ರಾಯಚೂರು ಅ. 02 (ಕರ್ನಾಟಕ ವಾರ್ತೆ): ನಗರದ ಜಿಲ್ಲಾ ಕ್ರೀಡಾಂಗಣದ ಹತ್ತಿರದಲ್ಲಿರುವ ಮಹಾತ್ಮಗಾಂಧಿ ಪುತ್ಥಳಿ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮ ಗಾಂಧೀಜಿ ಅವರ 157ನೇ ಜಯಂತಿ ಆಚರಿಸಲಾಯಿತು.
ಈ ವೇಳೆ ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಮಹಾತ್ಮ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿ, ಜೀವನದುದ್ದಕ್ಕೂ ಸತ್ಯಾಗ್ರಹ ಮತ್ತು ಅಹಿಂಸೆಯ ಮಾರ್ಗವನ್ನೇ ತಮ್ಮ ಬದುಕಿನ ಉದಾಹರಣೆಯಾಗಿ ತೋರಿಸಿಕೊಟ್ಟ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ತತ್ವಗಳು ಇಂದಿನ ಆಧುನಿಕ ಕಾಲದಲ್ಲೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಹಲವಾರು ಕಠಿಣ ಹಾಗೂ ಹಿಂಸಾತ್ಮಕ ದಾರಿಗಳನ್ನು ಬಿಟ್ಟು, ಕೇವಲ ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಡೆದರೆ ಮಾತ್ರ ನಮಗೆ ನಿಜವಾದ ಸ್ವಾತಂತ್ರ್ಯ ಹಾಗೂ ಶಾಂತಿ ಸಿಗಲು ಸಾಧ್ಯ ಎಂಬುದನ್ನು ಗಾಂಧೀಜಿಯವರು ತಮ್ಮ ಸ್ವಂತ ಬದುಕಿನ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅವರು ಬೋಧಿಸಿದ ಮಾರ್ಗದಲ್ಲೇ ನಡೆದು, ಇಡೀ ದೇಶದ ಜನರನ್ನು ಮುನ್ನಡೆಸಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಚೇತನ ಮಹಾತ್ಮ ಗಾಂಧಿ ಅವರು ಆಗಿದ್ದಾರೆ ಎಂದರು.
ಇAದಿನ ದಿನಗಳಲ್ಲೂ ಅವರ ಬದುಕು ಮತ್ತು ಬೋಧನೆಗಳು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಉತ್ತಮ ದಾರಿಯನ್ನು ತೋರಿಸುವ ದೊಡ್ಡ ಉದಾಹರಣೆಯಾಗಿವೆ. ಗಾಂಧೀಜಿಯವರು ತೋರಿಸಿದ ಸತ್ಯ ಹಾಗೂ ಅಹಿಂಸೆಯ ಮಾರ್ಗದಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದರು.
ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹೊಪಾತ್ರ ಅವರು ಮಾತನಾಡಿ, ಇಡೀ ಜಗತ್ತಿನಲ್ಲಿ ಯಾವುದೇ ಆಯುಧ, ಬಂದೂಕು ಅಥವಾ ಕತ್ತಿ ಇಲ್ಲದೆ ಬ್ರಿಟಿಷರ ದೊಡ್ಡ ಸಾಮ್ರಾಜ್ಯವನ್ನು ಅಹಿಂಸೆ ಮೂಲಕ ಎದುರಿಸಿ, ಓಡಿಸಿದ ಕೀರ್ತಿ ನಮ್ಮ ಮಹಾತ್ಮ ಗಾಂಧೀಜಿಯವರಿಗೆ ಸಲ್ಲುತ್ತದೆ. ವಿಶ್ವದ 150ಕ್ಕಿಂತ ಹೆಚ್ಚು ದೇಶಗಳಲ್ಲಿ ರಾಷ್ಟçಪಿತ ಗಾಂಧೀಜಿಯವರ ಪ್ರತಿಮೆಗಳನ್ನು ಸ್ಥಾಪಿಸಿ, ಪೂಜಿಸಲಾಗುತ್ತದೆ. ನೆಲ್ಸನ್ ಮಂಡೇಲಾ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಅವರಂತಹ ಮಹಾನ್ ನಾಯಕರಿಗೂ ಗಾಂಧೀಜಿಯೇ ಆದರ್ಶರಾಗಿದ್ದರು ಎಂದರು.
ಗಾAಧೀಜಿ ಪ್ರಕಾರ ಅಹಿಂಸೆ ಎಂದರೆ ಕೇವಲ ಮುಟ್ಟದಿರುವುದಲ್ಲ, ಬದಲಾಗಿ ನ್ಯಾಯ ಒಬ್ಬ ಅಧಿಕಾರಿಯಾಗಿ ತಡವಾಗಿ ಫೈಲ್ ವಿಲೇವಾರಿ ಮಾಡುವುದು ಕೂಡ ಹಿಂಸೆಯೇ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ಲಾಸ್ಟಿಕ್ ಪ್ಯಾಕೆಟ್ ತಿಂದು ಚರಂಡಿಗೆ ಹಾಕಿ, ಅದನ್ನು ಪಾಲಿಕೆ ಅಥವಾ ಪೌರಕಾರ್ಮಿಕರು ಬಂದು ಸ್ವಚ್ಛಗೊಳಿಸಬೇಕು ಎಂದು ಅಪೇಕ್ಷಿಸುವುದೂ ಕೂಡ ಹಿಂಸೆಯೇ. ಏಕೆಂದರೆ ಇದರಿಂದ ಪರಿಸರ ಹಾಗೂ ಮೂಕ ಜೀವಿಗಳಿಗೆ ಹಾನಿಯಾಗುತ್ತದೆ ಎಂದರು.
ಗಾAಧೀಜಿಯವರ ಅಹಿಂಸೆಯ ಪರಿಕಲ್ಪನೆ ಅರ್ಥವಾಗಲು ಅವರ ಆತ್ಮಕಥನ 'ಮೈ ಎಕ್ಸ್ಪೆರಿಮೆಂಟ್ಸ್ ವಿತ್ ಟ್ರುತ್' (ಸತ್ಯದೊಂದಿಗೆ ನನ್ನ ಪ್ರಯೋಗಗಳು), ಸತ್ಯಾಗ್ರಹ ಮತ್ತು ಹಿಂದ್ ಸ್ವರಾಜ್ ಪುಸ್ತಕಗಳನ್ನು ಪ್ರತಿಯೊಬ್ಬರೂ ಓದಿ ಅರ್ಥೈಸಿಕೊಳ್ಳಬೇಕು. ಅವರಿಗೆ ಇಂದು ಕೇವಲ ಮಾಲಾರ್ಪಣೆ ಮಾಡುವುದಷ್ಟೇ ಅಲ್ಲದೆ, ಅವರ ತತ್ವ ಮತ್ತು ಮೌಲ್ಯಗಳನ್ನು ನಮ್ಮ ಜೀವನ ಹಾಗೂ ಕೆಲಸದಲ್ಲಿ ಅಳವಡಿಸಿಕೊಂಡು ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂದರು.
ಪುಸ್ತಕ ಬಿಡುಗಡೆ: ಮಹಾತ್ಮ ಗಾಂಧೀಜಿ ಅವರ 157ನೇ ಜಯಂತಿಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರತಂದ ಗಾಂಧಿ ದರ್ಶನ ಜನಪದ ಹಾಗೂ ಮಾರ್ಚ್ ಆಫ್ ಕರ್ನಾಟಕದ ವಿಶೇಷ ಸಂಚಿಕೆಗಳನ್ನು ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಸೇರಿದಂತೆ ವಿವಿಧ ಗಣ್ಯರಿಂದ ಬಿಡುಗಡೆ ಮಾಡಲಾಯಿತು.
ಸರ್ವಧರ್ಮ ಪ್ರಾರ್ಥನೆ: ಕಾರ್ಯಕ್ರಮದಲ್ಲಿ ಹಿಂದೂ ಧರ್ಮ ಕುರಿತು ಪ್ರವಚನ ನೀಡಿದ ಲಕ್ಷಿö್ಮÃದೇವಿ, ಗೀತೆಯ ಸಾರಾಂಶವನ್ನು ತಿಳಿಸುತ್ತ, ಮಹಾತ್ಮ ಗಾಂಧಿ ಅವರು ಸತ್ಯ ಶೋಧನೆಯಲ್ಲಿ ನಿರತರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಸಮಸ್ಯೆಗಳ ಪರಿಹಾರಕ್ಕೆ ಗೀತೆ ಮೊರೆ ಹೋಗುತ್ತಾರೆ. ರಾಮನಾಮ ಜಪಿಸುತ್ತಿದ್ದರು. ಗಾಂಧಿ ಅವರು ಕೊನೆಯುಸಿರೆಳೆಯುವಾಗ ಹೇ ರಾಮ ಎಂದು ಉದ್ಘಾರ ಮಾಡಿರುವುದನ್ನು ಕೇಳಿ ತಿಳಿದ್ದಿದ್ದೇವೆ ಎಂದರು.
ಇಸ್ಲಾA ಧರ್ಮದ ಕುರಿತು ನೇಮತುಲ್ಲ ಪ್ರವಚನ ನೀಡಿ, ಕುರಾನ್ ಪಠಣ ಮಾಡಿ ಅದರ ಅರ್ಥವನ್ನು ತಿಳಿಸಿದರು. ವಿಶ್ವಕ್ಕೆ ಶಾಂತಿ ಸಾರಿದ ಗಾಂಧೀಜಿ ಅವರ ತತ್ವ, ಸಿದ್ದಾಂತಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದರು.
ಕ್ರಿಶ್ಚಿಯನ್ ಧರ್ಮದ ಕುರಿತು ಸುಮನ್ ಸುನೈನ ಉಪನ್ಯಾಸ ನೀಡಿ, ಬೈಬಲ್ನಲ್ಲಿ ಹೇಳಿರುವ ಸಾರಾಂಶಗಳನ್ನು ತಿಳಿಸಿದರು. ಅಹಿಂಸೆಯಿAದ ಒಳ್ಳೆಯದನ್ನು ಸಾಧಿಸಬಹುದು ಎಂಬುದನ್ನು ಮಹಾತ್ಮ ಗಾಂಧಿ ಅವರು ಹೇಳಿದಂತೆ ನಡೆಯುವ ಮೂಲಕ ತೋರಿಸಿಕೊಟ್ಟಿದ್ದಾರೆ. ಶಾಂತಿಯಿAದ ಸಮಾಜ ಕಟ್ಟಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.
ಬೌದ್ದ ಧರ್ಮದ ಕುರಿತು ಉಪನ್ಯಾಸ ನೀಡಿದ ವಿದ್ಯಾಸಾಗರ್, ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು. ಗುರು, ಹಿರಿಯರನ್ನು ಗೌರವಿಸಬೇಕು. ತಂದೆ-ತಾಯಿ ಸೇವೆ ಮಾಡುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜೈನ್ ಧರ್ಮದ ಕುರಿತು ಉಪನ್ಯಾಸ ನೀಡಿದ ನಾಗಶ್ರೀ, ಪ್ರಾಚೀನ ಗ್ರಂಥದ ಬಗ್ಗೆ ವಿವರಿಸಿದರು. ಅಹಿಂಸೆ ಮಾರ್ಗದಲ್ಲಿ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿ ಅವರ ಮಾರ್ಗವನ್ನು ಎಲ್ಲರು ಅನುಸರಿಸಬೇಕು. ಮಕ್ಕಳಲ್ಲಿ ದೇಶಾಭಿಮಾನ ಬೆಳೆಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ರಾಯಚೂರು ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ರಾಯಚೂರು ಮಹಾನಗರ ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತರಾದ ಶರಣಪ್ಪ, ಮುರಳಿಧರ್ ರಾವ್, ಕಂದಾಯ ವಿಭಾಗದ ಉಪ ಆಯುಕ್ತೆ ಸಂತೋಷ ರಾಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಡಾ.ಜಿ.ಸುರೇಶ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರಾ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ ನಾಯಕ, ರಾಯಚೂರು ಮಹಾನಗರ ಪಾಲಿಕೆಯ ಸಮುದಾಯ ಸಂಘಟನಾಧಿಕಾರಿ ಕೃಷ್ಣ ಕಟ್ಟಿಮನಿ, ಹಿರಿಯ ಪತ್ರಕರ್ತರರಾದ ಪಿ.ಚನ್ನಬಸವ, ಖಾನ್ ಸಾಬ್ ಮೋಮಿನ್, ವಾರ್ತಾ ಇಲಾಖೆಯ ಸಿಬ್ಬಂದಿಗಳಾದ ನರೇಶ, ರಮೇಶ ಗೌಡೂರು, ಅಬ್ಬಾಸ್ ಖಾನ್, ವೆಂಕಟೇಶ, ಅಂಬೇಡ್ಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಸೇವದಳ, ಎನ್ಸಿಸಿ, ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳು ಇದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹ ಕಾರ್ಯದರ್ಶಿ ಡಾ. ದಂಡಪ್ಪ ಬಿರಾದಾರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.



