ದೇವದುರ್ಗ: ದೇವದುರ್ಗ ತಾಲೂಕು ಮಾದಿಗರ ಮಹಾಸಭಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಅಕ್ಕರಕಿ ಹಾಗೂ ಪ್ರಧಾನ ಕಾರ್ಯದರ್ಶಿ ರಮೇಶ ರಾಮನಾಳ ಅವರನ್ನು ಮಾದಿಗ ನೌಕರರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಎಂ.ಆರ್.ಹೆಚ್.ಎಸ್. ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರಿ, ಮುಖಂಡ ಬುರಪ್ಪ, ಲಿಂಗಪ್ಪ ಗೌಡೂರು, ಮಹೇಂದ್ರ ಮ್ಯಾತ್ರಿ, ಮಾದಿಗ ನೌಕರರ ಸಂಘದ ತಾಲೂಕಾಧ್ಯಕ್ಷ ಪ್ರಕಾಶ ಹೊನ್ನಟಗಿ, ಜಿ.ಪಿ.ಟಿ. ಸಂಘದ ನಿರ್ದೇಶಕ ಹೊನ್ನಪ್ಪ ಹೇಮನಾಳ, ಸಿಆರ್ಪಿ ಅಂಬಣ್ಣ, ಶಿಕ್ಷಕರಾದ ಆಂಜನೇಯ, ಚರಣರಾಜ ಕೋಟೆ, ಹನುಮಂತ, ನಾಗರಾಜ, ಮಹೇಶ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ ಬಸವರಾಜ ಅಕ್ಕರಕಿ ಮಾತನಾಡಿ, ಸಮುದಾಯದ ಏಳಿಗೆ, ಸಂಘಟನೆಯ ಬಲವರ್ಧನೆ ಹಾಗೂ ಸಮಾಜದ ಹಿತಕ್ಕಾಗಿ ಎಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.



