ಶಿಕ್ಷಕ ಎಂದರೆ ಕೇವಲ ಪಾಠ ಮಾಡುವವರಲ್ಲ, ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗುವವರು. ಇಂತಹ ಶ್ರೇಷ್ಠ ಶಿಕ್ಷಕರಿಗೆ ಉದಾಹರಣೆಯಾಗಿರುವ ನಮ್ಮ ಎನ್.ಜಿ.ಓ. ಶಾಲೆಯ ಸಹ ಶಿಕ್ಷಕರಾದ ಸೂಗುರಪ್ಪ ಸರ್ ಅವರು ಇಂದು ವಯೋನಿವೃತ್ತಿ ಹೊಂದುತ್ತಿದ್ದಾರೆ ಎನ್ನುವುದನ್ನು ನಂಬಲು ಅಸಾಧ್ಯವಾಗುತ್ತಿದೆ. ಅವರು ಶಾಲೆಯಿಂದ ನಿವೃತ್ತರಾಗುತ್ತಿರಬಹುದು, ಆದರೆ ನಮ್ಮ ಹೃದಯದಿಂದ ಎಂದಿಗೂ ನಿವೃತ್ತರಾಗುವುದಿಲ್ಲ. ಸೂಗುರಪ್ಪ ಸರ್ ಎಂದರೆ ನಮಗೆ ನೆನಪಿಗೆ ಬರುವುದು ಅವರ ಸರಳತೆ, ಮುಖದಲ್ಲಿನ ಸದಾ ನಗುವಿನ ಆಸರೆ ಮತ್ತು ಶಿಸ್ತು. ತರಗತಿಯಲ್ಲಿ ಅವರು ಪಾಠ ಮಾಡುವ ಶೈಲಿ ಅದ್ಭುತವಾಗಿರುತ್ತಿತ್ತು. ಎಷ್ಟೇ ಕಠಿಣವಾದ ವಿಷಯವನ್ನಾದರೂ ನಮಗೆ ಅರ್ಥವಾಗುವಂತೆ ಸುಲಭವಾಗಿ ಮನವರಿಕೆ ಮಾಡಿಕೊಡುತ್ತಿದ್ದರು. ಕೇವಲ ಪಠ್ಯಪುಸ್ತಕದ ಜ್ಞಾನ ಮಾತ್ರವಲ್ಲದೆ, ಜೀವನದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಹೇಗೆ ಬದುಕಬೇಕು ಎಂಬ ನೈತಿಕ ಮೌಲ್ಯಗಳನ್ನು ಅವರು ನಮಗೆ ಸದಾ ಹೇಳಿಕೊಡುತ್ತಿದ್ದರು. ವಿದ್ಯಾರ್ಥಿಗಳ ತಪ್ಪುಗಳನ್ನು ಪ್ರೀತಿಯಿಂದ ತಿದ್ದಿ, ಹೆತ್ತ ತಂದೆಯಂತೆ ನಮ್ಮನ್ನು ಮುನ್ನಡೆಸಿದವರು ಸೂಗುರಪ್ಪ ಸರ್. ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ಅವರು ತೋರುತ್ತಿದ್ದ ಕಾಳಜಿ ಅನನ್ಯವಾದುದು. ಅವರ ಮಾರ್ಗದರ್ಶನದಿಂದಾಗಿ ಇಂದು ಅದೇಷ್ಟೋ ವಿದ್ಯಾರ್ಥಿಗಳು ಸಮಾಜದಲ್ಲಿ ಡಾಕ್ಟರ್, ಇಂಜಿನಿಯರ್, ಕಾಲೇಜಿನ ಉಪನ್ಯಾಸಕರು, ಶಾಲೆಯ ಶಿಕ್ಷಕರು, ಕೆ ಇ ಬಿ, ಬ್ಯಾಂಕ್ ಅಧಿಕಾರಿಗಳಾಗಿ, ಸಮಾಜ ಸೇವೆಯಲ್ಲಿ ಸಂಘ ಸಂಸ್ಥೆಗಳಲ್ಲಿ ವ್ಯಾಪಾರೋಧ್ಯಮದಲ್ಲಿ ಹಾಗೂ ಸರಕಾರಿ ಮತ್ತು ಖಾಸಗಿ ಉನ್ನತ ಹುದ್ದೆಯಲ್ಲಿ ಸಮಾಜದ ಒಳ್ಳೆಯ ಪ್ರಜೆಗಳಾಗಿ ರೂಪುಗೊಂಡಿದ್ದಾರೆ. ಸರ್, ನಿಮ್ಮ ಅನುಪಸ್ಥಿತಿ ನಮ್ಮ ಶಾಲೆಯಲ್ಲಿ ಎದ್ದು ಕಾಣುತ್ತದೆ. ನಿಮ್ಮ ಪಾಠಗಳು, ನೀವು ಆಡುತ್ತಿದ್ದ ಪ್ರೀತಿಯ ನುಡಿಗಳು ಸದಾ ನಮ್ಮ ನೆನಪಿನಲ್ಲಿ ಹಸಿರಾಗಿರುತ್ತವೆ. ನೀವು ನಮಗೆ ನೀಡಿದ ಜ್ಞಾನದ ಭಿಕ್ಷೆ ನಮ್ಮ ಜೀವನದುದ್ದಕ್ಕೂ ದಾರಿದೀಪವಾಗಿರುತ್ತದೆ.

ಸೂಗುರಪ್ಪ ಸರ್ ರವರ ಸಂಕ್ಷಿಪ್ತ ಪರಿಚಯ : ಶ್ರೀಯುತ ಸೂಗುರಪ್ಪ ಸರ್ ರವರು ವೀರಭದ್ರಪ್ಪ ಕೋರಿ ಮತ್ತು ಶಂಕ್ರಮ್ಮ ರವರ ಉದರದಲ್ಲಿ 16 ಜೂನ್ 1966 ರಲ್ಲಿ ಜೇಷ್ಠ ಸುಪುತ್ರನಾಗಿ ರಾಯಚೂರಿನ ತಿಮ್ಮಾಪುರ ಪೇಟೆಯಲ್ಲಿ ಜನಿಸಿದರು. ಇವರ ತಂದೆ ರಾಯಚೂರಿನ ತಸಿಲ್ದಾರ್ ಕಚೇರಿಯಲ್ಲಿ FDA ಹುದ್ದೆಯಲ್ಲಿ ನಿವೃತ್ತಿ ಹೊಂದಿದ್ದರು. ಇವರ ತಾಯಿ ಗೃಹಕಾಯ೯ವನ್ನು ನಿಭಾಯಿಸುತ್ತಾ ಮಕ್ಕಳಿಗೆ ಬಸವಣ್ಣನ ತತ್ವಗಳನ್ನು ಒಳಗೊಂಡತೆ ಉತ್ತಮ ಸಂಸ್ಕಾರವನ್ನು ಕಲಿಸಿದರು.

ವಿದ್ಯಾಭ್ಯಾಸ: ಶ್ರೀಯುತರು ಒಂದನೇ ತರಗತಿಯಿಂದ ಏಳನೇ ತರಗತಿಯ ವರೆಗೆ ಆಗಿನ ರಾಮಶಾಲೆ ಈಗಿನ ಶಾರದಾ ಕನ್ಯಾ ಪಾಠಶಾಲೆಯಲ್ಲಿ ಮುಗಿಸಿದರು. 8 ರಿಂದ 10 ನೆಯ ತರಗತಿಯನ್ನು ಜವಾಹರ ನಗರ ಪ್ರೌಢ ಶಾಲೆಯಲ್ಲಿ ಪಡೆದರು.

ಪಿಯುಸಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡರು ನಂತರ ರಾಯಚೂರಿನ ಪ್ರತಿಷ್ಠಿತ ಸಂಸ್ಥೆಯಾದ ತಾರನಾಥ ಶಿಕ್ಷಣ ಸಂಸ್ಥೆ ಸಂಚಾಲಿತ ಎಲ್ ವಿ ಡಿ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಪಡೆದರು. ರಾಯಚೂರಿನ ಎಸ್ ಆರ್ ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ B.ed ಪದವಿಯನ್ನು ಪಡೆದರು. ನಂತರ ಅವರು ಅನ್ನಪೂಣ೯ ಎಂಬ ಕನ್ಯಾ ಜೊತೆಗೆ 1993 ರಲ್ಲಿ ವಿವಾಹವಾದರು. ಇವರು ಶಿವ ಪ್ರಕಾಶ್ ಕೋರಿ ಮತ್ತು ರಾಜಶೇಖರ್ ಎಂಬ ಇಬ್ಬರು ಸುಪುತ್ರರನ್ನು ಪಡೆದರು. ಇವರ ಮೊದಲನೆಯ ಮಗ M.sc, miro biology ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಹುದ್ದೆಯನ್ನು ಮಾಡುತ್ತಿದ್ದಾರೆ.

ಎರಡನೇ ಮಗ ರಾಜಶೇಖರ ಇವರು MSc chemistry ಸ್ನಾತಕೋತ್ತರ ಪದವಿ ಪಡೆದು ರಾಯಚೂರಿನ ಶಿಲ್ಪಾ ಮೆಡಿಕೇರ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ತಮ್ಮ : ಪ್ರಭಾಕರ ಕೋರಿ

ವೃತ್ತಿ ಜೀವನ : ಸ್ಲಂನಲ್ಲಿ ವಾಸಿಸುವ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಹಂಬಲದಿಂದ 1993 ರಲ್ಲಿ ಎನ್ ಜಿ ಓ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಹುದ್ದೆ ಸೇರಿಕೊಂಡು ಸರಿ ಸುಮಾರು 33 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸುಧೀಘ೯ ಸೇವೆಯನ್ನು ಸಲ್ಲಿಸಿದರು.

ಸೂಗುರಪ್ಪ ಸರ್ ರವರಿಗೆ ಗ್ರಂಥಾಲಯಕ್ಕೆ ಹೋಗಿ ಪುಸ್ತಕಗಳ ಜೊತೆಗೆ ಸಮಯವನ್ನು ಕಳೆಯುವ ಹವ್ಯಾಸವಾಗಿತ್ತು. ಜೊತೆಗೆ

ಗಣಿತ, ವಿಜ್ಞಾನ, ಇಂಗ್ಲಿಷ್ ನೆಚ್ಚಿನ ವಿಷಯಗಳಾಗಿದ್ದು ಈ ಮೂರು ವಿಷಯಗಳು ಬಲು ಪ್ರೀತಿಯಿಂದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದರು. ಅವರು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಈ ವಿಷಯಗಳು ಕಲಿಕೆಯಲ್ಲಿ ಎಷ್ಟೇ ಹಿಂದುಳಿದ ವಿದ್ಯಾರ್ಥಿಯಾಗಿದ್ದರು ಅವರಿನ ಪಾಠ ಸಂಪೂಣ೯ವಾಗಿ ಅರ್ಥವಾಗುತ್ತಿತ್ತು.

ಪ್ರಶಸ್ತಿಗಳು : ಇವರ ಅಪಾರವಾದ ಸೇವೆಯನ್ನು ಮೆಚ್ಚಿ ಲಯನ್ಸ್ ಕ್ಲಬ್ ನಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ರುಸ್ಮಾ ವತಿಯಿಂದ ಶಿಕ್ಷಕ ರತ್ನ ಪ್ರಶಸ್ತಿ ಪಡೆದರು.

ಇವರು ಎನ್ ಜಿ ಓ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಸುಮಾರು 10 ವರ್ಷಗಳ ಕಾಲ ಶಿಕ್ಷಕರಾಗಿ 23 ಒಟ್ಟು 33 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗಿದ್ದಾರೆ

ಇವರ ನಿಮ್ಮ ಮುಂದಿನ ನಿವೃತ್ತಿ ಜೀವನವು ಸುಖ, ಶಾಂತಿ, ನೆಮ್ಮದಿ ಮತ್ತು ಆರೋಗ್ಯದಿಂದ ಕೂಡಿರಲಿ ಎಂದು ನಮ್ಮ ಶಾಲೆಯ ಸಮಸ್ತ ವಿದ್ಯಾರ್ಥಿಗಳ ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.

ಧನ್ಯವಾದಗಳು ಸರ್, ನಿಮ್ಮ ಮಾರ್ಗದರ್ಶನಕ್ಕೆ ನಾವು ಸದಾ ಋಣಿ.

ಆತ್ಮೀಯ ಎನ್ ಜಿ ಓ ಶಾಲೆಯ ಹಳೆಯ ವಿದ್ಯಾರ್ಥಿಗಳೇ ನಮ್ಮ ಬದುಕಿಗೆ ದಾರಿ ತೋರಿದ ದೀವಿಗೆ ಸೂಗುರಪ್ಪ ಕೋರಿ ಗುರು ದೇವರಿಗೆ ನಮ್ಮ ಹಳೆಯ ವಿದ್ಯಾರ್ಥಿಗಳಿಂದ ದಿನಾಂಕ 2 ಅಕ್ಟೋಬರ್ 2026 ರಂದು ಬೆಳಿಗ್ಗೆ 10.00 ಗಂಟೆಗೆ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳ ವೇದಿಕೆಯ ವತಿಯಿಂದ ಸರ್ ರವರಿಗೆ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡಿದ್ದೇವೆ. ದಯವಿಟ್ಟು ಇದನ್ನೇ ಆಹ್ವಾನ ಪತ್ರವೆಂದು ಪರಿಗಣಿಸಿ ತಾವೆಲ್ಲರೂ ತಪ್ಪದೇ ಈ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ.

ಗೋವಿಂದರಾಜ್ ಉಪನ್ಯಾಸಕರು, ಹಾಗೂ ಎನ್ ಜಿ ಓ ಶಾಲೆಯ ಹಳೆಯ ವಿದ್ಯಾರ್ಥಿ.