ಲಿಂಗಸುಗೂರು: ಜಿಲ್ಲೆಯ ಲಿಂಗಸುಗೂರು ಪಟ್ಣಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ರಾಯಚೂರು ಹಾಗೂ ತಾಲೂಕು ಆಡಳಿತ ಲಿಂಗಸುಗೂರು ಇವರ ವತಿಯಿಂದ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಾರ್ವಜನಿಕರಿಂದ ಒಟ್ಟಾರೆಯಾಗಿ 89 ಅಹವಾಲುಗಳು ಸಲ್ಲಿಕೆಯಾಗಿವೆ ಎಂದು ಲಿಂಗಸುಗೂರು ತಹಶೀಲ್ದಾರ್ ಸತ್ಯಮ್ಮ ಅವರು ತಿಳಿಸಿದ್ದಾರೆ. ಕಂದಾಯ ಇಲಾಖೆ ಲಿಂಗಸುಗೂರು-26, ಪುರಸಭೆ ಲಿಂಗಸುಗೂರು-19, ತಾಲೂಕ ಪಂಚಾಯತ್ ಲಿಂಗಸುಗೂರು-17, ಡಿ.ಪಿ.ಎ.ಆರ್-05, ಅಂಬೇಡ್ಕರ ಅಭಿವೃದ್ಧಿ ನಿಗಮ-02, ಕೃಷಿ ಇಲಾಖೆ ಲಿಂಗಸುಗೂರು-03, ಜೆ.ಸ್ಕಾA ಲಿಂಗಸುಗೂರು-07, ಕ್ಷೇತ್ರ ಶಿಕ್ಷಣಾಧಿಕಾರಿಗಳು ಲಿಂಗಸುಗೂರು-01, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು-04, ಅರಣ್ಯ ಇಲಾಖೆ ಲಿಂಗಸುಗೂರು-02, ಆರೋಗ್ಯ ಇಲಾಖೆ ಲಿಂಗಸುಗೂರು-01, ಕೆಬಿಜೆಎನ್‌ಎಲ್ ಲಿಂಗಸುಗೂರು-01 ಹಾಗೂ ಸಣ್ಣ ನೀರಾವರಿ ಇಲಾಖೆ ಲಿಂಗಸುಗೂರು-01 ಸೇರಿದಂತೆ ಒಟ್ಟು 89 ಅರ್ಜಿಗಳು ಸ್ವೀಕೃತವಾಗಿವೆ ಎಂದು ಲಿಂಗಸುಗೂರು ತಹಶೀಲ್ದಾರರು ಮಾಹಿತಿ ನೀಡಿದರು.