ಮಾನ್ವಿ: ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಂಘದ ಅಧ್ಯಕ್ಷರಾಗಿ ಡಾ. ಬಸವರಾಜ್ ಸುಂಕೇಶ್ವರ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಬಸವರಾಜ್ ಕರಡಿಗುಡ್ಡ ಹಾಗೂ ಗೌರವಾಧ್ಯಕ್ಷರಾಗಿ ಡಾ. ಚೆನ್ನಬಸಪ್ಪ ಮಲ್ಕಂದಿನ್ನಿ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಚಂದ್ರಶೇಖರ ಹೆಳವರ್ ಮತ್ತು ಶಾರದಮ್ಮ, ಖಜಾಂಚಿಯಾಗಿ ಶರಣಪ್ಪ ಸಾಸಲಮರಿ, ಸಂಘಟನಾ ಕಾರ್ಯದರ್ಶಿಗಳಾಗಿ ರಾಜೇಶ್ ಗೋರ್ಕಲ್ ಮತ್ತು ಹುಸೇನ್ ಬಾಷಾ ಹಾಗೂ ಸಹ ಕಾರ್ಯದರ್ಶಿಗಳಾಗಿ ಡಾ. ಸಚಿನ್ ಹುಗ್ಗಿ ಮತ್ತು ಯಮನೂರಪ್ಪ ಬಾಲಯ್ಯ ನಾಯಕ್ ಕರಡಿಗುಡ್ಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳು ಅತಿಥಿ ಉಪನ್ಯಾಸಕರ ಸಮಸ್ಯೆಗಳು, ಬೇಡಿಕೆಗಳು ಹಾಗೂ ಹಿತಾಸಕ್ತಿಗಳ ಪರವಾಗಿ ಸಂಘಟಿತವಾಗಿ ಕಾರ್ಯನಿರ್ವಹಿಸುವ ಮೂಲಕ ಸಂಘವನ್ನು ಮತ್ತಷ್ಟು ಬಲಪಡಿಸುವ ಆಶಯ ವ್ಯಕ್ತಪಡಿಸಿದರು.

ಆಯ್ಕೆ ಪ್ರಕ್ರಿಯೆಯಲ್ಲಿ ಕಾಲೇಜಿನ ಉಪನ್ಯಾಸಕರಾದ ಬಿಲಾಲ್, ದೇವೇಂದ್ರಪ್ಪ ಕರಡಿಗುಡ್ಡ, ದೈಹಿಕ ಶಿಕ್ಷಣ ಸಂಯೋಜಕ ನರಸಪ್ಪ ಸೇರಿದಂತೆ ಕಾಲೇಜಿನ ಎಲ್ಲ ಅತಿಥಿ ಉಪನ್ಯಾಸಕರು ಹಾಜರಿದ್ದರು.