ಲಿಂಗಸುಗೂರು: ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 6 ಜಿಲ್ಲಾ ಪಂಚಾಯಿತಿ ಹಾಗೂ 22 ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಸಂಬಂಧಿಸಿದ ಕರಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ವಿವಿಧ ವರ್ಗಗಳಿಗೆ ಕ್ಷೇತ್ರವಾರು ಮೀಸಲಾತಿ ನಿಗದಿಪಡಿಸಲಾಗಿದೆ.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನಾಗಲಾಪುರ ಕ್ಷೇತ್ರವನ್ನು ಸಾಮಾನ್ಯ ಮಹಿಳೆ, ಮಾವಿನಭಾವಿ ಸಾಮಾನ್ಯ, ಆನೆಹೊಸೂರು ಪರಿಶಿಷ್ಟ ಜಾತಿ ಮಹಿಳೆ, ದೇವರಭೂಪುರ ಸಾಮಾನ್ಯ, ಗುರುಗುಂಟಾ ಪರಿಶಿಷ್ಟ ಪಂಗಡ ಮಹಿಳೆ ಹಾಗೂ ಗೆಜ್ಜಲಗಟ್ಟಾ ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ.
ಅದೇ ರೀತಿ ತಾಲೂಕು ಪಂಚಾಯಿತಿ ವ್ಯಾಪ್ತಿಯ 22 ಕ್ಷೇತ್ರಗಳಿಗೂ ಕರಡು ಮೀಸಲಾತಿ ಪ್ರಕಟಿಸಲಾಗಿದೆ. ನಾಗಲಾಪುರ ಸಾಮಾನ್ಯ ಮಹಿಳೆ, ಹೂನೂರು ಸಾಮಾನ್ಯ, ಆಮದಿಹಾಳ ಪರಿಶಿಷ್ಟ ಜಾತಿ ಮಹಿಳೆ, ಬನ್ನಿಗೋಳ ಸಾಮಾನ್ಯ, ಮಾವಿನಭಾವಿ ಸಾಮಾನ್ಯ, ಖೈರವಾಡಗಿ ಪರಿಶಿಷ್ಟ ಜಾತಿ ಮಹಿಳೆ, ನಾಗರಹಾಳ ಸಾಮಾನ್ಯ ಮಹಿಳೆ, ನರಕಲದಿನ್ನಿ ಸಾಮಾನ್ಯ ಮಹಿಳೆ ಹಾಗೂ ಆನೆಹೊಸೂರು ಕ್ಷೇತ್ರವನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.
ಈಚನಾಳ ಪರಿಶಿಷ್ಟ ಜಾತಿ, ರೋಡಲಬಂಡಾ (ಯು) ಸಾಮಾನ್ಯ, ಗೋರೆಬಾಳ ಪರಿಶಿಷ್ಟ ಜಾತಿ ಮಹಿಳೆ, ಪೂಲಭಾವಿ ಪರಿಶಿಷ್ಟ ಜಾತಿ, ಗುಂತಗೋಳ ಪರಿಶಿಷ್ಟ ಪಂಗಡ ಮಹಿಳೆ, ಹೊನ್ನಳ್ಳಿ ಪರಿಶಿಷ್ಟ ಪಂಗಡ, ಗುರುಗುಂಟಾ ಪರಿಶಿಷ್ಟ ಪಂಗಡ ಮಹಿಳೆ, ಪೈದೊಡ್ಡಿ ಪರಿಶಿಷ್ಟ ಪಂಗಡ ಹಾಗೂ ಗೌಡೂರು ಕ್ಷೇತ್ರವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿದೆ.
ಗೆಜ್ಜಲಗಟ್ಟಾ ಕ್ಷೇತ್ರವನ್ನು ಹಿಂದುಳಿದ ವರ್ಗ 'ಅ' ಮಹಿಳೆ, ಅನ್ವರಿ ಸಾಮಾನ್ಯ, ಕೋಠಾ ಸಾಮಾನ್ಯ ಹಾಗೂ ರೋಡಲಬಂಡಾ (ತ) ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.
ತಾಲೂಕು ಪಂಚಾಯಿತಿಯ ಒಟ್ಟು 22 ಕ್ಷೇತ್ರಗಳ ಪೈಕಿ ಸಾಮಾನ್ಯ ವರ್ಗಕ್ಕೆ 7, ಸಾಮಾನ್ಯ ಮಹಿಳೆಯರಿಗೆ 4, ಪರಿಶಿಷ್ಟ ಜಾತಿ ಮಹಿಳೆಯರಿಗೆ 3, ಪರಿಶಿಷ್ಟ ಜಾತಿಗೆ 2, ಪರಿಶಿಷ್ಟ ಪಂಗಡ ಮಹಿಳೆಯರಿಗೆ 3, ಪರಿಶಿಷ್ಟ ಪಂಗಡಕ್ಕೆ 2 ಹಾಗೂ ಹಿಂದುಳಿದ ವರ್ಗ 'ಅ' ಮಹಿಳೆಗೆ ಒಂದು ಕ್ಷೇತ್ರ ಮೀಸಲಾಗಿದೆ.
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ರಾಜಕೀಯ ವಲಯದಲ್ಲಿ ಮುಂದಿನ ಚುನಾವಣೆಯ ಸಿದ್ಧತೆ ಹಾಗೂ ಕ್ಷೇತ್ರವಾರು ಮೀಸಲಾತಿ ಕುರಿತು ಚರ್ಚೆ ಆರಂಭವಾಗಿದೆ.



