ವಿನಯವೇ ಮೂರ್ತಿವೆತ್ತ ವ್ಯಕ್ತಿತ್ವ, ಭಕ್ತರ ನೋವಿಗೆ ಕಿವಿಯಾಗುವ ಕರುಣಾಮಯಿ, ಅವರ ಆಕ್ರಂದನಕ್ಕೆದನಿಯಾಗುವ ಭಾವುಕ ಸಂತ, ಮಕ್ಕಳೊಂದಿಗೆ ಮಗುವಿನಂತೆ ಬೆರೆಯುವ ಮುಗ್ಧ ಜೀವಿ, ಕಿರಿಯ ವಯಸ್ಸಿನಲ್ಲಿಯೇ ಘನಪೀಠ ವನ್ನೇರಿಅದರಘನತೆಯನ್ನು ಹಿರಿದೆತ್ತರಕ್ಕೆ ಕೊಂಡೊಯ್ ದಆಧ್ಯಾತ್ಮಿಕ ಸಿರಿ —ಅವರೇನಮ್ಮ ಕೊಪ್ಪಳದಶ್ರೀ ಗವಿಮಠದ 18ನೇಪೀಠಾಧಿಪತಿಗಳಾದಪರಮಪೂಜ್ಯಅಭಿನವಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು.

ಭಕ್ತರ ಪಾಲಿಗೆ ಅವರು ಕೇವಲ ಮಠದ ಪೀಠಾಧಿಪತಿಗಳಲ್ಲ; ಪ್ರೀತಿ, ಕರುಣೆ, ಸೇವೆ ಮತ್ತು ಸಮಾನತೆಯ ಸಾಕಾರ ಮೂರ್ತಿ.ಬಾಲಕರಿಂದ ವೃದ್ಧರವರೆಗೆ ಎಲ್ಲರ ಹೃದಯಗಳನ್ನು ಪ್ರೀತಿಯ ಭಾವನಾತ್ಮಕ ಕೊಂಡಿಯಿAದ ಬೆಸೆಯುವ ಮಾತೃಸ್ವರೂಪಿ.ಭಕ್ತರಕಣ್ಣೀರನ್ನುಒರೆಸುವಕರುಣಾಹಸ್ತ, ನೊಂದವರ ಬದುಕಿಗೆ ಭರವಸೆಯ ಬೆಳಕು, ಅಸಹಾಯ ಕರಿಗೆಆಸರೆಯಾಗುವದೈವಸ್ವರೂಪಿ.ಆದ್ದರಿಂದಲೇಅವರು ಕೊಪ್ಪಳ ನಾಡಿನ ಭಕ್ತರಆರಾಧ್ಯದೈವ, ಭಕ್ತರ ಪಾಲಿನ ನಡೆದಾಡುವದೇವರು.

ಭಾರತದಾದ್ಯಂತತಮ್ಮೂರಿನ ಮಠದ ಸಿರಿ, ಸಂಸ್ಕೃತಿ ಮತ್ತುದಾಸೋಹದ ಪರಂಪರೆಯನ್ನು ಸಾರಿದ ಧೀಮಂತ ಸಂತರುಅವರು.ಧಾರ್ಮಿಕ ಮಹನೀಯರಿಂದ ಹಿಡಿದು ರಾಜಕಾರಣಿಗಳವರೆಗೆ, ಉದ್ಯಮಿಗಳಿಂದ ಹಿಡಿದುಆಧುನಿಕಆಧ್ಯಾತ್ಮಿಕ ಗುರುಗಳವರೆಗೆ ಅನೇಕ ಗಣ್ಯರು ಶ್ರೀಮಠದ ರಥೋತ್ಸವಕ್ಕೆ ಆಗಮಿಸಿ, ಅಲ್ಲಿನ ಭಕ್ತಿ, ಸೇವೆ ಮತ್ತು ಶಿಸ್ತಿನ ಪರಂಪರೆಯನ್ನುಕAಡುಧನ್ಯರಾಗಿದ್ದಾರೆ.

ಅವರು ಮಾತನಾಡಿದರೆ ಮುತ್ತುಗಳು ಉದುರಿದಂತೆ.ಸಾವಿರಾರುಜನರು ಸೇರಿರುವ ಸಭಾಂಗಣವೂಅವರ ಮಾತುಗಳನ್ನು ಆಲಿಸಲು ನಿಶ್ಶಬ್ದದ ನೆಲೆವೀಡಾಗುತ್ತದೆ.ಲಕ್ಷಾಂತರ ಭಕ್ತರು ಸೇರುವಜಾತ್ರೆಯೂ ಶಿಸ್ತು, ಸಂಯಮ ಮತ್ತುಅಚ್ಚುಕಟ್ಟಿನ ಪ್ರತೀಕವಾಗುತ್ತದೆ.ಅವರಅಮೃತವಾಣಿಯನ್ನು ಕೇಳಲೆಂದೇ ದೂರದ ಊರುಗಳಿಂದ ಜನರುಆಗಮಿಸುತ್ತಾರೆ.ಅವರ ಮಾತುಗಳಲ್ಲಿ ಆಜ್ಞೆಯಅಬ್ಬರವಿಲ್ಲ; ಆದರೆ ಅವುಗಳಲ್ಲಿರುವ ಪ್ರೀತಿ, ವಿವೇಕ ಮತ್ತು ಮಾನವೀಯತೆಯ ಶಕ್ತಿ ಭಕ್ತರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರುತ್ತದೆ.

ಆಧ್ಯಾತ್ಮಿಕತೆ ಮತ್ತು ಸಮಾಜಸೇವೆಯ ಸಂಗಮ ಕೊಪ್ಪಳ ನಗರದಲ್ಲಷ್ಟೇಅಲ್ಲದೆಇಡೀಜಿಲ್ಲೆಯಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಹೊಸದೊಂದು ಪರಿಭಾಷೆಯನ್ನು ಬರೆದ ವ್ಯಕ್ತಿತ್ವ ಶ್ರೀಗಳದು.ಪೂಜೆ, ಜಪ, ತಪಗಳಿಗೆ ಮಾತ್ರತಮ್ಮನ್ನು ಸೀಮಿತಗೊಳಿಸಿಕೊಳ್ಳದೆ, ಮಠದಧಾರ್ಮಿಕ ಕಾರ್ಯಗಳನ್ನು ಜನರ ಸಾಮೂಹಿಕ ಶಕ್ತಿಯೊಂದಿಗೆ ಬೆಸೆದು ಮುನ್ನಡೆಸಿದವರು.ಅವರಕರ್ತೃತ್ವಶಕ್ತಿ, ದೂರದೃಷ್ಟಿ ಮತ್ತು ಸಂಘಟನಾ ಸಾಮರ್ಥ್ಯಅಪಾರ.

ಮಠದಉಗ್ರಾಣದಲ್ಲಿ ಕೆಲಸಗಾರರೊಂದಿಗೆ ಮೂಟೆ ಹೊರಲು ಹಿಂದೇಟು ಹಾಕದಅವರು ಶ್ರಮದ ಬದುಕಿನ ಸಂಕೇತವಾಗಿಕಾಣುತ್ತಾರೆ.ಮಠದ ವಸತಿನಿಲಯದ ಮಕ್ಕಳಿಗೆ ಪ್ರೀತಿಯಿಂದ ಊಟ ಬಡಿಸುವಾಗ ಮಮತೆಯ ಮಾತೃತ್ವದ ಪ್ರತೀಕವಾಗುತ್ತಾರೆ.ಜಾತ್ರೆಯ ಸಂದರ್ಭದಲ್ಲಿ ನಡೆಯುವದಾಸೋಹದಅಡುಗೆ ಮನೆಯಲ್ಲಿ ಪ್ರತಿಯೊಂದು ವ್ಯವಸ್ಥೆಯನ್ನೂ ಸೂಕ್ಷ್ಮವಾಗಿ ಗಮನಿಸಿ, ಸಣ್ಣ ಕೆಲಸದಿಂದದೊಡ್ಡಜವಾಬ್ದಾರಿಯವರೆಗೆಎಲ್ಲವೂ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ಸೇವೆಯೇ ಸಾಧನೆ, ಶ್ರಮವೇ ಪೂಜೆ ಎಂಬ ಸಂದೇಶವನ್ನುತಮ್ಮ ಬದುಕಿನ ಮೂಲಕ ಸಾರುತ್ತಾರೆ.

ಪ್ರತಿಯೊಬ್ಬರ ಸೇವೆಯನ್ನುಗುರುತಿಸುವುದರಜೊತೆಗೆಎನಗಿಂತಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ” ಎಂಬ ವಿನಯದ ಭಾವದಲ್ಲಿ ಬದುಕುವಅವರು, ತಮ್ಮ ಹಿರಿಯ ಗುರುಗಳಿಗೆ ಗೌರವದಿಂದತಲೆಬಾಗುತ್ತಾರೆ; ಕಿರಿಯರನ್ನು ಪ್ರೀತಿಯಿಂದತಿದ್ದಿ ಮುನ್ನಡೆಸುತ್ತಾರೆ.ಸಮಾಜವೆಂಬ ಬಹುದೊಡ್ಡ ಸಂಸಾರದ ಭಾರವನ್ನುತಮ್ಮ ಹೆಗಲ ಮೇಲೆ ಹೊತ್ತು, ಅದರ ಏಳಿಗೆಗಾಗಿ ನಿರಂತರವಾಗಿದುಡಿಯುತ್ತಿರುವ ಮಹಾನ್‌ಚೇತನಅವರು.

ಜಲಋಷಿ — ಜಲಸಂರಕ್ಷಣೆಯಮಹಾನ್‌ಸಾಧಕ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಹೆಸರಿನೊಂದಿಗೆ ಹೆಮ್ಮೆಯಿಂದಉಲ್ಲೇಖಿಸಬೇಕಾದ ಮತ್ತೊಂದು ಮಹತ್ತರ ಸಾಧನೆಎಂದರೆ ಜಲಸಂರಕ್ಷಣೆ.ಜಿಲ್ಲೆಯ ಪ್ರಮುಖ ಜಲಮೂಲಗಳಲ್ಲಿ ಒಂದಾದ ಹಿರೇಹಳ್ಳದ ಪುನಶ್ಚೇತನಕ್ಕಾಗಿಅವರು ಸ್ವತಃ ಮುಂದಾಳತ್ವ ವಹಿಸಿ, ಹಿರೇಹಳ್ಳ ಪುನಶ್ಚೇತನಟ್ರಸ್ಟ್ನ ಮೂಲಕ ಜನಜಾಗೃತಿ ಮತ್ತು ಸಾಮೂಹಿಕ ಶ್ರಮದ ಮಹತ್ವವನ್ನು ಸಾರಿದರು.

ಜಲಮೂಲಗಳ ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ನೀರಿನ ಮಹತ್ವದ ಬಗ್ಗೆ ಜನರಲ್ಲಿಅರಿವು ಮೂಡಿಸುವುದಷ್ಟೇಅಲ್ಲದೆ, ಸ್ವತಃ ಸ್ವಯಂಸೇವಕರೊAದಿಗೆಕಾರ್ಯಕ್ಷೇತ್ರಕ್ಕೆ ಇಳಿದು ದುಡಿದಅವರಕಾರ್ಯಎಲ್ಲರಿಗೂ ಪ್ರೇರಣೆಯಾಯಿತು. ಹಿರೇಹಳ್ಳದ ಸ್ವಚ್ಛತಾಕಾರ್ಯದಲ್ಲಿತಾವೇ ಭಾಗವಹಿಸಿ, ಸೇವೆಗೆ ಯಾವುದೇ ಮೇಲು-ಕೀಳುಗಳಿಲ್ಲ ಎಂಬುದನ್ನು ತೋರಿಸಿಕೊಟ್ಟರು.ಅವರ ಈ ಪರಿಸರ ಕಾಳಜಿ ಮತ್ತು ಜಲಸಂರಕ್ಷಣೆಯ ಸೇವೆಯಿಂದಲೇಜನರುಅವರನ್ನು ಪ್ರೀತಿಯಿಂದ “ಜಲಋಷಿ” ಎಂದುಗೌರವಿಸುತ್ತಾರೆ.

ಜಲವೆAದರೆಜೀವ, ಪ್ರಕೃತಿಯೆಂದರೆ ಬದುಕಿನಆಧಾರ ಎಂಬ ಸಂದೇಶವನ್ನುಅವರುತಮ್ಮಕಾರ್ಯದ ಮೂಲಕ ಸಾರಿದ್ದಾರೆ. ಕೇವಲ ಉಪದೇಶ ಮಾಡುವುದಕ್ಕಿಂತ ಸ್ವತಃಕಾರ್ಯಪ್ರವೃತ್ತರಾಗಿ ಮಾದರಿಯಾಗುವಅವರಗುಣವೇಅವರನ್ನು ವಿಶಿಷ್ಟರನ್ನಾಗಿಸಿದೆ.

ಈಗಾಗಲೇ ಅನ್ನದಾಸೋಹ ಮತ್ತು ಜ್ಞಾನದಾಸೋಹಗಳನ್ನು ಜನಜೀವನದ ಅವಿಭಾಜ್ಯ ಅಂಗವಾಗಿಸಿದ ಅವರು, ಭೂತಾಯಿಯಒಡಲ ಬೇಗೆಯನ್ನುತಣಿಸಲು ವೃಕ್ಷದಾಸೋಹದ ಪರಿಕಲ್ಪನೆಯನ್ನೂ ಮುನ್ನಡೆಸಿದ್ದಾರೆ. ಹಸಿದವರಿಗೆ ಅನ್ನ, ಅಜ್ಞಾನಿಗಳಿಗೆ ಜ್ಞಾನ, ಬಾಯಾರಿದ ಭೂಮಿಗೆ ನೀರು ಮತ್ತುಪ್ರಕೃತಿಗೆ ಹಸಿರು — ಈ ಎಲ್ಲಸೇವೆಗಳ ಮೂಲಕ ಅವರು ಮಾನವೀಯತೆಯ ವಿಶಾಲ ಅರ್ಥವನ್ನುಜನರಿಗೆ ತಿಳಿಸಿಕೊಟ್ಟಿದ್ದಾರೆ.

ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆ “ಶಿಕ್ಷಣದಿಂದಲೇ ಸಾಮಾಜಿಕ ಬದಲಾವಣೆ ಸಾಧ್ಯ” ಎಂಬ ಉದಾತ್ತಆಶಯವನ್ನುಕಾರ್ಯರೂಪಕ್ಕೆತಂದವರು ಶ್ರೀಗಳು.ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಿ, ಕಟ್ಟಡಗಳ ನವೀಕರಣದ ಮೂಲಕ ಉತ್ತಮ ಕಲಿಕಾ ವಾತಾವರಣವನ್ನು ಸೃಷ್ಟಿಸಿದ್ದಾರೆ.ಆಯುರ್ವೇದ ಮಹಾವಿದ್ಯಾಲಯಕ್ಕೆ ನೂತನಕಟ್ಟಡವನ್ನು ನಿರ್ಮಿಸುವುದರಜೊತೆಗೆ, ವಿವಿಧ ಹಂತಗಳ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಶ್ರಮಿಸಿದ್ದಾರೆ.

ಸಾವಿರಾರು ವಿದ್ಯಾರ್ಥಿಗಳ ಬದುಕಿನಲ್ಲಿಜ್ಞಾನದ ಬೆಳಕು ಮೂಡಿಸುವಉದ್ದೇಶದಿಂದಉಚಿತ ವಸತಿ ಮತ್ತು ಪ್ರಸಾದ ನಿಲಯದ ವ್ಯವಸ್ಥೆಯನ್ನು ಬಲಪಡಿಸಿದ್ದಾರೆ.ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಆಶಯದೊಂದಿಗೆ ವಸತಿ ಸೌಲಭ್ಯಗಳನ್ನು ವಿಸ್ತರಿಸುವಕಾರ್ಯಕ್ಕೆಆದ್ಯತೆ ನೀಡಿದ್ದಾರೆ.

ಬಿ.ಎಡ್.,ಡಿ.ಎಡ್. ಮತ್ತು ಬಿ.ಬಿ.ಎಂ. ಆಯುರ್ವೇದಕಾಲೇಜುಗಳ ಸ್ಥಾಪನೆ, ಸಿಬಿಎಸ್‌ಇ ಪಠ್ಯಕ್ರಮದ ಶಾಲೆ,ವಸತಿ ಶಾಲೆ ಹಾಗೂ ಪೂರ್ವಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗಿನ ಶಿಕ್ಷಣ ಸೌಲಭ್ಯಗಳ ಅಭಿವೃದ್ಧಿಯ ಮೂಲಕ ಶೈಕ್ಷಣಿಕಕ್ಷೇತ್ರದಲ್ಲಿ ಮಹತ್ವದಕೊಡುಗೆ ನೀಡಿದ್ದಾರೆ.

ಶಿಕ್ಷಣವೆಂಬುದು ಕೇವಲ ಪದವಿ ಪಡೆಯುವ ಸಾಧನವಲ್ಲ; ಅದು ವ್ಯಕ್ತಿಯ ವ್ಯಕ್ತಿತ್ವವನ್ನುರೂಪಿಸುವ, ಕುಟುಂಬದ ಬದುಕನ್ನು ಬದಲಿಸುವ ಮತ್ತು ಸಮಾಜವನ್ನು ಪ್ರಗತಿಯತ್ತಕೊಂಡೊಯ್ಯುವ ಶಕ್ತಿಯಾಗಿದೆಎಂಬುದನ್ನುತಮ್ಮ ಕಾರ್ಯಗಳ ಮೂಲಕ ತೋರಿಸಿಕೊಟ್ಟಿದ್ದಾರೆ.ಅವರ ಪಾಲಿಗೆ ವಿದ್ಯಾರ್ಥಿಗಳು ಕೇವಲ ಮಠದ ಮಕ್ಕಳು ಮಾತ್ರವಲ್ಲ; ನಾಡಿನ ಭವಿಷ್ಯದ ಆಶಾಕಿರಣಗಳು.

ಸಂಕಷ್ಟದ ಸಮಯದಲ್ಲಿ ಮಾನವೀಯತೆಯ ಹಸ್ತ

ಕೊರೊನಾ ಸಂಕಷ್ಟದ ಸಂದರ್ಭದಲ್ಲಿಜನರಿಗೆ ವೈದ್ಯಕೀಯ ನೆರವು ಮತ್ತುಚಿಕಿತ್ಸಾ ಸೌಲಭ್ಯದೊರೆಯುವಂತೆ ಸಹಕಾರ ನೀಡಿದಅವರ ಮಾನವೀಯ ಕಾರ್ಯಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಹಸಿದವರಿಗೆ ಅನ್ನ, ಸಂಕಷ್ಟದಲ್ಲಿರುವವರಿಗೆ ನೆರವು, ನೊಂದವರಿಗೆ ಸಾಂತ್ವನ ನೀಡುವಅವರ ಸೇವಾಮನೋಭಾವವೇಅವರನ್ನುಜನರ ಹೃದಯಕ್ಕೆ ಹತ್ತಿರವಾಗಿಸಿದೆ.

ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಮಾಜಕ್ಕಾಗಿದುಡಿಯುವ ನಿಸ್ವಾರ್ಥಜೀವಿ ಅವರು.ಮಾನವನ ನೋವಿಗೆ ಮಿಡಿಯುವ ಹೃದಯ, ಬಡವರಕಷ್ಟಕ್ಕೆ ಸ್ಪಂದಿಸುವ ಮನಸ್ಸು ಮತ್ತುಎಲ್ಲರಲ್ಲಿಯೂದೈವತ್ವವನ್ನುಕಾಣುವದೃಷ್ಟಿಅವರ ವ್ಯಕ್ತಿತ್ವದ ವಿಶೇಷತೆಗಳು.

ಕೊಪ್ಪಳದ ರೈಲು ನಿಲ್ದಾಣಕ್ಕೆತಮ್ಮ ಹೆಸರನ್ನುಇಡಬೇಕೆಂಬ ಭಕ್ತರಅಭಿಲಾಷೆಯನ್ನುಅತ್ಯಂತ ವಿನಯದಿಂದ ತಿರಸ್ಕರಿಸಿ, ತಾವು ಶ್ರೀಮಠದ ಸೇವಕ ಮಾತ್ರಎಂದು ಹೇಳಿಕೊಂಡ ಅವರ ಸರಳತೆ ನಿಜಕ್ಕೂಅನುಕರಣೀಯ.ಅಪಾರಜನಮನ್ನಣೆ, ಗೌರವ ಮತ್ತು ಪ್ರೀತಿದೊರೆತಿದ್ದರೂಅಹಂಕಾರಕ್ಕೆಎಡೆಮಾಡಿಕೊಡದಅವರು, ನಿಜವಾದದೊಡ್ಡತನವೆಂದರೆಅಧಿಕಾರದಲ್ಲಲ್ಲ, ವಿನಯ ಮತ್ತು ಸೇವೆಯಲ್ಲಿದೆಎಂಬುದನ್ನು ಬದುಕಿನ ಮೂಲಕ ನಿರೂಪಿಸಿದ್ದಾರೆ.

ನಾಡು, ನುಡಿ ಮತ್ತುಜನಜೀವನದ ಕಾಳಜಿ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಮತ್ತುಜನರ ಬದುಕಿನ ಬಗ್ಗೆ ಅಪಾರ ಕಾಳಜಿ ಹೊಂದಿರುವ ಶ್ರೀಗಳು, ಅಭಿವೃದ್ಧಿಯ ಹೆಸರಿನಲ್ಲಿ ಸ್ಥಳೀಯ ಜನಜೀವನಕ್ಕೆತೊಂದರೆಯಾಗುವ ಸಾಧ್ಯತೆಗಳ ಬಗ್ಗೆ ಜನರಲ್ಲಿಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ.ಕೈಗಾರಿಕಾಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತುಜನರ ಹಕ್ಕುಗಳ ವಿಚಾರಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಮಹತ್ವ ನೀಡುವಅವರ ನಿಲುವು ಗಮನಾರ್ಹವಾಗಿದೆ.

ಜನರ ಭಾವನೆಗಳಿಗೆ ಸ್ಪಂದಿಸುವುದರಜೊತೆಗೆ ಸಂವಿಧಾನಾತ್ಮಕ ಮೌಲ್ಯಗಳು, ಕಾನೂನು ಮತ್ತು ಶಾಂತಿಯ ಮಹತ್ವವನ್ನೂಅವರು ಒತ್ತಿಹೇಳುತ್ತಾರೆ. ಯಾವುದೇ ಹೋರಾಟದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ, ವೈಯಕ್ತಿಕ ಬದುಕು ಮತ್ತು ಭವಿಷ್ಯವನ್ನು ಹಾಳುಮಾಡಿಕೊಳ್ಳದಂತೆ ಜನರಿಗೆ ತಿಳಿಹೇಳುವ ಅವರ ಸಂಯಮದ ನಡೆ ಸಮಾಜಕ್ಕೆ ಮಾದರಿಯಾಗಿದೆ.

ಲಕ್ಷಾಂತರ ಭಕ್ತರುಒಂದೆಡೆ ಸೇರಿದ್ದರೂ ಶಾಂತಿ, ಶಿಸ್ತು ಮತ್ತು ಸಂಯಮವನ್ನು ಕಾಪಾಡಿಕೊಳ್ಳುವಂತೆ ಪ್ರೇರೇಪಿಸುವ ಅವರ ಮಾತುಗಳಲ್ಲಿ ಅಪಾರ ನೈತಿಕ ಶಕ್ತಿ ಅಡಗಿದೆ.ಜನರ ಭಾವನೆಗಳನ್ನು ಅರಿತುಕೊಳ್ಳುವುದರ ಜೊತೆಗೆ ಅವುಗಳಿಗೆ ಸರಿಯಾದ ದಿಕ್ಕು ನೀಡುವ ಸಾಮರ್ಥ್ಯಅವರಲ್ಲಿದೆ. ಅದಕ್ಕಾಗಿಯೇಅವರು ಕೇವಲ ಧಾರ್ಮಿಕ ಗುರುಗಳಲ್ಲ; ಸಾಮಾಜಿಕಜವಾಬ್ದಾರಿಯಅರಿವು ಮೂಡಿಸುವ ಮಾರ್ಗದರ್ಶಕರೂ ಹೌದು.

ನಡೆದಾಡುವದೇವರು— ಕೊಪ್ಪಳನಾಡಿನಆರಾಧ್ಯದೈವ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುವಅಸಾಮಾನ್ಯ ವ್ಯಕ್ತಿತ್ವ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳದು.ಅವರಲ್ಲಿಆಧ್ಯಾತ್ಮಿಕಗಾಂಭೀರ್ಯವಿದೆ; ಆದರೆಅಹಂಕಾರವಿಲ್ಲ. ಅಪಾರಕರ್ತೃತ್ವಶಕ್ತಿಯಿದೆ; ಆದರೆ ಪ್ರದರ್ಶನವಿಲ್ಲ. ಜನರನ್ನು ಸಂಘಟಿಸುವ ಸಾಮರ್ಥ್ಯವಿದೆ; ಆದರೆ ಬಲವಂತದಆಜ್ಞೆಯಿಲ್ಲ. ಎಲ್ಲರನ್ನೂ ಪ್ರೀತಿಸುವ ಹೃದಯವಿದೆ; ಆದರೆ ಭೇದಭಾವವಿಲ್ಲ.

ಮಕ್ಕಳೊಂದಿಗೆ ಆಟವಾಡುವಾಗ ಮಗುವಾಗುವ ಅವರು, ವೃದ್ಧರೊಂದಿಗೆ ಮಾತನಾಡುವಾಗ ಮಮತೆಯ ಮಗನಾಗುತ್ತಾರೆ; ಬಡವರ ಸಂಕಷ್ಟವನ್ನು ಆಲಿಸುವಾಗ ಅವರಕುಟುಂಬದ ಸದಸ್ಯರಾಗುತ್ತಾರೆ; ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಾಗಗುರುವಾಗುತ್ತಾರೆ; ಪರಿಸರದರಕ್ಷಣೆಗೆ ಮುಂದಾದಾಗಜಲಋಷಿಯಾಗುತ್ತಾರೆ. ಹೀಗೆ ಅನೇಕ ರೂಪಗಳಲ್ಲಿ ಜನರ ಬದುಕಿನೊಂದಿಗೆ ಬೆಸೆದುಕೊಂಡಿರುವಅವರು, ಕೊಪ್ಪಳದ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.

ಭಕ್ತರಿಗೆಅವರುದೇವರ ಮೇಲಿನ ನಂಬಿಕೆಯ ಸಂಕೇತ.ಬಡವರಿಗೆಆಶ್ರಯದ ಭರವಸೆ. ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು.ಪರಿಸರ ಪ್ರೇಮಿಗಳಿಗೆ ಪ್ರೇರಣೆಯಚಿಲುಮೆ.ಸಮಾಜಸೇವಕರಿಗೆ ಮಾದರಿ.ನಾಡಿನಜನತೆಗೆ ಹೆಮ್ಮೆಯಆಧ್ಯಾತ್ಮಿಕ ಶಕ್ತಿ.ಆದ್ದರಿಂದಲೇ “ಜಲಋಷಿ, ನಡೆದಾಡುವದೇವರು, ಕೊಪ್ಪಳ ನಾಡಿನ ಭಕ್ತರಆರಾಧ್ಯದೈವ” ಎಂಬ ಗೌರವಪೂರ್ಣ ನುಡಿಗಳು ಅವರ ಸೇವೆ, ಸರಳತೆ ಮತ್ತು ಮಾನವೀಯ ವ್ಯಕ್ತಿತ್ವಕ್ಕೆತಕ್ಕ ಅಭಿವ್ಯಕ್ತಿಗಳಾಗಿವೆ.

ಮೈಸೂರುದಸರಾ ಮಹೋತ್ಸವದಉದ್ಘಾಟನೆಯಗೌರವ

ಇಷ್ಟೆಲ್ಲಾ ಸಾಧನೆಗಳು, ಸೇವಾ ಕಾರ್ಯಗಳು ಮತ್ತುಅಪಾರಜನಮನ್ನಣೆಯನ್ನು ಹೊಂದಿದ್ದರೂ ವಿನಯ, ಪ್ರಬುದ್ಧತೆ, ಸಂಯಮ ಮತ್ತು ಶಾಂತಿಯನ್ನುತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊAಡಿರುವ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಗೆ ನಮ್ಮಕನ್ನಡ ನಾಡಿನ ಹೆಮ್ಮೆಯ ನಾಡಹಬ್ಬವಾದ ಮೈಸೂರುದಸರಾ ಮಹೋತ್ಸವದಉದ್ಘಾಟನೆಯಗೌರವದೊರೆತಿರುವುದು ಭಕ್ತರ ಪಾಲಿಗೆ ಹೆಮ್ಮೆಯ ಹಾಗೂ ಭಾವಪೂರ್ಣಕ್ಷಣವಾಗಿದೆ.

ಮೈಸೂರುದಸರಾಕರ್ನಾಟಕದ ಸಾಂಸ್ಕೃತಿಕ ಪರಂಪರೆ, ವೈಭವ ಮತ್ತುಐತಿಹಾಸಿಕ ಹೆಮ್ಮೆಯ ಪ್ರತೀಕ. ಅಂತಹ ಮಹೋತ್ಸವದಉದ್ಘಾಟನೆಗೆ ಶ್ರೀಗಳಂತಹ ಆಧ್ಯಾತ್ಮಿಕಚೇತನರಆಯ್ಕೆ, ಸೇವೆ, ಶಿಕ್ಷಣ, ದಾಸೋಹ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸಾಮರಸ್ಯದ ಮೌಲ್ಯಗಳಿಗೆ ದೊರೆತಗೌರವವೆಂದು ಭಕ್ತರು ಭಾವಿಸುತ್ತಾರೆ.

ಈ ಗೌರವದಿಂದ ಕೊಪ್ಪಳದ ಕೀರ್ತಿ ನಾಡಿನಾದ್ಯಂತ ಮತ್ತಷ್ಟು ಪಸರಿಸಲಿ.ಶ್ರೀಗಳ ಸೇವಾ ಸಂಕಲ್ಪಗಳು ಇನ್ನಷ್ಟುಜನರಿಗೆ ಪ್ರೇರಣೆಯಾಗಲಿ.ಅನ್ನದಾಸೋಹ, ಜ್ಞಾನದಾಸೋಹ ಮತ್ತು ವೃಕ್ಷದಾಸೋಹದ ಪರಂಪರೆ ನಾಡಿನಾದ್ಯಂತ ವಿಸ್ತರಿಸಲಿ.ಜಲಸಂರಕ್ಷಣೆ ಮತ್ತು ಪರಿಸರ ಕಾಳಜಿಯ ಸಂದೇಶ ಪ್ರತಿಯೊಬ್ಬರ ಬದುಕಿನ ಭಾಗವಾಗಲಿ ಎಂಬುದು ನಮ್ಮೆಲ್ಲರಆಶಯ.

ಈ ಮಹತ್ವದಗೌರವದ ಸಂದರ್ಭದಲ್ಲಿಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳೂ ಸೇರಿದಂತೆ ಸಂಬAಧಪಟ್ಟಎಲ್ಲರಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು.ಸಮಾಜಸೇವೆ ಮತ್ತುಆಧ್ಯಾತ್ಮಿಕ ಮೌಲ್ಯಗಳಿಗೆ ಸಲ್ಲಿಸಿದ ಈ ಗೌರವವು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ.

ನಮ್ಮ ನೆಲದ ಹೆಮ್ಮೆ, ನಮ್ಮ ನಾಡಿನ ಸಿರಿ, ನಮ್ಮ ಭಕ್ತಿಯ ಬೆಳಕು, ನಮ್ಮ ಕೊಪ್ಪಳದ ಕರುಣಾಮಯಿ ಗುರುಗಳು —ಪರಮಪೂಜ್ಯಅಭಿನವಶ್ರೀ ಗವಿಸಿದ್ದೇಶ್ವರಮಹಾಸ್ವಾಮಿಗಳಿಗೆಅನಂತಾನAತಭಕ್ತಿಪೂರ್ವಕಪ್ರಣಾಮಗಳು.

ಜಲವನ್ನು ಉಳಿಸುವ ಜಲಋಷಿಗಳಿಗೆ ಶತಶತ ನಮನಗಳು! ಜನರ ಹೃದಯಗಳಲ್ಲಿ ದೇವರಾಗಿ ನೆಲೆಸಿರುವ ನಡೆದಾಡುವದೇವರಿಗೆಕೋಟಿಕೋಟಿ ಪ್ರಣಾಮಗಳು!

ಶ್ರೀಗಳ ಸೇವೆ ನಿರಂತರವಾಗಿ ಮುಂದುವರಿಯಲಿ.ಅವರಕರುಣೆಯ ಬೆಳಕು ಎಲ್ಲರ ಬದುಕನ್ನು ಬೆಳಗಲಿ.ಅವರ ಆಶೀರ್ವಾದದಿಂದ ನಾಡಿನಲ್ಲಿ ಶಾಂತಿ, ಸಮೃದ್ಧಿ, ಸಾಮರಸ್ಯ ಮತ್ತು ಮಾನವೀಯತೆ ಸದಾ ನೆಲೆಸಿರಲಿ. ಶ್ರೀಗಳ ಸೇವಾ ಸಂಕಲ್ಪಕ್ಕೆಇನ್ನಷ್ಟು ಶಕ್ತಿ ದೊರೆಯಲಿ.ಅವರಕರುಣೆಯ ನೆರಳು ನಾಡಿನಎಲ್ಲಜನರ ಮೇಲಿರಲಿ.ಅವರಿಂದ ಪ್ರೇರಿತರಾಗಿಇನ್ನಷ್ಟುಜನರು ಸಮಾಜಸೇವೆ, ಶಿಕ್ಷಣ, ದಾಸೋಹ ಮತ್ತು ಪರಿಸರ ಸಂರಕ್ಷಣೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ.ಮೈಸೂರುದಸರೆಯ ಈ ಗೌರವವು ಸೇವೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಸ್ಮರಣೀಯ ಮೈಲಿಗಲ್ಲಾಗಲಿ.

ಕೊಪ್ಪಳ ನಾಡಿನ ಭಕ್ತರಆರಾಧ್ಯದೈವಕ್ಕೆ ಭಕ್ತಿಪೂರ್ವಕ ವಂದನೆಗಳು!

ಡಾ.ಶೈಲಜಾ ಅರಳಲೇಮಠ ಸಹಾಯಕ ಪ್ರಾಧ್ಯಾಪಕರು ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯ, ಕೊಪ್ಪಳ.