ತುಂಗಾ ಬಿಂಬ/ಸಿರವಾರ: ಪಟ್ಟಣದಲ್ಲಿ ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮ ಸಮಾಜದ ವತಿಯಿಂದ ಗುರುವಾರ ಭಗವಾನ್ ಶ್ರೀ ವಿಶ್ವಕರ್ಮರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಪಿಡಬ್ಲ್ಯೂಡಿ ಕ್ಯಾಂಪ್‌ನ ಹನುಮಾನ ದೇವಸ್ಥಾನದಿಂದ ದೇವದುರ್ಗ ರಸ್ತೆಯ ಬಸವ ವೃತ್ತದವರೆಗೆ ಮೆರವಣಿಗೆ ಸಾಗಿತು. ಮಹಿಳೆಯರು ಕಳಸ ಹೊತ್ತು ಭಾಗವಹಿಸಿದ್ದು, ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ವಿಶ್ವಕರ್ಮ ಸಂಘದ ತಾಲೂಕು ಘಟಕದ ಅಧ್ಯಕ್ಷ ಪ್ರಭುಸ್ವಾಮಿ ಹೀರಾ, ಸಿದ್ದರಾಮೇಶ್ವರ ಪತ್ತಾರ, ಕಾಳಪ್ಪ ಕಮ್ಮಾರ, ಬಸವರಾಜ, ಮಲ್ಲಿಕಾರ್ಜುನ ಬೀರನೂರು, ವರದರಾಜ, ಶಿವಕುಮಾರ, ಜಗದೀಶ ಬಡಿಗೇರ್, ಸುರೇಶ ಅರಕೇರಿ, ಶರಣಬಸವ ಬಡಿಗೇರಿ, ಗಂಗಾಧರ ಬಡಿಗೇರಿ, ಮೌನೇಶ ಜಾಡಲದಿನ್ನಿ, ವಿರೇಶ ಗವಿಗಟ್ಟ, ಮೌನೇಶ ಮಾನ್ವಿ, ಕೃಷ್ಣ ಆಚಾರ್ಯ ಸೇರಿದಂತೆ ಸಮಾಜದ ಮುಖಂಡರು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.