ಮಾನ್ವಿ: ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಮಾನ್ವಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಮಾನ್ವಿ ಕಂದಾಯ ಇಲಾಖೆಯ ಶಿರಸ್ತೇದಾರರಾದ ವಾಸವಿ ಅವರು ಆಯ್ಕೆಯಾಗಿದ್ದಾರೆ.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರು ವಾಸವಿ ಅವರನ್ನು ಅಭಿನಂದಿಸಿ, ನೂತನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವಂತೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಯಚೂರು ಜಿಲ್ಲಾ ಉಪಾಧ್ಯಕ್ಷ ಸಂಗಮೇಶ ಮುಧೋಳ, ಕಂದಾಯ ಇಲಾಖೆ ಜಿಲ್ಲಾ ಅಧ್ಯಕ್ಷ ನಾಗರಾಜ, ಮಾನ್ವಿ ನೌಕರರ ಸಂಘದ ಉಪಾಧ್ಯಕ್ಷ ವಿರುಪಣ್ಣ, ನಿರ್ದೇಶಕರಾದ ವಿಜಯಕುಮಾರ ಸಿ.ಡಿ., ಹನುಮಂತಪ್ಪ ಜಲ್ಲಿ, ಉಪತಹಶೀಲ್ದಾರರಾದ ದೇವರಾಜ, ಬಸವರಾಜ, ಮಂಜುನಾಥ್, ಶಿಕ್ಷಕ ಶಂಕ್ರಪ್ಪ ಹಾಗೂ ಕಂದಾಯ ಇಲಾಖೆಯ ನೌಕರರಾದ ಅಮಿತ್, ದೇವರಾಜ, ಸಂದೀಪ್, ಶ್ರೀಧರ, ಮನೋಜ್, ನಾಗರಾಜ, ಮಂಜುನಾಥ್, ನಾಗಭೂಷಣಮ್ಮ, ಶಿವಮ್ಮ, ಶಿವಲೀಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.



