ರಾಯಚೂರು ಸೆ. 29 (ಕರ್ನಾಟಕ ವಾರ್ತೆ): ಭಾರತ ಚುನಾವಣಾ ಆಯೋಗವು ದಿನಾಂಕ:22.09.2026 ರಂದು ಕರ್ನಾಟಕ ವಿಧಾನ ಪರಿಷತ್ತ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯನ್ನು ಘೋಷಿಸಿ ವೇಳಾಪಟ್ಟಿಯನ್ನು ಹೊರಡಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಚುನಾವಣೆಯ ಮಾದರಿ ನೀತಿ ಸಂಹಿತೆ ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಲಿಖಿತವಾಗಿ ಅಥವಾ ದೂರವಾಣಿ ಮುಖಾಂತರ ಸಾರ್ವಜನಿಕರು ದೂರುಗಳನ್ನು ನೀಡಲು ಅನುಕೂಲಕರವಾಗುಂತೆ ಈ ಕಾರ್ಯಾಲಯದಲ್ಲಿ ದೂರ ಮೇಲ್ವಿಚಾರಣಾ ಕೋಶವನ್ನು ತೆರೆಯಲಾಗಿದೆ ಎಂದು ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸ್ಸೀಂ ಅವರು ತಿಳಿಸಿದ್ದಾರೆ.
ದೂರು ಸಲ್ಲಿಸ ಬಯಸುವವರು ದೂರವಾಣಿ ಸಂಖ್ಯೆ: 08472-200255ಗೆ ತಮ್ಮ ದೂರನ್ನು ಸಲ್ಲಿಸಬಹುದು. ಅಲ್ಲದೇ ಲಿಖಿತವಾಗಿಯು ಸಹ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ, ಚುನಾವಣಾ ಶಾಖೆ, 2ನೇ ಮಹಡಿ, ಜಿಲ್ಲಾಡಳಿತ ಭವನ, ಸ್ಟೇಷನ್ ರಸ್ತೆ, ಕಲಬುರಗಿ 585102 ಗೆ ಪತ್ರ ವ್ಯವಹರಿಸಬಹುದಾಗಿದೆ. ಈ ದೂರು ನಿರ್ವಹಣಾ ಕೋಶವು ದಿನದ 24 ಗಂಟೆ ಕಾರ್ಯನಿರ್ವಹಿಸಲಾಗುವುದೆಂದು ಅಧಿಸೂಚಿನೆಯಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.



