ದೇವದುರ್ಗ: ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಕೆ. ಹಂಪಯ್ಯ ಅವರು ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ದೇಶದ ಸ್ವಾತಂತ್ರ್ಯ ಹೋರಾಟ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಉಭಯ ಮಹನೀಯರು ನೀಡಿದ ಕೊಡುಗೆ ಮತ್ತು ಅವರ ಆದರ್ಶಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಕಾರ್ಯಕ್ರಮದಲ್ಲಿ ದೇವದುರ್ಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್. ಶಿವರಾಜ್, ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಪಾಟೀಲ್ ಅಳ್ಳುಂಡಿ, ನಿವೃತ್ತ ಶಿಕ್ಷಕ ಚಿದಾನಂದಪ್ಪ ಶಿವಂಗಿ ಸೇರಿದಂತೆ ಹಲವರು ಪಾಲ್ಗೊಂಡು ಗಾಂಧೀಜಿ ಹಾಗೂ ಶಾಸ್ತ್ರಿ ಅವರಿಗೆ ಗೌರವ ಸಲ್ಲಿಸಿದರು.

ಪುರಸಭೆ ಸಿಬ್ಬಂದಿಗಳಾದ ರಂಗಪ್ಪ ನಾಯಕ, ರಾಮು ವಾಟರ್‌ಮ್ಯಾನ್, ಆಂಜನೇಯ, ರಾಮು, ಇಸಾಕ್, ಮಾಳಿಂಗರಾಯ, ಸೋಮಶೇಖರ್, ನಾಗರಾಜ್, ಭೀಮರಾಯ, ಶರಣಮ್ಮ ಎಂ. ಶಾಬಾದಿ, ಗೌರಮ್ಮ ಎಸ್., ಶರಣಮ್ಮ ಪಿ., ಶ್ವೇತಾ ಶೆಟ್ಟಿ, ಕರೆಮ್ಮ, ರೇಣುಕಾ, ರೇಣುಕಮ್ಮ, ಮಾಲನ್ ಗೌರಂಪೇಟೆ, ಕರಿಯಪ್ಪ ನಾಯಕ, ಲಕ್ಷ್ಮಯ್ಯ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.