ಲಿಂಗಸುಗೂರುಸೆ. 30: ರಾಯಚೂರು ಜಿಲ್ಲೆಯ ಲಿಂಗಸುಗೂರು ಜೆಸ್ಕಾಂ ಕರ‍್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯ ಲಿಂಗಸುಗೂರು ನಗರದ ಹೊಸ ಲಿಂಕ್ ಲೈನ್ ಕಾಮಗಾರಿ ಹಮ್ಮಿಕೊಂಡ ಪ್ರಯುಕ್ತ ಅಕ್ಟೋಬರ್ 01 ಹಾಗೂ 02ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸರ‍್ವಜನಿಕರು ಸಹಕರಿಸುವಂತೆ ಕೋರಲಾಗಿದೆ. ಅಕ್ಟೋಬರ್ 01ರ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಕರಡಕಲ್ ಫೀಡರ್ ವ್ಯಾಪ್ತಿಯ ಕರಡಕಲ್, ಕಸಬಾ ಲಿಂಗಸುಗೂರು, ಹುಲಿಗುಡ್ಡ, ಪಿಂಚಣಿಪುರ, ವೆಂಕಟೇಶ್ವರ ಕಾಲೋನಿ, ರಾಘವೇಂದ್ರ ಮಠ, ಗಡಿಯಾರ ಚೌಕ, ಸಂತೆ ಬಜಾರ, ಗೌಳಿಪುರ, ರ‍್ಕಾರಿ ಆಸ್ಪತ್ರೆ, ಬಸ್ ನಿಲ್ದಾಣದ ಏರಿಯಾಗಳು, ಎಪಿಎಂಸಿ ಮರ‍್ಕೇಟ್, ಎಸ್.ಬಿ.ಹೆಚ್. ಕಾಲೋನಿ, ಕರ‍್ಟ ಏರಿಯಾ, ಕೆಹೆಚ್‌ಬಿ ಕಾಲೋನಿ, ಎಸಿ ಆಫೀಸ್, ಮಿನಿ ವಿಧಾನ ಸೌಧ ಹಾಗೂ ಅಕ್ಟೋಬರ್ 02ರ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಲಿಂಗಸುಗೂರು ನಗರ ಫೀಡರ್ ವ್ಯಾಪ್ತಿಯ ಬಸವ ಸಾಗರ ಕ್ರಾಸ್, ಮೇಟಿ ಪೆಟ್ರೋಲ್ ಬಂಕ್, ಆಶ್ರಯ ಕಾಲೋನಿ, ವಿಸಿಬಿ ಕಾಲೇಜ್, ರಾಯಚೂರು ರೋಡ್, ಶಾಂಭವಿ ನಗರ, ವಿದ್ಯುತ್ ನಗರ, ಸಾಯಿ ಟೆಂಪಲ್, ಬೆಂಗಳೂರು ಬೈಪಾಸ್ ರಸ್ತೆ, ಎಂಪಾಯರ್ ಸಿನೆಮಾ, ಲಕ್ಷಿö್ಮÃ ದೇವಸ್ಥಾನ ಏರಿಯಾ, ಡಾರ‍್ಸ ಕಾಲೋನಿ, ಭಗೀರಥ ನಗರ, ಅಯ್ಯಪಸ್ವಾಮಿ ದೇವಸ್ಥಾನ ಏರಿಯಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ವಿದ್ಯುತ್ ನಿಲುಗಡೆಯ ಕಾಲಾವದಿಯಲ್ಲಿ ಇಲಾಖೆಯ ಅನುಮತಿ ಇಲ್ಲದೇ ಯಾವುದೇ ವಿದ್ಯುತ್ ಕೆಲಸ/ಕಾಮಗಾರಿಗಳನ್ನು ಸರ‍್ವಜನಿಕರು ಕೈಗೊಳ್ಳಬಾರದೆಂದು ಲಿಂಗಸುಗೂರು ಜೆಸ್ಕಾಂ ಕರ‍್ಯ ಮತ್ತು ಪಾಲನೆ ವಿಭಾಗದ ಸಹಾಯಕ ಕರ‍್ಯನರ‍್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.