ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಶಿಕ್ಷಕರ ವ್ಯಕ್ತಿತ್ವ ಹಾಗೂ ನಡವಳಿಕೆಗಳು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನು ಇರುತ್ತವೆ. ಕೆಲವು ಸಲ ಶಿಕ್ಷಕರ ಅತೀವ ವರ್ತನೆ ಮತ್ತು ಭಾಷೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು
ಹಾಗಾದರೆ ಅವರ ಜೊತೆ ಸಂವಹನ ನಡೆಸುವುದು ಹೇಗೆ? ಯಾವುದೇ ಮಗು ಮೊದಲು ಮಾತು ಕೇಳುವುದು ತಂದೆ-ತಾಯಿಗಳದ್ದಲ್ಲ ಶಿಕ್ಷಕರ. ಮಗು ತಪ್ಪು ಮೊದಲ ಸಲ ಮಾಡಿದಾಗ ಅವನನ್ನು ಗದರಿಸದೆ ನಿಧಾನವಾಗಿ ತಿಳಿಹೇಳಿದಾಗ ಮಗು ಅದನ್ನು ಅರ್ಥೈಸಿಕೊಂಡು ತಪ್ಪನ್ನು ಮತ್ತೆ ಮಾಡುವುದಿಲ್ಲ. ಕೆಲವು ಸಾರಿ ಶಿಕ್ಷಕರಾದ ನಾವು ಒತ್ತಡಕ್ಕೆ ಒಳಗಾಗಿ ಮಕ್ಕಳೊಂದಿಗೆ ಒರಟಾಗಿ ನಡೆದುಕೊಳ್ಳುತ್ತೇವೆ. ಅದು ಕೂಡ ವಿದ್ಯಾರ್ಥಿಯ ತರಗತಿಯ ಸ್ನೇಹಿತರ ಮುಂದೆ. ಆಗ ಆ ಮಗು ಮಾನಸಿಕ ಒತ್ತಡಕ್ಕೆ ಒಳಗಾಗಿ, ತಪ್ಪು ದಾರಿ ಹಿಡಿಯುವ ಸಾಧ್ಯತೆ ಇದೆ. ತಪ್ಪು ಹೆಜ್ಜೆ ಹಾಕುವ ಸಂಭವವಿದೆ. ಆಗ ಶಿಕ್ಷಕರಾದ ನಾವುಗಳು ಮಕ್ಕಳೊಂದಿಗೆ ವೈಯಕ್ತಿಕವಾಗಿ ಅವರ ವಿಷಯಗಳನ್ನು ಚರ್ಚಿಸಿ ಸರಿಯಾದ ಮಾರ್ಗ ತೋರಬಹುದು. ಸರಿಯಾದ ಶಬ್ದ ಬಳಕೆ ಮಾಡಬೇಕು.
ಮಕ್ಕಳು ತಪ್ಪು ಮಾಡಿದಾಗ ತಗಳುವುದಕ್ಕಿಂತ ಮುಂಚೆ ನಾವುಗಳು ಅವರನ್ನು ಅರ್ಥೈಸಿಕೊಂಡು ಅವರುಗಳು ಸರಿಯಾದ ಹಾಗೂ ಒಳ್ಳೆಯ ಕಾರ್ಯ ಮಾಡಿದಾಗ ಹೋಬಳಿ ಅವನ ಬೆನ್ನನ್ನು ತಟ್ಟಬೇಕು. ಅವನು ಕಲಿಕೆಯಲ್ಲಿ ಹಿಂದೆ ಉಳಿದಿದರೆ ಆ ವಿಷಯದ ಬಗ್ಗೆ ಗಮನಹರಿಸಿ ಅವನನ್ನು ಪ್ರೋತ್ಸಾಹಿಸಿ ಆ ವಿಷಯದಲ್ಲಿ ಆಸಕ್ತಿ ಹುಟ್ಟಿಸಬೇಕು.
ನಾವು ಮಾತನಾಡುವ ಮೊದಲು ಮಗುವಿನ ಮಾತನ್ನು ಆಲಿಸಬೇಕು ಅನೇಕ ಸಾರಿ ಮಕ್ಕಳಿಗೆ ತಮ್ಮ ಸಮಸ್ಯೆಗಳನ್ನು ಆಲಿಸುವ ಕಿವಿಗಳು ಬೇಕಾಗುತ್ತವೆ. ಅಂತಹ ಕೆಲಸ ಪಾಲಕರಿಗಿಂತ ಶಿಕ್ಷಕರು ಉತ್ತಮವಾಗಿ ಮಾಡಬಲ್ಲರು. ಶಿಕ್ಷಕರು ಮಗುವನ್ನು ಬೆಂಬಲಿಸಿದರೆ ಸಾಕು ಮಗು ಉತ್ತಮ ಸಾಧನೆ ಮಾಡುತ್ತದೆ. ಮಕ್ಕಳಿಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ವೇದಿಕೆ ನೀಡಬೇಕು.
ಕೊನೆಯ ಸಾಲುಗಳು: ಶಿಕ್ಷಕರು ಮಕ್ಕಳ ಜೀವನದ ಅವಿಭಾಜ್ಯ ಅಂಗ. ತರಗತಿಯನ್ನುವುದು ಕೇವಲ ಪಾಠ ಹೇಳುವ ಕೋಣೆಯಲ್ಲ, ಮಕ್ಕಳ ಜೀವನ ರೂಪಿಸುವ ದೇವಾಲಯ. ಮಕ್ಕಳಲ್ಲಿ ಸಂಸ್ಕಾರ ಉತ್ತಮ ಸಂಸ್ಕಾರ, ನಡವಳಿಕೆ, ಭಾಷೆ, ನಡತೆ ಹಾಗೂ ಅವರ ವಿದ್ಯಾಭ್ಯಾಸದ ಕಡೆ ಅವರನ್ನು ತಿದ್ದಿ ತಿಡಿದರೆ ಶಿಕ್ಷಕರ ನುಡಿಗಳು ವಿದ್ಯಾರ್ಥಿ ಜೀವನದ ಮರೆಯಲಾಗದ ಮಾಣಿಕ್ಯವಾಗಬಹುದು.
ನರಸಿಂಹಮೂರ್ತಿ ದೇಸಾಯಿ ಜಂಟಿ ಕಾರ್ಯದರ್ಶಿಗಳು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಮಾನ್ವಿ.



