ಜನನ: 01-06-1955 | ಮರಣ: 02-10-1986
ನಲವತ್ತು ವಸಂತಗಳು ಉರುಳಿದವು, ನೀವು ಮಣ್ಣ ಸೇರಿ, ಆದರೂ ನಿಮ್ಮ ಅಕ್ಷರ ಸಾಯಲಿಲ್ಲ, ನಮ್ಮ ಎದೆಯೊಳಗೆ ಬೆಳಗುತಿದೆ ಇಂದಿಗೂ!
ವ್ಯಕ್ತಿಯಿಂದ ನೀನು BSNL ನೌಕರ, ಪ್ರವೃತ್ತಿಯಿಂದ ದಲಿತರ ಕವಿ, ಬಂಡಾಯದ ಬೆಂಕಿಯ ಸಾಹಿತಿ ನೀವು, ಶೋಷಿತರ ಧ್ವನಿಯೇ ನಿಮ್ಮ ಕವನ !
ದ.ಸಂ.ಸದ ಸಂಸ್ಥಾಪಕ ಸದಸ್ಯ ನೀವು, ರಾಜಿಯೆಂಬ ಪದವೇ ನಿಮ್ಮಲ್ಲಿ ಇಲ್ಲ, ಅಂಬೇಡ್ಕರ್ ಸಿದ್ಧಾಂತದ ಪಾಲಕ ನೀವು, ನಿಮ್ಮ ನಡೆ ನೇರ, ನುಡಿ ದಿಟ್ಟ, ನಿರಂತರ!
ಕೃಷ್ಣಪ್ಪನವರ ಹೆಜ್ಜೆಯ ಹಿಂದೆ ಹೆಜ್ಜೆ, ಬರಗೂರು, ಸಿದ್ದಲಿಂಗಯ್ಯನ ಜೊತೆ ಹೆಗಲು, ದೇವನೂರರ ಜೊತೆ ಒಡನಾಡಿ ನೀವು, ನಾಡಿನ ಬಂಡಾಯಕ್ಕೆ ನೀವೇ ಚಿಲುಮೆ!
ನೇರ ನಡೆ ನುಡಿಯಿಂದ ಎಲ್ಲರ ಪ್ರೀತಿ ಗಳಿಸಿ, ನುಡಿದಂತೆ ನಡೆದು ತೋರಿಸಿದ ಧೀರ ನೀವು, ರಾಯಚೂರಿನ ಮಣ್ಣಿನ ಅನರ್ಘ್ಯ ರತ್ನ ನೀವು, ದಲಿತ ಲೋಕದ ಬೆಳಕಿನ ದೀಪ ನೀವು!
ತತ್ವ ಸಿದ್ಧಾಂತಕೆ ಮಾರಾಟವಾಗದ ಮನಸ್ಸು ನಿಮ್ಮದು, ರಾಜಿಯಾಗದ ಕೆಚ್ಚೆದೆಯ ಹೋರಾಟ ನಿಮ್ಮದು, ಸತ್ತರೂ ಸಾಯದ ನಿಷ್ಕಳಂಕ ವ್ಯಕ್ತಿತ್ವ ನಿಮ್ಮದು, ಎಂದೆಂದಿಗೂ ಅಮರವಾದ ಕೀರ್ತಿ ನಿಮ್ಮದು!
ಮತ್ತೆ ಮತ್ತೆ ಹುಟ್ಟಿ ಬಾ ಕವಿಯೇ... ಅಕ್ಷರ ರೂಪದಲ್ಲಿ, ಈ ನಾಡಿನ ಬರಿದಾದ ಎದೆಯಲ್ಲಿ!
ಬಸವರಾಜ ಬ್ಯಾಗವಾಟ ಪ್ರಧಾನ ಕಾರ್ಯದರ್ಶಿ ದಲಿತ ಕವಿ ಬೋಳಬಂಡೆಪ್ಪ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಾಯಚೂರು



