ದೇವದುರ್ಗ, ಅ.11: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಆದಾಯ ಮತ್ತು ಅರ್ಹತಾ ವಿದ್ಯಾರ್ಥಿವೇತನ (ಎನ್ಎಂಎಂಎಸ್) ಪರೀಕ್ಷೆಗೆ ಸಿದ್ಧತೆ ನಡೆಸಲು ನೆರವಾಗುವ ಉದ್ದೇಶದಿಂದ ಬೆಂಗಳೂರಿನ ಡ್ರೀಮ್ ಸ್ಕೂಲ್ ಫೌಂಡೇಶನ್ ವತಿಯಿಂದ ಆಯ್ಕೆಯಾದ 33 ವಿದ್ಯಾರ್ಥಿಗಳಿಗೆ ಭಾನುವಾರ ಪಟ್ಟಣದ ಎಸ್ಕೆಎಂ ಕಾಲೇಜಿನಲ್ಲಿ ಟ್ಯಾಬ್ಗಳನ್ನು ವಿತರಿಸಲಾಯಿತು.
ಪ್ರಸಕ್ತ ಸಾಲಿನಿಂದ ದೇವದುರ್ಗ ಹಾಗೂ ಅರಕೇರಾ ತಾಲೂಕುಗಳ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಡಿಜಿಟಲ್ ಕಲಿಕಾ ಸಾಮಗ್ರಿಗಳ ಮೂಲಕ ಪರೀಕ್ಷೆಗೆ ಪರಿಣಾಮಕಾರಿಯಾಗಿ ಸಿದ್ಧತೆ ನಡೆಸಿ, ವಿದ್ಯಾರ್ಥಿವೇತನ ಪಡೆಯಲು ಅನುಕೂಲ ಕಲ್ಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಪಾಲಕರೊಂದಿಗೆ ಭಾಗವಹಿಸಿದ್ದರು. ಇಸಿಒ ಶರಣಪ್ಪ, ದೇವದುರ್ಗ ಗೂಗಲ್ ಕ್ಲಸ್ಟರ್ನ ಅಂಬಣ್ಣ, ಎಸ್ಕೆಎಂ ಶಾಲೆಯ ಮುಖ್ಯಗುರು ಬಸವರಾಜ ಯಟಗಲ್, ಸಗಾಯ್ ರಾಜ್, ಉಮೇಶ್ ಎಸ್., ಜಗದೀಶ್ ಎನ್. ಹಾಗೂ ಅಮ್ಜದ್ ಪಾಷ ಉಪಸ್ಥಿತರಿದ್ದರು.



