ಬಹುಷಃ ನಾವು ಯಾವಾಗಲೂ ವಾಟ್ಸ್ ಅಪ್ ಮತ್ತು ಸಾಮಾಜಿಕ ಜಾಲತಾಣದಿಂದ ಸಂಪೂರ್ಣ ಅಂತರ ಕಾಯ್ದು ಕೊಂಡಿದ್ದು ತಮಲ್ಲರಿಗೂ ಗೊತ್ತಿರುವ ಸಂಗತಿ.

ಇಂದು ನಮಗೆ ಸಾಮಾಜಿಕ ಜಾಲತಾಣದಲ್ಲಿ ಪೂಜ್ಯ ಹಾನಗಲ್ ಕುಮಾರ ಮಹಾಸ್ವಾಮಿಗಳ ಬಗ್ಗೆ ಅತ್ಯಂತ ಕೀಳು ಮನಸ್ಥಿತಿಯಲ್ಲಿ ಮಾತನಾಡಿದವರನ್ನ ಮತ್ತು ಅದರ ಬಗ್ಗೆ ಬರೆದು ಹಾಕಿದವರು ಬಗ್ಗೆ ಒಂದಿಷ್ಟು ಜನರು ನಮಗೆ ತಿಳಿಸುವ ಪ್ರಯತ್ನ ಮಾಡಿದರು ಹಾಗಾಗಿ ಈ ಪೋಸ್ಟನ್ನು ತಮ್ಮೆಲ್ಲ ಗಮನಕ್ಕೆ ತರಲು ಬಯಸಿದ್ದೇವೆ.

ಅಣ್ಣ ಬಸವಣ್ಣ ಉಕ್ತಿ ಯಂತೆ ತನ್ನ ಬಣ್ಣಿಸ ಬೇಡ ಎಂಬ ಒಂದೇ ಒಂದು ಸಾಲನ್ನು ಸರಿಯಾದ ಅರ್ಥವನ್ನು ಮಾಡಿಕೊಳ್ಳುವ ಪ್ರಯ್ತತ್ನವನ್ನು ಅವರು ಮಾಡಿದ್ದರೆ ಅವರು ಈ ತರಹ ತಮ್ಮ ವ್ಯಕ್ತಿತ್ವ ಪ್ರದರ್ಶನ ಮಾಡುತ್ತಿರಲಿಲ್ಲ ಮತ್ತು ಅವರು ಬಹುಷಃ ಮೊಟ್ಟ ಮೊದಲು ಬಸವಣ್ಣನವರಿಗೆ ನೀಡಿದ ಗೌರವವಾಗುತಿತ್ತು.

ಬಸವಣ್ಣನವರ ಹೆಸರನ್ನ ವ್ಯಯಕ್ತಿಕ ಹಿತಾಸಕ್ತಿಯನ್ನಾಗಿಸಿಕೊಂಡು ಸಮಾಜದಲ್ಲಿ ನಾನೇನೇ ಮಾಡಿದರು ಅದು ಸರಿ ಅನ್ನುವ ಮನೋಭಾವದಿಂದ ಮೊದಲು ಹೊರಬಂದರೆ ಬಹುಷಃ ಅದು ಬಸವಣ್ಣನ ಏನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ತತ್ವಕ್ಕೆ ಕನ್ನಡಿಯಾಗಿತ್ತದೆ. ಒಂದು ಕಾರ್ಯಕ್ರಮವನ್ನು ನಾವು ಹೇಗೆ ಮಾಡಬೇಕು ಎಂದು ಬೇರೆಯವರಿಂದ ಕಲಿಯಬೇಕಿಲ್ಲ. ತತ್ವ ಇರುವುದು ಭಾವಚಿತ್ರದಲ್ಲಲ್ಲ ಬದುಕಿನಲ್ಲಿ, ಎಂಬುದನ್ನು ಟೀಕಾಕರಾರು So Called ಸಮಯವನ್ನು ಸಾಮಾಜಿಕ ತಾಣದಲ್ಲಿ ಕಾಮೆಂಟ್ ಅನ್ನೋ ಕ್ಯಾತೆಯನ್ನೆ ಅಸ್ತ್ರ ಮಾಡಿಕೊಂಡು ಬರಗೆಟ್ಟ ತನಕ್ಕೆ ಬಸವ ಬದುಕು ಎಂದು ಬಸವಣ್ಣನಿಗೂ ಅಪಚಾರ ಎಸಗುವವರೆ ಬದಲಾಗಿ. ಸಮಾಜದಲ್ಲಿ ನಿಮ್ಮಿಂದ ಆಗುವ ಕೆಲಸಗಳು ನೀವು ಮಾಡುವ ಕಾಯಕಗಳು ನಿಮ್ಮ ನಡೆ ನುಡಿ ಮಾದರಿ ಆಗಬೇಕೆ ಹೊರತು ಮಾರಕ ವಾಗಬಾರದು. ಹಾನಗಲ್ ಕುಮಾರ ಮಹಾಸ್ವಾಮಿಗಳ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಹಚ್ಚಲು ಪ್ರಯತ್ನ ಪಡುವವರೇ ನೀವು ಪ್ರಯತ್ನ ಪಡಬೇಕಷ್ಟೆ ಬೇರೇನೂ ಸಾಧ್ಯವಿಲ್ಲ. ನೆನಪಿರಲಿ ನೀವು ನಿಮ್ಮನ್ನ ಬಸವಾನುಯಾಯಿ ಎಂದು ಗುರಿತಿಸಿಕೊಳ್ಳುವ ಪ್ರಯತ್ನ ಮಾಡಿದರೆ ಸಾಲದು ಬಸವಣ್ಣ ಚಿಂತನೆ ಬಗ್ಗೆ ತತ್ವಗಳ ಬಗ್ಗೆ ತಿಳಿದು ಪಾಲಿಸುವಂತವಾರಗಬೇಕು. ಬಹುಷಃ ನಿಮ್ಮ ಈ ನಡೆಯನ್ನ ಅಕ್ಷರಶಹ ಬಸವಣ್ಣನು ಮೆಚ್ಚಲಾರ ಒಪ್ಪಲಾರ.

ನಮ್ಮ ಭಾಗದಲ್ಲಿ ಲಿಂ. ಹಾನಗಲ್ ಕುಮಾರ ಮಹಾಸ್ವಾಮಿಗಳ 159 ನೇ ಜಯಂತಿ ಮಹೋತ್ಸವ ಜರುಗುತ್ತಿರುವದು ನಮ್ಮಲ್ಲೇರ ಪುಣ್ಯವೇ ಸರಿ. ಸಾಧ್ಯವಾದರೆ ಬಂದು ಪಾಲ್ಗೊಳ್ಳಿ ನಿಮಗಿರುವ ಅನೇಕ ಕುತೂಹಲ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳು ದೊರಕುತ್ತವೆ. ಎಲ್ಲ ಶರಣರ ವಚನಗಳನ್ನ ಸಮಾಜಕ್ಕೆ ತಲುಪುವಂತೆ ಮಾಡಲು ಹಾನಗಲ್ ಕುಮಾರ ಮಹಾಸ್ವಾಮಿಗಳ ಪ್ರಯತ್ನ ಬಗ್ಗೆ ನಿಮ್ಮ ಅರಿವಿಗಾದರೂ ಬರಲಿ. ಲಿಂ. ಶ್ರೀ ಫ ಘು ಹಳಕಟ್ಟಿ ಅವರ ಹಿಂದೆ ಹಾನಗಲ್ ಕುಮಾರ ಮಹಾಸ್ವಾಮಿಗಳೆಂಬ ಪ್ರೇರಣಾ ಶಕ್ತಿ ಎಷ್ಟು ಶ್ರಮಿಸಿದೆ ಎಂಬುದನ್ನು ಅರಿವು ಮೂಡಿಸಿಕೊಳ್ಳಲು ಬಸವಾದಿ ಶರಣರು ನಿಮಗೆ ಸಂಕಲ್ಪ ಮೂಡಿಸಲಿ. ಕೊನೆಯ ಪಕ್ಷ ಆ ಸಂಕಲ್ಪದ ಪ್ರೇರಣೆ ಇಂದಾದರೂ ನೀವು ಅಧ್ಯಯನ ಮಾಡುವಂತಾಗಲಿ ಎಂದು ಆಶಿಸುತ್ತೇವೆ. ಹಾ ನೆನಪಿರಲಿ ಶ್ರೀಗಳು ಸಮಾಜ ದೇವೋಭವ ಎಂದು ಸುಸಮಾಜದ ಒಳಿತಿಗಾಗಿ ಆಸೆ ಪಟ್ಟವರೇ ಹೊರತು ಯಾವುದೇ ಪೀಠಗಳಿಗಲ್ಲ. ತಮದೇ ಬಹುದೊಡ್ಡ ಹಾನಗಲ್ ಪೀಠವನ್ನೇ ತ್ಯಾಗಮಾಡಿ ಸಮಾಜ ಕಟ್ಟಿದ ಪುಣ್ಯಾತ್ಮರು ಅವರು. ಟೀಕಾಕಾರರೇ ಇನ್ಯಾವತ್ತೂ ನೀವು ಮನ ಬಂದಂತೆ ಬರೆಯುವ ಮುನ್ನ ಒಮ್ಮೆ ಅಧ್ಯಯನ ಮಾಡಿ. ನಿಮ್ಮ ಬರವಣಿಗೆ ಬರಹಗಳನ್ನ ಅಪ್ಪ ಬಸವಣ್ಣನು ಒಪ್ಪಿ ಅಪ್ಪುವಂತಿರಲಿ.

*ತತ್ವ ಇರುವುದು ಭಾವಚಿತ್ರದಲ್ಲಲ್ಲ ಬದುಕಲ್ಲಿ ಇದು ನಿಮಗೆ ನೆನಪಿರಲಿ.*

ಬಸವಾದಿ ಅಲ್ಲಮ ಪ್ರಮಾಥರ ಕೃಪಾಶಿರ್ವಾದ ಎಲ್ಲರನ್ನು ಸಲುಹಲಿ.

ಶ್ರೀ ಸದಾಶಿವರು ಶ್ರೀ ರುದ್ರಮುನೀಶ್ವರ ಮಠ ಚೀಕಲಪರ್ವಿ