಷ ಎಚ್. ಮೌನೇಶಗೌಡ, ಪ್ರಾಚಾರ್ಯ ಕೃಷ್ಣ ವಧೂತ ಕಾತರಕಿ, ಉಪನ್ಯಾಸಕರಾದ ಅಂಬಣ್ಣ ನಾಯಕ ಉಮಳಿ ಹೊಸೂರು, ಹನುಮಂತ ಯಡಿವಾಳ, ಅಮರೇಶ ಮಾನ್ವಿ ಹಾಗೂ ಉಪನ್ಯಾಸಕಿಯರಾದ ತ್ರಿವೇಣಿ, ಸೌಂದರ್ಯ ಮತ್ತು ಜ್ಯೋತಿ ಅಭಿನಂದಿಸಿ, ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಮತ್ತಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.