ಹಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿ ಕಂಪನಿಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಶಶಿಧರ್ ಕುರೇರಾ (ಭಾ.ಆ.ಸೇ.) ಅವರನ್ನು ಎಐಟಿಯುಸಿ ಸಂಘಟನೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಂಪನಿಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಟಿಯುಸಿ ಪದಾಧಿಕಾರಿಗಳು ಹಾಗೂ ಕಾರ್ಮಿಕ ಪ್ರತಿನಿಧಿಗಳು ಶಶಿಧರ್ ಕುರೇರಾ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ, ನೂತನ ಜವಾಬ್ದಾರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಐಟಿಯುಸಿ ಹಟ್ಟಿ ಘಟಕದ ಅಧ್ಯಕ್ಷ ನರಸಪ್ಪ ಬಾದರೆದಿನ್ನಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಿಪ್ಪಣ್ಣ ಮಾಚನೂರು, ನಾಗರಡ್ಡಿ ಜೆರಬಂಡಿ, ಜಿ.ಎಸ್. ಹನುಮಂತ ಸುಣ್ಣದಕಲ್ಲು, ಗಂಗಪ್ಪ ಶಾಕೋದಿ, ಪೆಂಚಲಮ್ಮ, ಮುನಿರುದ್ದೀನ್, ಕನಕರಾಜ್ ಗೌಡ ಗುರಿಕಾರ, ಅಬ್ರಾಮ್, ಅಮೀರ್ ಪಾಷಾ, ಸಲೀಂ ಪಾಷಾ, ನಾಗರಾಜ, ರಂಗನಾಥ, ಮೌನುದ್ದೀನ್ ಬೂದಿಹಾಳ, ಚನ್ನಬಸವ, ಖಾಜಾ ಮಾದರ್ಕಲ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.