ಅಭಿವೃದ್ಧಿ ಹೊಂದಿದ ದೇಶಗಳು ಮಹಿಳಾ ಸಬಲೀಕರಣ ಹಾಗೂ ಮಕ್ಕಳ ಮತ್ತು ವೃದ್ಧರ ಕಲ್ಯಾಣ ಕಾರ್ಯಕ್ರಮಗಳಿಂದ ಹಾಗೂ ವಲಸೆನೀತಿಗಳ ಉತ್ತೇಜನದಿಂದ, ಇದನ್ನು ಸಾಧಿಸುವ ಮೂಲಮಂತ್ರ ವಾಗಿಸಿಕೊಂಡಿವೆ.
ಭಾರತದಲ್ಲಿ ಜನಸಂಖ್ಯಾ ಫಲವತ್ತತೆ ದರದಲ್ಲಿ ಪ್ರಾದೇಶಿಕ ವೈವಿಧ್ಯತೆ ಕಂಡುಬರುತ್ತದೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ರಾಜಸ್ಥಾನದಂತಹ ಉತ್ತರ ಭಾರತದ ರಾಜ್ಯಗಳಲ್ಲಿ ಫಲವತ್ತತೆ ದರ ಇನ್ನೂ ಹೆಚ್ಚಿದ್ದು, ಜನಸಂಖ್ಯಾ ಬೆಳವಣಿಗೆ ವೇಗವಾಗಿದೆ. ಇದಕ್ಕೆ ವಿರುದ್ಧವಾಗಿ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಮತ್ತು ಜಮ್ಮು-ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಫಲವತ್ತತೆ ದರ ಬದಲಿ ಮಟ್ಟಕ್ಕಿಂತ (2.1) ಕಡಿಮೆಯಿದೆ. ಪಂಜಾಬ್, ಹರಿಯಾಣ ಮತ್ತು ಗುಜರಾತ್ನಲ್ಲೂ ಸಹ ಫಲವತ್ತತೆ ದರ ಕಡಿಮೆಯಾಗುತ್ತಿದೆ. ಕರ್ನಾಟಕದಲ್ಲೂ ಇದೇ ರೀತಿಯ ಅಸಮಾನತೆ ಕಂಡುಬರುತ್ತದೆ. ಉತ್ತರ ಕರ್ನಾಟಕದ ಯಾದಗಿರಿ, ರಾಯಚೂರು, ಕಲಬುರ್ಗಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಜನಸಂಖ್ಯಾ ಬೆಳವಣಿಗೆ ದರ ಹೆಚ್ಚಾಗಿದ್ದು, ಫಲವತ್ತತೆ ದರ 2.0–2.4 ರ ನಡುವೆ ಇದೆ.
ಇದಕ್ಕೆ ಕಾರಣಗಳೆಂದರೆ: ಮಹಿಳಾ ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಕೊರತೆ,ಆರೋಗ್ಯ ಸೇವೆಗಳ ಅಲಭ್ಯತೆ ಮತ್ತು ಸಾಮಾಜಿಕ ಅರಿವಿನ ಕೊರತೆ ಇರುತ್ತದೆ. ಮತ್ತೊಂದೆಡೆ, ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಫಲವತ್ತತೆ ದರ 1.6–1.8 ಕ್ಕೆ ಇಳಿದಿದೆ.
ಇಲ್ಲಿ ನಗರೀಕರಣ, ಮಹಿಳಾ ಸಬಲೀಕರಣ ಮತ್ತು ಉತ್ತಮ ಆರೋಗ್ಯ ಸೇವೆಗಳು ಕಡಿಮೆ ಫಲವತ್ತತೆಗೆ ಕಾರಣವಾಗಿವೆ.
ಮುಂದುವರಿದ ದೇಶಗಳು ಜನಸಂಖ್ಯ ನಿಯಂತ್ರಣ ಕ್ರಮಗಳಿಗಿಂತ ಅಭಿವೃದ್ಧಿಯಿಂದ ಉಂಟಾದ ಫಲವತ್ತತೆ ಇಳಿಕೆ ಕಂಡಿವೆ.
ಈ ವಿಧಾನ ಅನುಸರಿಸುವುದು ನಮ್ಮ ರಾಜ್ಯಕ್ಕೆ ಹಾಗೂ ದೇಶಕ್ಕೆ ಅತಿ ಸೂಕ್ತ. ಈ ಪ್ರಾದೇಶಿಕ ಅಸಮಾನತೆಯನ್ನು ನಿರ್ವಹಿಸಲು ಭಾರತ ಮತ್ತು ಕರ್ನಾಟಕ ಸರ್ಕಾರಗಳು ವಿಭಿನ್ನ ತ್ರಗಾರಿಕೆಗಳನ್ನು ಅಳವಡಿಸಿಕೊಳ್ಳಬೇಕು. ಹೆಚ್ಚು ಫಲವತ್ತತೆ ಇರುವ ಪ್ರದೇಶಗಳಲ್ಲಿ ಮಹಿಳಾ ಶಿಕ್ಷಣ, ಆರೋಗ್ಯ ಸೇವೆಗಳು, ಗ್ರಾಮೀಣ ಡಿಜಿಟಲ್ ಸೇವೆಗಳು, ನೀರು ಮತ್ತು ಕೃಷಿ ಯೋಜನೆಗಳು, ಶಾಲೆಗಳಲ್ಲಿ ಮಧ್ಯಾನದ ಉಪಹಾರ ಯೋಜನೆ, ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಳ, ಆಶಾ ಕಾರ್ಯಕರ್ತೆಯರ ಸದ್ಬಳಕೆ, ಮಾತೃತ್ವ ರಜೆ, ಮಕ್ಕಳ ಪಾಲನಾ ಸೌಲಭ್ಯ, ಮಹಿಳೆಯರು ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನ ಕಾಯ್ದುಕೊಳ್ಳಲು, ಸರಕಾರಿ ಹಾಗೂ ಖಾಸಗಿವಲಯಗಳಲ್ಲಿ ಸೌಲಭ್ಯಗಳು, ಚಿಕ್ಕ ಕುಟುಂಬ ಗಳಿಗೆ ಪ್ರೋತ್ಸಾಹ, ಎರಡು ಮಕ್ಕಳಿರುವ ಕುಟುಂಬ ಗಳಿಗೆ ಶಿಕ್ಷಣ, ಆರೋಗ್ಯ,ವಸತಿ ಮತ್ತು ತೆರಿಗೆ ಪ್ರೋತ್ಸಾಹ ಗಳು, ವಿಶ್ವ ಹಾಗೂ ವೃದ್ಧರ ಪಿಂಚಣಿ ಯೋಜನೆ, ಆರೋಗ್ಯ ,ಶಿಕ್ಷಣ, ಕುಟುಂಬ ಯೋಜನೆಗಳ ಯಶಸ್ವಿ ನಿರ್ವಹಣೆ, ದೀರ್ಘಕಾಲಿಕ ವಿಮೆ ಯೋಜನೆ, ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಗಳು ಇದರ ಅನುಷ್ಠಾನದಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವಿಕೆ, ಮಹಿಳಾ ಸುರಕ್ಷತೆ, ಆರೋಗ್ಯ ವಿಮೆ, ಮತ್ತು ಕುಟುಂಬ ಯೋಜನಾ ಕಾರ್ಯಕ್ರಮಗಳನ್ನು ಕಾರ್ಯಗತ ಗೊಳಿಸುವುದು, ಸ್ವಸಹಾಯ ಗುಂಪುಗಳಿಗೆ ಹೆಚ್ಚು ಸಾಲ, ಮಾರುಕಟ್ಟೆ ವ್ಯವಸ್ಥೆ ತೀವ್ರಗೊಳಿಸಬೇಕು.
ವಿವಾಹ ವಿಳಂಬ, ಸಾರಿಗೆ ವ್ಯವಸ್ಥೆ ಸುಧಾರಣೆ, ಉದ್ಯೋಗಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ೫೦ ಕ್ಕೆ ಏರಿಕೆ, ಕುಟುಂಬ ಯೋಜನೆಯಲ್ಲಿ ಪುರುಷರ ಭಾಗವಹಿಸುವಿಕೆ, ನಗರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಬೇರೆ ಹೊಸ ನಗರಗಳನ್ನು ಅಭಿವೃದ್ಧಿ ಪಡಿಸುವುದು, ಮಕ್ಕಳ ಮರಣ ಪ್ರಮಾಣ ಇಳಿಕೆ, ಅವಶ್ಯವಾಗಿರುತ್ತದೆ.
ಇದಲ್ಲದೆ, ಬೇರೆ ದೇಶಗಳಿಗೆ ವಲಸೆ ಹೋಗುವುದನ್ನು ಉತ್ತೇಜಿಸಬೇಕು, ಕಡಿಮೆ ಫಲವತ್ತತೆ ಇರುವ ಪ್ರದೇಶಗಳಲ್ಲಿ ವೃದ್ಧರ ಆರೈಕೆ ಪ್ರಮುಖವಾಗಿರುತ್ತದೆ. ಪಿಂಚಣಿ ವ್ಯವಸ್ಥೆ ಮತ್ತು ಹಿರಿಯರ ಸಾಮಾಜಿಕ ಸೇರ್ಪಡೆಗೆ ಒತ್ತು ನೀಡಬೇಕು.
ಈ ಸಮತೋಲಿತ ವಿಧಾನವು ಜನಸಂಖ್ಯಾ ಸ್ಫೋಟ ಅಥವಾ ಕುಸಿತ ಎರಡನ್ನೂ ತಪ್ಪಿಸಿ, ಸಮೃದ್ಧ ಭವಿಷ್ಯ ನಿರ್ಮಿಸಲು ಸಹಾಯ ಮಾಡುತ್ತದೆ.
ವೃದ್ಧರ ಆರೈಕೆಯಲ್ಲಿ,ವೃದ್ಧರ ಪಿಂಚಣಿ, ವೃದ್ಧರ ಪಾಲನೆ, ಆರೋಗ್ಯ ರಕ್ಷಣೆ, ಕೌಶಲ್ಯ ವ್ಯವಸ್ಥೆ ಗಳ ಅಭಿವೃದ್ಧಿ ಪಡಿಸಬೇಕು.
ವೃದ್ಧರ ಕ್ಲಿನಿಕ್, ಮನೆಮನೆಗೆ ಆರೋಗ್ಯ ಸೇವೆ, ದೀರ್ಘ ಕಾಲೀನ ರೋಗಗಳಿಗೆ ನಿರ್ವಹಣಾ ಘಟಕಗಳು, ಕಡಿಮೆ ವೆಚ್ಚದ ಔಷಧಿ ಹಾಗೂ ತಪಾಸಣೆ, ದೀರ್ಘ ಕಾಲಿನ ಆರೈಕೆ, ದಿನದ ಆರೈಕೆ, ಮನೆಯಲ್ಲಿ ಆರೈಕೆ, ಮಾನಸಿಕ ಆರೋಗ್ಯದ ಬೆಂಬಲ, ವೃದ್ಧರ ಖಿನ್ನತೆ, ಏಕಾಂಗಿತನ, ಜ್ಞಾಪಕ ಶಕ್ತಿ ಸಮಸ್ಯೆಗಳಿಗೆ ಆರೈಕೆ ಹಾಗೂ ಸಮುದಾಯ ಮಟ್ಟದ ಕೌನ್ಸೆಲಿಂಗ್, ತಜ್ಞರ ಸೇವೆ ಗಳು, ಅರ್ಹ ವೃದ್ಧರಿಗೆ ಭಾಗಶಃ ಉದ್ಯೋಗ, ಸಲಹೆ ಗಾರಿಕೆ,ಮಾರ್ಗದರ್ಶನ ಅವಕಾಶಗಳನ್ನು ಸೃಷ್ಟಿಸುವುದು, ತಂತ್ರ ಜ್ಞಾನ ಸಬಲೀಕರಣ, ತುರ್ತು ಸಂಪರ್ಕ ಸಾಧನಗಳ ಬಳಸಿಕೊಳ್ಳುವ ತರಬೇತಿ, ವೃದ್ಧ ಸ್ನೇಹಿ ನಗರಗಳ ನಿರ್ಮಾಣ, ಸಾರಿಗೆ, ಸಾರ್ವಜನಿಕ ಸೇವೆಗಳಲ್ಲಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ, ಪಾರ್ಕುಗಳಲ್ಲಿ, ಅನುಕೂಲಗಳ ವಿನ್ಯಾಸ, ವಿಶ್ರಾಂತಿ ತಾಣಗಳು, ಪ್ರವಾಸದ ವ್ಯವಸ್ಥೆ, ಎಸ್ಕಲೇಟರ ವ್ಯವಸ್ಥೆ, ಲಿಫ್ಟ್ ವ್ಯವಸ್ಥೆ, ಸ್ವಯಂ ಸೇವಾ ಸಂಘಗಳಲ್ಲಿ ಬಳಸಿಕೊಳ್ಳುವುದು.
ಹಿರಿಯ ನಾಗರಿಕರಿಗೆ ದೈನಂದಿನ ಚಟುವಟಿಕೆಗೆ ರೋಬೋಟ್ ಬಳಕೆ, ಕೋ-ಹೌಸಿಂಗ್ ಮಾದರಿ, ಯುವಕರು ಮತ್ತು ವೃದ್ಧರು ಒಟ್ಟು ವಾಸಿಸುವ ಪರಸ್ಪರ ಆರೈಕೆ ನೀಡುವ ವಸತಿ ಮಾದರಿಗಳು, ವಿದೇಶದಲ್ಲಿ ಇವೆ.
ಇತ್ಯಾದಿ ಕಾರ್ಯಕ್ರಮಗಳಿಂದ ವೃದ್ಧರು ಸಮಾಜಕ್ಕೆ ಭಾರವೆಂದು ತಿಳಿಯದೆ ಸಮಾಜದ ಸಕ್ರಿಯ, ಹಾಗೂ ಗೌರವಯುತ ಸದಸ್ಯರಾಗಿ ಉಳಿಸಿಕೊಳ್ಳಲು ಸಹಾಯ ಮಾಡಬೇಕಾಗಿದೆ.
ವೃದ್ಧರ ಸಬಲೀಕರಣಕ್ಕೆ ಒತ್ತು ಕೊಟ್ಟರೆ ಹೆಚ್ಚು ಮಕ್ಕಳನ್ನು ಹೆತ್ತು ,ಸಾಮಾಜಿಕ ಭದ್ರತೆ ಪಡೆಯುವ ಯೋಚನೆ ಕಡಿಮೆ ಯಾಗುತ್ತದೆ.
ಇದರಿಂದ ಜನಸಂಖ್ಯೆ ತಾನಾಗಿಯೇ ನಿಯಂತ್ರಣ ವಾಗುತ್ತದೆ.ವಿದೇಶದಲ್ಲಿ ಇದನ್ನು ಯಶಸ್ವಿಯಾಗಿ ರ್ವಹಿಸುತ್ತಾರೆ. ಈ ವಿಧಾನಗಳಿಂದ ಕಲಿತು ಅಳವಡಿಸುವ ಸಂಕಲ್ಪ ಮಾಡಿದಲ್ಲಿ ದೇಶದಲ್ಲಿ ಜನಸಂಖ್ಯೆ ಸಮಸ್ಯೆಯಾಗದೇ, ಸಮತೋಲನವಾಗಿ ನಿರ್ವಹಿಸಲ್ಪಟ್ಟು, ಮಹಿಳೆಯರು, ವೃದ್ಧರು, ಅಂಗವಿಕಲರು ನೆಮ್ಮದಿಯ ಬಾಳನ್ನು ಬದುಕಲು ಅನುಕೂಲ ವಾತಾವರಣ ಸೃಷ್ಟಿಸುವ ವ್ಯವಸ್ಥೆ ಯಾಗುತ್ತದೆ.
ಇದರ ಬಗ್ಗೆ ಜನರು, ಸಂಘಸಂಸ್ಥೆಗಳು, ಚುನಾಯಿತ ಸರಕಾರಗಳು ಕಳಕಳಿಯ ಹೆಜ್ಜೆ ಇಡಬೇಕಾಗಿದೆ
-ಡಾ. ಶ್ಯಾಲೆ ಚನ್ನಬಸವ ರಾಯಚೂರು



