ರಾಯಚೂರು ಅ. 06 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯ 6 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ವಸತಿ ನಿಲಯಗಳ ವಸತಿಯುತ ಶಾಲೆ/ಕಾಲೇಜುಗಳ ನೋಂದಣಿ ಕುರಿತು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಬಾಲ ನ್ಯಾಯ ಕಾಯ್ದೆಯನ್ವಯ ನೋಂದಣಿಯಾಗಿರುವ ಸಂಸ್ಥೆಗಳನ್ನು/ ವಸತಿ ನಿಲಯಗಳನ್ನು ಹೊರತುಪಡಿಸಿ 6 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರೇತರ ಸಂಸ್ಥೆಗಳು/ನಾಗರೀಕ ಸಮಾಜ ಸಂಸ್ಥೆಗಳು/ ಟ್ರಸ್ಟ್/ ಧಾರ್ಮಿಕ/ ಖಾಸಗಿ/ ವೈಯಕ್ತಿಕವಾಗಿ ನಡೆಸಲ್ಪಡುವ ಯಾವುದೇ ಔಪಚಾರಿಕ/ ಅನೌಪಚಾರಿಕ ಶೈಕ್ಷಣಿಕ ವಸತಿ ನಿಲಯಗಳನ್ನು ವಸತಿ ಶಾಲೆ/ಕಾಲೇಜುಗಳನ್ನು ನೊಂದಾಯಿಸಲು ಕಡ್ಡಾಯವಾಗಿ ನಿರ್ವಹಿಸಲು ಕ್ರಮವಹಿಸಬೇಕಾಗಿದ್ದು, ಅರ್ಜಿಯನ್ನು ವೆಬ್ಸೈಟ್ ವಿಳಾಸ: https://sevaone.karnataka.gov.in/services/directApply.do?serviceId=2731 ನಲ್ಲಿ ನಿಯಮಾನುಸಾರ ಕಡ್ಡಾಯವಾಗಿ ನೊಂದಾವಣೆ ಮಾಡಿಕೊಂಡು ಮಾರ್ಗಸೂಚಿಯ ನಿಯಮಗಳನ್ವಯ ನಿಲಯಗಳನ್ನು ನಡೆಸದೇ ಇದ್ದಲ್ಲಿ ಅಂತಹ ನಿಲಯಗಳನ್ನು ರದ್ದುಗೊಳಿಸಲು ಕ್ರಮ ಜರುಗಿಸಲಾಗುವುದು.
ಹೆಚ್ಚಿನ ವಿವರಣೆಗಳಿಗಾಗಿ ಜಿಲ್ಲಾ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂತ್ರಾಲಯ ರಸ್ತೆ ಐಡಿಎಸ್ಎಮ್ಟಿ ಲೇಔಟ್ ಮಾವಿನ ಕೆರೆ ಎದುರುಗಡೆ ದೂರವಾಣಿ ಸಂಖ್ಯೆ 08532-226292ಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



