ದೇವದುರ್ಗ: ರೈತರ ಹಿತಾಸಕ್ತಿ, ಅಭಿವೃದ್ಧಿ ಹಾಗೂ ಸ್ವಾಭಿಮಾನಿ ರೈತರ ಹಕ್ಕುಗಳ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಬಾಗೂರ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಸಂಘದ ರಾಜ್ಯಾಧ್ಯಕ್ಷ ಶಾಂತಗೌಡ ಬಿ. ಪಾಟೀಲ್ ಚನ್ನಪಟ್ಟಣ ಹಾಗೂ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಎ. ಪಾಟೀಲ್ ಮದ್ದರಕಿ ಅವರ ಆದೇಶದ ಮೇರೆಗೆ, ಹಲವು ರೈತಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ರೈತರ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿರುವ ಸಮಾಜ ಸೇವಕ ಸಿದ್ದನಗೌಡ ಮಾಲಿ ಪಾಟೀಲ್ ಅವರನ್ನು ಗ್ರಾಮ ಘಟಕದ ಗೌರವಾಧ್ಯಕ್ಷರಾಗಿ ಹಾಗೂ ಹನುಮಂತ ಪೂಜಾರಿ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಈ ವೇಳೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಎ. ಪಾಟೀಲ್ ಮದ್ದರಕಿ ಮಾತನಾಡಿ, ನೂತನ ಪದಾಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ, ಅವುಗಳ ಪರಿಹಾರಕ್ಕಾಗಿ ನ್ಯಾಯಬದ್ಧ ಹಾಗೂ ಸಂವಿಧಾನಬದ್ಧ ಮಾರ್ಗದಲ್ಲಿ ಹೋರಾಟ ನಡೆಸಬೇಕು. ಸ್ವಾಭಿಮಾನಿ ರೈತರ ಹಕ್ಕುಗಳನ್ನು ರಕ್ಷಿಸುವುದರೊಂದಿಗೆ ಸಂಘಟನೆಯನ್ನು ಗ್ರಾಮಮಟ್ಟದಿಂದ ಮತ್ತಷ್ಟು ಬಲಪಡಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಸರ್ಕಾರದ ಸೌಲಭ್ಯಗಳು ಅರ್ಹ ರೈತರಿಗೆ ತಲುಪುವಂತೆ ಜಾಗೃತಿ ಮೂಡಿಸುವುದರ ಜೊತೆಗೆ ರೈತರ ಪರ ಧ್ವನಿಯಾಗಿ ಸಂಘಟನೆ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಇಂದ್ರಜೀತ್ ಯಾದವ್, ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಹೋತಪೇಟ, ಜಿಲ್ಲಾ ಸಂಚಾಲಕ ಕ್ರಾಂತಿಕುಮಾರ್ ರಾಯಚೂರಕರ್, ತಾಲೂಕು ಅಧ್ಯಕ್ಷ ಮಹಾದೇವ್ ಯಾದವ್, ಸಂಘಟನಾ ಕಾರ್ಯದರ್ಶಿ ಚನ್ನಬಸವ ನಾಯಕ, ಮಹೇಶ್ ಮಂಡಗಳ್ಳಿ, ವಿರುಪಾಕ್ಷಿ ಶೆಟ್ಟಿ, ಡ್ಯಾನಿ ಯಾದಗೀರ, ಸುರಪುರ ತಾಲೂಕು ಅಧ್ಯಕ್ಷ ವಿಜಯರಾಜ ಅರಕೇರಾ, ತಾಲೂಕು ಅಧ್ಯಕ್ಷ ಸೋಮನಾಥ ಪೂಜಾರಿ, ಸುರಪುರ ತಾಲೂಕು ಉಪಾಧ್ಯಕ್ಷ ದೇವರಾಜ್ ಎಸ್. ಬಡಿಗೇರ, ಮುಕ್ಕನಾಳ ಗ್ರಾಮ ಘಟಕ ಅಧ್ಯಕ್ಷ ದೇವಪ್ಪ ಬಂಡಿ, ನಾಗಣ್ಣ ಪೂಜಾರಿ, ಶಿವಪ್ಪ ತಳವಾರ, ಬೊಮ್ಮನಳ್ಳಿ ಗ್ರಾಮ ಘಟಕ ಅಧ್ಯಕ್ಷ ಶಂಕ್ರಗೌಡ, ಸೋಮನಾಥ ಬನದೊಡ್ಡಿ, ನಾಗರಾಜ, ಭೀಮಣ್ಣ, ಚಂದಪ್ಪ ಕಕ್ಕೇರಾ, ರಾಮಣ್ಣ ನಾಯಕ ಮಸರಕಲ್, ರಂಗಪ್ಪ ಗೋಸಲ್, ಅಂಬರೇಶ ಮುಂಡರಗಿ, ಮುದಕಪ್ಪ, ಕರಿಯಪ್ಪ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.



