ಮಾನ್ವಿ: ಪಟ್ಟಣದ ಯಂಕಪ್ಪ ತಾತನ ಮಠದ ನಮಾಜಗೇರಿಗುಡ್ಡದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ದೊರೆ ಅವರು ಮಹರ್ಷಿ ವಾಲ್ಮೀಕಿ ಯುವಕರ ಸಂಘದ ನಾಮಫಲಕವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ತತ್ವಾದರ್ಶಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶಕವಾಗಿವೆ. ರಾಮಾಯಣ ಮಹಾಕಾವ್ಯದ ಮೂಲಕ ಸತ್ಯ, ಧರ್ಮ, ನ್ಯಾಯ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಸಾರಿದ ವಾಲ್ಮೀಕಿ ಅವರ ಚಿಂತನೆಗಳನ್ನು ಯುವಜನತೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಯುವಕರು ಸಂಘಟಿತರಾಗಿ ಸಮಾಜದ ಪ್ರಗತಿಗೆ ಶ್ರಮಿಸಬೇಕು. ಶಿಕ್ಷಣ, ಸಾಮಾಜಿಕ ಸಾಮರಸ್ಯ ಹಾಗೂ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ ದೊರೆ, ತಾಲೂಕು ಅಧ್ಯಕ್ಷ ಈರಣ್ಣ ಮರ್ಲಟ್ಟಿ ಪೋತ್ನಾಳ್, ನಗರ ಘಟಕದ ಅಧ್ಯಕ್ಷ ಎಚ್. ಮೌನೇಶ್ ಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಪಿ. ರವಿಕುಮಾರ್ ವಕೀಲರು, ರೈತ ಘಟಕದ ತಾಲೂಕು ಅಧ್ಯಕ್ಷ ಶರಣಪ್ಪಗೌಡ ಮದ್ಲಾಪುರ, ಪರಿಶಿಷ್ಟ ಪಂಗಡ ಘಟಕದ ತಾಲೂಕು ಅಧ್ಯಕ್ಷ ವಿಜಯ ನಾಯಕ ಕೊಟ್ನೇಕಲ್, ಹಿರಿಯ ಮುಖಂಡ ಮೌಲಾಸಾಬ್, ಪುರಸಭೆ ಮಾಜಿ ಸದಸ್ಯ ಬಾಷಾ ಸಾಬ್, ಎಚ್.ಡಿ. ಹನುಮಗೌಡ ನಾಯಕ, ಮೌನೇಶ್ ನಾಯಕ ಹೀರಾ, ಬಸವ ಹೊಸಮನಿ, ಶಿವಾನಂದ ನಾಯಕ, ಯಲ್ಲಪ್ಪ ನಾಯಕ, ಜ್ಞಾನದೀಪ, ನಾಗರಾಜ ಪೆರಿಕಲ್, ಸಂತೋಷ್ ಹೂಗಾರ್, ಮಲ್ಲನಗೌಡ ಸಂಗಾಪುರ, ನಾಗೇಶ, ಶಿವರಾಜ, ಹನುಮಂತ್ರಾಯ, ಉಪ್ಪಾರ್ ನಾಗರಾಜ, ನಾಗರಾಜ ನಾಯಕ, ಶಿವಾನಂದ ನಾಯಕ, ಸಂಜೀವ ನಾಯಕ ಸೇರಿದಂತೆ ಯಂಕಪ್ಪ ತಾತನ ಮಠದ ಯುವ ಗೆಳೆಯರ ಬಳಗದ ಸದಸ್ಯರು, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



