ರಾಯಚೂರು: ಗೋವುಗಳ ಸಂರಕ್ಷಣೆ, ಪಾಲನೆ ಹಾಗೂ ಮೂಕಪ್ರಾಣಿಗಳ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುವ ಗೌ ಸಮ್ಮಾನ್ ಆವಾಹನ್ ಅಭಿಯಾನದ ರಾಯಚೂರು ಜಿಲ್ಲಾಧ್ಯಕ್ಷರಾಗಿ ಠಾಕೂರ್ ವಿನಯ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.

ಅಭಿಯಾನದ ಮುಖಂಡ ಸುರೇಶ್ ಪುರೋಹಿತ್ ಅವರು ಠಾಕೂರ್ ವಿನಯ್ ಸಿಂಗ್ ಅವರ ಮೇಲೆ ವಿಶ್ವಾಸವಿಟ್ಟು ಜಿಲ್ಲಾಧ್ಯಕ್ಷರ ಜವಾಬ್ದಾರಿ ವಹಿಸಿದ್ದಾರೆ. ತಮ್ಮನ್ನು ಈ ಹುದ್ದೆಗೆ ನೇಮಕ ಮಾಡಿರುವುದಕ್ಕೆ ವಿನಯ್ ಸಿಂಗ್ ಅವರು ಸುರೇಶ್ ಪುರೋಹಿತ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಠಾಕೂರ್ ವಿನಯ್ ಸಿಂಗ್, ಗೋವುಗಳ ರಕ್ಷಣೆ ಹಾಗೂ ಮೂಕಪ್ರಾಣಿಗಳ ಆರೈಕೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಜಿಲ್ಲಾದ್ಯಂತ ಗೋಸಂರಕ್ಷಣೆ ಮತ್ತು ಪ್ರಾಣಿಗಳ ಕಲ್ಯಾಣಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಗೋವುಗಳು ಸೇರಿದಂತೆ ಮೂಕಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಗಟ್ಟಲು ಹಾಗೂ ಸಂಕಷ್ಟದಲ್ಲಿರುವ ಪ್ರಾಣಿಗಳ ನೆರವಿಗೆ ಸಾರ್ವಜನಿಕರು ಮುಂದಾಗಬೇಕು. ಪ್ರಾಣಿಗಳ ಬಗ್ಗೆ ಕರುಣೆ ಮತ್ತು ಮಾನವೀಯತೆ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

‘ಜೈ ಗೋಮಾತಾ, ಗೋಮಾತೆಯನ್ನು ರಕ್ಷಿಸಿ, ಮೂಕಪ್ರಾಣಿಗಳ ಧ್ವನಿಯಾಗಿ, ಅವುಗಳ ನೆರವಿಗೆ ನಿಲ್ಲಿ’ ಎಂಬ ಸಂದೇಶದೊಂದಿಗೆ ಜಿಲ್ಲೆಯಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ಠಾಕೂರ್ ವಿನಯ್ ಸಿಂಗ್ ತಿಳಿಸಿದ್ದಾರೆ.