ರಾಯಚೂರು, ಸೆ.21: ತಂತ್ರಜ್ಞಾನ, ಸುರಕ್ಷತೆ ಮತ್ತು ಆರಾಮದಾಯಕ ಚಾಲನಾ ಅನುಭವವನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಉದ್ದೇಶದಿಂದ ರೂಪಿಸಲಾದ ನೂತನ 7 ಸೀಟರ್‌ ಕಿಯಾ ಸೊರೆಂಟೊ ಕಾರನ್ನು ನಗರದ ಕುಮಾರ್ ಕಿಯಾ ಶೋರೂಮ್‌ನಲ್ಲಿ ಅನಾವರಣಗೊಳಿಸಲಾಯಿತು.

ಸುಮಾರು ₹28 ಲಕ್ಷ ಎಕ್ಸ್‌ಶೋರೂಂ ಬೆಲೆಯ ಈ ಕಾರು ಕೆಂಪು, ಬಿಳಿ, ಕಪ್ಪು ಹಾಗೂ ಸಿಲ್ವರ್ ಸೇರಿದಂತೆ ಹಲವು ಆಕರ್ಷಕ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ವಿಶಿಷ್ಟ ಬಾಹ್ಯ ವಿನ್ಯಾಸದ ಜೊತೆಗೆ ಆಧುನಿಕ ಒಳಾಂಗಣ ಸೌಲಭ್ಯಗಳನ್ನು ಹೊಂದಿರುವ ಸೊರೆಂಟೊದಲ್ಲಿ 220 ಪವರ್‌ ಔಟ್‌ಲೆಟ್‌, 10 ಏರ್‌ಬ್ಯಾಗ್‌ಗಳು ಸೇರಿದಂತೆ ಪ್ರಯಾಣಿಕರ ಸುರಕ್ಷತೆಗೆ ಪೂರಕವಾದ ಹಲವು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

ವಿಶಾಲವಾದ ಒಳಾಂಗಣ, ಏಳು ಆಸನಗಳ ವ್ಯವಸ್ಥೆ, ಆರಾಮದಾಯಕ ಪ್ರಯಾಣಕ್ಕೆ ಅನುಕೂಲವಾಗುವ ವಿನ್ಯಾಸ ಹಾಗೂ ಸುಧಾರಿತ ತಂತ್ರಜ್ಞಾನ ಈ ಕಾರಿನ ಪ್ರಮುಖ ಆಕರ್ಷಣೆಗಳಾಗಿವೆ. ವಿಶೇಷವಾಗಿ ಕುಟುಂಬ ಸಮೇತ ದೂರದ ಪ್ರಯಾಣ ಮಾಡುವ ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಾಹನವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಶೋರೂಮ್‌ ಸಿಬ್ಬಂದಿ ಮಾಹಿತಿ ನೀಡಿದರು.

ಅನಾವರಣ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್‌ ಡಿವಿಷನ್‌ ಮ್ಯಾನೇಜರ್‌ ಸಾಧನ, ಚೀಫ್‌ ಮ್ಯಾನೇಜರ್‌ ಸುಪ್ರಿಯಾ ದೇಸಾಯಿ ಹಾಗೂ ಡಾ. ಸುರೇಂದ್ರ ಬಾಬು ಕೇಕ್‌ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬ್ರಾಂಚ್‌ ಮ್ಯಾನೇಜರ್‌ ರವಿದಾಸ್‌, ಜಿಎಂ ಸೇಲ್ಸ್‌ ಮ್ಯಾನೇಜರ್‌ ಮಾರ್ಟಿನ್‌, ಸೇಲ್ಸ್‌ ಮ್ಯಾನೇಜರ್‌ ಮಹೇಶ್‌ ಸೇರಿದಂತೆ ಕುಮಾರ್ ಕಿಯಾ ಶೋರೂಮ್‌ನ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.