ರಾಯಚೂರು ಅ.‍ 06 (ಕರ್ನಾಟಕ ವಾರ್ತೆ): ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ಎನ್.ಆರ್‌.ಬಿ.ಸಿ ಕಾರ್ಯಪಾಲಕ ಅಭಿಯಂತರರು, ವಿಭಾಗ ಸಂಖೆ 6ರ ಚಿಕ್ಕಹೊನ್ನಕುಣಿ ಕಚೇರಿಯನ್ನು ರಾಯಚೂರಿನ ಯರಮರಸ್‌‍ ಕೆ.ಐ.ಎ.ಡಿ.ಬಿ. ವಸತಿ ಬಡಾವಣೆಗೆ ಸ್ಥಳಾಂತರಿಸಲಾಗಿದೆ.

ಸದರಿ ಕಚೇರಿಗೆ ಸಂಬAಧಿಸಿದ ಎಲ್ಲಾ ಪತ್ರ ವ್ಯವಹಾರಗಳನ್ನು ಕಾರ್ಯನಿರ್ವಾಹಕ ಅಭಿಯಂತರರು, ಕೃಭಾಜನಿನಿ, ನಾಬದಂಕಾ, ವಿಭಾಗ ಸಂ-6, ಕೆ.ಐ.ಎ.ಡಿ.ಬಿ ವಸತಿ ಬಡಾವಣೆ, ಯರಮರಸ್-584134 ತಾ|| ರಾಯಚೂರು ಜಿ|| ರಾಯಚೂರು ಇಲ್ಲಿಗೆ ಮಾಡಬಹುದಾಗಿದೆ ಎಂದು ಕೃಭಾಜನಿನಿ, ನಾಬದಂಕಾ, ವಿಭಾಗ ಸಂ-6ರ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.