ರಾಯಚೂರು ಅ. 17 (ಕರ್ನಾಟಕ ವಾರ್ತೆ): ರಾಯಚೂರು ಮಹಾನಗರ ಪಾಲಿಕೆಗೆ ಸಂಬAಧಿಸಿದ ನ್ಯಾಯಾಲಯದ ಪ್ರಕರಣಗಳ ನಿರ್ವಹಣೆಗಾಗಿ ಬೆಂಗಳೂರಿನಲ್ಲಿ ಸ್ವಂತ ಕಚೇರಿ ಹೊಂದಿರುವ ಒಬ್ಬ ಅನುಭವಿ ವಕೀಲರನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ಅರ್ಹ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರಿನಲ್ಲಿರುವ ವಿಶೇಷ ಭೂಕಬಳಿಕೆ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಲೋಕಾಯುಕ್ತ ಸಂಸ್ಥೆ ಹಾಗೂ ರಾಷ್ಟೀಯ ಹಸಿರು ನ್ಯಾಯಮಂಡಳಿ ಮುಂತಾದ ನ್ಯಾಯಾಲಯಗಳು ಮತ್ತು ಪ್ರಾಧಿಕಾರಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಮಹಾನಗರ ಪಾಲಿಕೆಯ ಪರವಾಗಿ ವಾದ ಮಂಡಿಸಲು ಹಾಗೂ ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅನುಭವವುಳ್ಳ ವಕೀಲರನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.
ಅರ್ಜಿದಾರರಿಗೆ ಇರಬೇಕಾದ ಅರ್ಹತೆಗಳು ಮತ್ತು ಷರತ್ತುಗಳು: ರಾಯಚೂರು ಮಹಾನಗರ ಪಾಲಿಕೆಯ ಪರವಾಗಿ ಬೆಂಗಳೂರಿನ ವಿವಿಧ ನ್ಯಾಯಾಲಯಗಳು, ನ್ಯಾಯಾಧಿಕರಣಗಳು ಹಾಗೂ ತನಿಖಾ ಸಂಸ್ಥೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ನಿರ್ವಹಿಸಲು ಒಬ್ಬ ಹಿರಿಯ ವಕೀಲರನ್ನು ನೇಮಿಸಿಕೊಳ್ಳಲು ತಾತ್ವಿಕ ಅನುಮೋದನೆ ನೀಡಲಾಗಿದೆ.
ಆಯ್ಕೆಯಾಗುವ ವಕೀಲರು ಬೆಂಗಳೂರಿನಲ್ಲಿ ಸ್ವಂತ ಕಚೇರಿ ಹೊಂದಿರತಕ್ಕದ್ದು.ಬೆAಗಳೂರಿನಲ್ಲಿ ಸ್ವಂತ ಕಚೇರಿ ಹೊಂದಿರಬೇಕು. ಕಚೇರಿಯ ವಿಳಾಸದ ದಾಖಲೆ ಸಲ್ಲಿಸಬೇಕು.
ಭೂ-ಕಬಳಿಕೆ, ನಾಗರಿಕ, ಕಾರ್ಮಿಕ, ಸ್ಥಳೀಯ ಸಂಸ್ಥೆಗಳ ಆಡಳಿತ ಹಾಗೂ ಕಾನೂನುಗಳಿಗೆ ಸಂಬAಧಿಸಿದ ಪ್ರಕರಣಗಳಲ್ಲಿ ಸಮರ್ಪಕ ಅನುಭವ ಹೊಂದಿರತಕ್ಕದ್ದು.
ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ, ರಚಿಸಲಾದ ಆಯ್ಕೆ ಸಮಿತಿಯ ಮೂಲಕ ಸಂದರ್ಶನ ನಡೆಸಿ, ಅರ್ಹತೆ, ಅನುಭವ, ಕಾರ್ಯನಿರ್ವಹಣಾ ಸಾಮರ್ಥ್ಯ ಹಾಗೂ ನ್ಯಾಯಾಲಯದ ಅನುಭವದ ಆಧಾರದ ಮೇಲೆ ಪಾರದರ್ಶಕವಾಗಿ ಅಂತಿಮ ಆಯ್ಕೆ ಪ್ರಕ್ರಿಯೆ ನಡೆಸತಕ್ಕದ್ದು.
ಆಯ್ಕೆಯಾಗುವ ಹಿರಿಯ ವಕೀಲರಿಗೆ ಮಾಸಿಕ ರೂ.20,000/- ರಿಂದ ರೂ.30,000/-ರವರೆಗೆ ಗೌರವಧನ ಪಾವತಿಸಲು ಅನುಮತಿ ನೀಡಲಾಗಿದೆ. ಗೌರವಧನದ ನಿಖರ ಮೊತ್ತವನ್ನು ವಕೀಲರ ಅನುಭವ, ಅರ್ಹತೆ ಮತ್ತು ಕಾರ್ಯವ್ಯಾಪ್ತಿಯನ್ನು ಪರಿಗಣಿಸಿ ನಿಗದಿಪಡಿಸತಕ್ಕದ್ದು.
ಪ್ರಕರಣಗಳ ನಿರ್ವಹಣೆಗೆ ಸಂಬAಧಿಸಿದ ನ್ಯಾಯಾಲಯ ಶುಲ್ಕ, ದಾಖಲೆಗಳ ತಯಾರಿಕೆ, ಪ್ರಯಾಣ ವೆಚ್ಚ ಹಾಗೂ ಇತರೆ ಅಗತ್ಯ ವೆಚ್ಚಗಳನ್ನು ರಾಯಚೂರು ಮಹಾನಗರ ಪಾಲಿಕೆಯ ನಿಧಿಯಿಂದ ಭರಿಸಲು ಅನುಮತಿ ನೀಡಲಾಗಿದೆ.
ಈ ನೇಮಕಾತಿಯು ಮೇಲ್ಕಂಡ ನ್ಯಾಯಾಲಯಗಳು ಮತ್ತುನ್ಯಾಯಾಧಿಕರಣಗಳಲ್ಲಿ ದಾಖಲಾಗಿರುವ ಹಾಗೂ ಮುಂದಿನ ದಿನಗಳಲ್ಲಿ ದಾಖಲಾಗುವ ಪ್ರಕರಣಗಳ ನಿರ್ವಹಣೆಗೆ ಮಾತ್ರ ಸೀಮಿತವಾಗಿರುತ್ತದೆ.
ಸದರಿ ನೇಮಕಾತಿಯು ರಾಜ್ಯ ಸರ್ಕಾರ, ನಗರಾಭಿವೃದ್ಧಿ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಕುರಿತು ಕಾಲಕಾಲಕ್ಕೆ ಹೊರಡಿಸುವ ಆದೇಶಗಳು, ಮಾರ್ಗಸೂಚಿಗಳು ಹಾಗೂ ನಿಯಮಾವಳಿಗಳಿಗೆ ಒಳಪಟ್ಟಿರುತ್ತದೆ. ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಮತ್ತು ಅರ್ಹ ವಕೀಲರು ತಮ್ಮ ಸಂಪೂರ್ಣ ವೃತ್ತಿಪರ ವಿವರಗಳು, ಕಾನೂನು ಪದವಿ ಪ್ರಮಾಣ ಪತ್ರ, ವಕೀಲರ ನೋಂದಣಿ ಪ್ರಮಾಣಪತ್ರ, ಅನುಭವದ ದಾಖಲೆಗಳು, ಬೆಂಗಳೂರಿನ ಕಚೇರಿಯ ವಿಳಾಸದ ದಾಖಲೆ ಹಾಗೂ ಈ ಹಿಂದೆ ನಿರ್ವಹಿಸಿದ ಪ್ರಮುಖ ಪ್ರಕರಣಗಳ ವಿವರಗಳೊಂದಿಗೆ ಅರ್ಜಿಯನ್ನು ಅಕ್ಟೋಬರ್ 23ರೊಳಗಾಗಿ ಆಯುಕ್ತರು, ರಾಯಚೂರು ಮಹಾನಗರ ಪಾಲಿಕೆ, ರಾಯಚೂರು ಇವರಿಗೆ ಸಲ್ಲಿಸತಕ್ಕದ್ದು.
ನಿಗದಿತ ದಿನಾಂಕದ ನಂತರ ಸ್ವೀಕತವಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ, ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ವಕೀಲರನ್ನು ಆಯ್ಕೆ ಮಾಡುವ ಹಕ್ಕನ್ನು ರಾಯಚೂರು ಮಹಾನಗರ ಪಾಲಿಕೆಯು ಕಾಯ್ದಿರಿಸಿಕೊಂಡಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



