ಮಲೆನಾಡಿನ ದಟ್ಟ ಕಾಡಗಳ ನಡುವೆ, ಪ್ರಕೃತಿಯ ಜೊತೆಗೆ ಬೆಳೆದ ಬಂದ ಹುಡುಗ ವಸಂತ ಕುಮಾರ್. ಬಾಲ್ಯದಿಂದಲೂ ಪ್ರಕೃತಿಯ ಸೌಂದರ್ಯವನ್ನು ಆರಾಧಿಸುತ್ತಿದ್ದ ಅವನಿಗೆ ಮಳೆ, ಹಸಿರು ಬೆಟ್ಟಗಳು, ಹಕ್ಕಿಗಳ ಕಲರವ ಮತ್ತು ತಂಗಾಳಿಯ ಸ್ಪರ್ಶವೆಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ತನ್ನ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ಕವನಗಳ ರೂಪದಲ್ಲಿ ಬರೆಯುವುದು ಅವನ ನೆಚ್ಚಿನ ಹವ್ಯಾಸವಾಗಿತ್ತು. ಎಂದಿನಂತೆ ಅಂದು ಕೂಡ ಕಾಲೇಜಿಗೆ ತೆರಳಿದ್ದ ವಸಂತ್, ತರಗತಿಗಳನ್ನು ಮುಗಿಸಿಕೊಂಡು ಸಂಜೆ ಐದು ಗಂಟೆಯ ವೇಳೆಗೆ ರೈಲು ನಿಲ್ದಾಣಕ್ಕೆ ಬಂದು ನಿಂತಿದ್ದನು. ಅವನು ಅಲ್ಲಿಗೆ ಬಂದು ಐದು ನಿಮಿಷಗಳು ಕಳೆದಿರಲಿಲ್ಲ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಆಕಾಶದಲ್ಲಿ ಗುಡುಗು, ಮಿಂಚು ಕಾಣಿಸಿಕೊಂಡು ಧಾರಾಕಾರ ಮಳೆ ಸುರಿಯಲು ಆರಂಭಿಸಿತು.

ಮಳೆಯಿಂದ ತಪ್ಪಿಸಿಕೊಳ್ಳಲು ವಸಂತ್ ನಿಲ್ದಾಣದಲ್ಲಿದ್ದ ಶೆಡ್‌ನ ಕೆಳಗೆ ಹೋಗಿ ನಿಂತನು. ಅವನ ಬಳಿ ಒಂದು ಡೈರಿ, ಲೇಖನಿ ಮತ್ತು ಬ್ಯಾಗ್ ಇದ್ದವು. ಮಳೆಯ ಸೌಂದರ್ಯವನ್ನು ನೋಡುತ್ತಿದ್ದ ಅವನು ಡೈರಿಯನ್ನು ತೆಗೆದು ತನ್ನ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಕವನದ ಸಾಲುಗಳಾಗಿ ಬರೆಯಲು ಶುರು ಮಾಡಿದನು.

ಅದೇ ಸಮಯಕ್ಕೆ, ಹಳದಿ ಬಣ್ಣದ ಛತ್ರಿಯನ್ನು ಹಿಡಿದುಕೊಂಡು ಒಬ್ಬ ಸುಂದರ ಹುಡುಗಿ ಮಳೆಯ ನಡುವೆ ಓಡುತ್ತಾ ಬಂದು ಅವನು ನಿಂತಿದ್ದ ಶೆಡ್‌ನೊಳಗೆ ನಿಂತಳು. ಅವಳು ತನ್ನ ಛತ್ರಿಯನ್ನು ಮಡಚಿ ಮುಖಕ್ಕೆ ಮುಖಕ್ಕೆ ಬಿದ್ದ ಮುಂಗುರಳನ್ನು ಹಿಂದಕ್ಕೆ ಸರಿಸಿದಳು. ಆಗ ಅವಳ ಕೈಯಲ್ಲಿದ ಬಳೆಗಳ ಸದ್ದು ಆ ನಿಶ್ಯಬ್ದ ವಾತಾವರಣದಲ್ಲಿ ಒಂದು ಸುಂದರ ರಾಗದಂತೆ ಅವನಿಗೆ ಕೇಳಿಸಿತು. ಆ ಸದ್ದು ಎಲ್ಲಿಂದ ಬರುತ್ತಿದೆ ಎಂದು ವಸಂತ್ ತಿರುಗಿ ನೋಡಿದನು. ಅವನ ಕೈಯಲ್ಲಿದ್ದ ಲೇಖನಿ ಒಮ್ಮೆ ನಿಂತು ಹೋಯಿತು ಅವನ ಕಣ್ಣುಗಳು ಅರಿವಿಲ್ಲದೆ ಅವಳತ್ತ ಸರಿದವು.

ಆ ಮುಗ್ಧಮುಖ ಕಣ್ಣಗಳಲ್ಲಿದ್ದ ಸಣ್ಣ ತುಂಟತನ, ಮಳೆಯ ಹನಿ ಸೋಕಿದ ತಂಗಾಳಿಯಂತಿದ್ದ ಅವಳ ನಗು—ಎಲ್ಲವೂ ವಸಂತನ ಮನಸ್ಸನ್ನು ಯಾವುದೋ ಮಾಯಾಲೋಕಕ್ಕೆ ಕರೆದೊಯ್ದವು. "ಹೇ.... ನಿಮ್ಮ ಡೈರಿ ಒದ್ದೆಯಾಗುತ್ತಿದೆ ನೋಡಿ"

ಅನನ್ಯ ಸಡನ್ನಾಗಿ ಹೇಳಿದಾಗ ವಸಂತ್ ಎಚ್ಚರಗೊಂಡಂತೆ ನೋಡಿದ. ಗಾಳಿಗೆ ಮಳೆಯ ತುಂತುರು ಅವನ ಡೈರಿಯ ಅಂಚನ್ನು ತೋಯಿಸುತ್ತಿತ್ತು. "ಓಹ್.....ಧನ್ಯವಾದಗಳು" ಎನ್ನುತ ಡೈರಿಯನ್ನು ಬ್ಯಾಗಿನೊಳಗೆ ಇಟ್ಟುಕೊಂಡನು "ರೈಟರ್ ಅನ್ಸುತ್ತೆ? ಅಷ್ಟು ಮುಳುಗಿ ಹೋಗಿದ್ದ ಬರೆಯೋದ್ರಲ್ಲಿ" ಅವಳು ಮುಗುಳ್ನಗುತ್ತಾ ಹೇಳಿದಳು. "ಇಲ್ಲ... ಸುಮ್ಮನೆ ಮನಸ್ಸಿನೊಳಗಡೆ ತೋಚ್ಚಿದ್ದು ಗೀಚುತ್ತಿದೆ ಅಷ್ಟೇ ಈಗ ಬರೆಯೋಕೆ ಒಂದು ಸುಂದರ ಚಿತ್ರವು ಸಿಕ್ಕಿತು" ಎಂದು ಹೇಳುತ್ತಾನೆ. ಅನನ್ಯ ಅರ್ಥವಾದರೂ ಆಗದವಳಂತೆ ಕಣ್ಣರಳಿಸಿ ನಕ್ಕಳು. ಮಳೆ ನಿಲ್ಲುವವರೆಗೂ ಇಬ್ಬರ ನಡುವೆ ಸಣ್ಣ ಸಣ್ಣ ಮಾತುಗಳು ಶುರುವಾದವು ಕಾಫಿ ಇಷ್ಟಾನಾ ? ಟೀ ಇಷ್ಟನಾ ಅನ್ನೋದ್ರಿಂದ ಹಿಡಿದು ಮಲೆನಾಡಿನ ಮಳೆಯವರೆಗೆ ಆ ಅರ್ಧಗಂಟೆಯ ಸಂಭಾಷಣೆಯಲ್ಲಿ ಇಬ್ಬರಿಗೂ ಕಾಲ ಕಳೆದಿದ್ದದ್ದು ತಿಳಿಯಲೇ ಇಲ್ಲ. ವರ್ಷಗಳ ಕಾಲ ಪರಿಚಿತರಾಗಿದ್ದಾವರಂತೆ ಇಬ್ಬರ ಮಾತುಗಳು ಬೆರೆತಿದ್ದವು. ದೂರದಿಂದ ರೈಲು, ರೈಲಿನ ಹಾರ್ನ್ ಸದ್ದು ಕೇಳಿಸಿತು. ಅನನ್ಯ ಎದ್ದು ನಿಂತಳು ನನ್ನ ಟ್ರೈನ್ ಬಂತು ನಾನು ಹೊರಡಬೇಕು ಎಂದು ಹೇಳಿದಳು. ವಸಂತನಿಗೆ ಮನಸ್ಸಿನಲ್ಲಿ ಏನೋ ಕಳೆದುಕೊಂಡ ಹಾಗೆ ಭಾಸವಾಯಿತು "ನಿಮ್ಮ ಹೆಸರು ಕೇಳಬಹುದಾ?" "ಅನನ್ಯ... ನಿಮ್ಮದು?" "ವಸಂತ್ ಕುಮಾರ್." ಅವಳು ರೈಲು ಹತ್ತಿ ಕಿಟಕಿಯ ಪಕ್ಕಾದಲ್ಲಿ ಕುಳಿತಳು ರೈಲು ನಿಧಾನವಾಗಿ ಚಲಿಸಲು ಶುರು ಮಾಡಿದಾಗ. ವಸಂತ್ ಫ್ಲಾಟ್ ಫಾರಂ ಅಲ್ಲಿ ನಿಂತು ಅವಳನ್ನು ನೋಡುತ್ತಿದ್ದ. ಅನನ್ಯ ಕಿಟಕಿಯಿಂದ ಛತ್ರಿಯನ್ನು ಹೊರತೆಗೆದು ಅದರ ಮೂಲಕ ಅವನಿಗೆ ಆಲೂಗಡಿಸಿ ಸನ್ನೆ ಮಾಡಿದಳು. ಅವಳನ್ನೇ ನೋಡುತ್ತಾ ನಿಂತಿರುವ ವಸಂತ ರೈಲಿನ ಕೊನೆಯ ಭೋಗಿ ತಿರುವಿನಲ್ಲಿ ಕಣ್ಮರೆಯಾಗಿ ಇಡೀ ಪ್ಲಾಟ್ ಫಾರ್ಮ್ ಒಮ್ಮೆಲೇ ಸ್ಮಶಾನದಂತೆ ಭಾಸವಾಯಿತು. ವಸಂತನ ಕೈಯಲ್ಲಿದ್ದ ಪೆನ್ನು ಹಾಗೆ ನಿಂತಿತ್ತು. ಯಾರೋ ಅಪರಿಚಿತ ವ್ಯಕ್ತಿ ಬಂದು ಬರಿ ಅರ್ಧ ಗಂಟೆಯಲ್ಲೇ ಅವರಿಸಿಕೊಳ್ಳಲು ಸಾಧ್ಯವೆ. ಅವರ ಮೇಲೆ ಪ್ರೀತಿ ಯಾಗಲು ಸಾಧ್ಯವೇ ಎಂಬ ಪ್ರಶ್ನೆ ಅವನನ್ನು ಕಾಡ ತೊಡಗಿತು. "ಅವಳು ಹೋದ ಮೇಲೆ ಅವನ ದಿನಚರಿ ಬದಲಾಗಿ ಹೋಯಿತು." ಮನೆಗೆ ಬಂದವನಿಗೆ ಆ ದಿನ ರಾತ್ರಿ ನಿದ್ದೆಯೇ ಬರಲಿಲ್ಲ ಕಣ್ಣು ಮುಚ್ಚಿದರೆ ಸಾಕು. ಮಳೆಯ ಹನಿ ಸಿಡಿದಾಗ ಅವಳು ಬಳೆ ಸರಿಸಿದ ಆ ಸಣ್ಣ ಸದ್ದು, ಮುಂಗುರುಳನ್ನು ಹಿಂದಕ್ಕೆ ತಳ್ಳಿದ ಆ ಮುಗ್ದ ಮುಖ. ಕಿಟಕಿಯಿಂದ ಛತ್ರಿಯನ್ನು ತೂಗಡಿಸಿ ನಕ್ಕ ಆ ಕೊನೆಯ ನೋಟ ಇವೆ ಕಣ್ಣೆದುರು ಸುಳಿಯುತ್ತಿದ್ದವು. ಟೇಬಲ್ ಮೇಲಿದ್ದ ತನ್ನ ಹಳೆಯ ಡೈರಿ ತೆರೆದ. ಅದರ ಮೊದಲ ಪುಟದ ಅಂಚು ಮಳೆಗೆ ಸ್ವಲ್ಪ ನೆನೆದು ನೆರೆಗೆಯಾಗಿತ್ತು; ಅವಳು "ಹೇ... ನಿಮ್ಮ ಡೈರಿ ಒದ್ದೆಯಾಗುತ್ತಿದೆ ನೋಡಿ" ಎಂದ ಆ ಮೊದಲ ಧ್ವನಿ ಅವನ ಕಿವಿಯಲ್ಲೇ ಮತ್ತೆ ಮತ್ತೆ ಅನುರಾಣಿಸಿತು.

ಸ್ಟೇಷನ್ ಗೆ ತಪ್ಪದ ನಡಿಗೆ:

ಮರುದಿನದಿಂದ ವಸಂತನ ಬದುಕಿನಲ್ಲಿ ಒಂದು ಹೊಸ ಅಭ್ಯಾಸ ಆರಂಭವಾಯಿತು. ವಸಂತ್ ಬಳಿ ಅವಳ ಫೋನ್ ನಂಬರ್ ಮತ್ತು ಅವಳ ಊರು ಕೇರಿ ಏನೂ ಕೂಡ ಗೊತ್ತಿರಲಿಲ್ಲ ಕೇವಲ "ಅನನ್ಯ" ಎಂಬ ಹೆಸರು ಮಾತ್ರ ಅವನಿಗೆ ಗೊತ್ತಿತ್ತು. ದಿನವೂ ಸಂಜೆ ಅದೇ ಸಮಯಕ್ಕೆ ಬ್ಯಾಗ್ ತಗುಲಿಸಿಕೊಂಡು ರೈಲ್ವೆ ಸ್ಟೇಷನ್ಗೆ ಅವಳು ನಿಂತಿರುವ ಹೋಗಿರುವ ಬೆಂಚ್ ಮೇಲೆ ಕೂರಲೂ ಶುರುಮಾಡಿದ. ಪ್ರತಿ ಬಾರಿಯೂ ದೂರದಿಂದ ರೈಲಿನ ಹಾರನ್ ಕೇಳಿ ಬಂತು, ಜನ ಇಳಿಯುವಾಗ ಅವನ ಹೃದಯದ ಬಡಿತ ಹೆಚ್ಚಾಗುತ್ತಿತ್ತು. ಎಲ್ಲಿಯಾದರೂ ಹಳದಿ ಛತ್ರಿ ಕಾಣಿಸುತ್ತದೆಯೇನೋ ಎಂದು ಕಣ್ಣುಗಳು ಕಾತುರದಿಂದ ಅರಸುತ್ತಿದ್ದಾವು. ಆದರೆ ದಿನಗಳು ಉರುಳಿದಂತೆ, ಜನ ಬರುತ್ತಿದ್ದರು ಹೋಗುತ್ತಿದ್ದರು ಅನನ್ಯ ಮಾತ್ರ ಬರಲಿಲ್ಲ. ಆದರೆ ಒಂದು ದಿನ ಎಂದಿನಂತೆ ಜನರು ಬರುತ್ತಿದ್ದರು ಹೋಗುತ್ತಿದ್ದರು ಆದರೆ ಅವತ್ತು ಯಾರೋ ಒಬ್ಬಳು ಹಳದಿ ಛತ್ರಿಯನ್ನು ಹಿಡಿದಿಕೊಂಡು ರೈಲ್ವೆ ಇಂದ ಕೆಳಗಡೆ ಇಳಿಯುತ್ತಾಳೆ. ಇವನು ತುಂಬಾ ಖುಷಿ ಇಂದ ಅವಳ ಹತ್ತಿರ ಹೋಗಿ. "ಅನನ್ಯ ಅವ್ರೆ ಅನನ್ಯ ಅವ್ರೆ" ಎಂದು ಕೂಗುತ್ತಾನೆ ಆದರೆ ಅವಳು ಅನನ್ಯ ಆಗಿರುವುದಿಲ್ಲ ಬೇರೆ ಯಾರೋ ಆಗಿರುತ್ತಾರೆ.

ನೆನಪುಗಳು ಅಕ್ಷರಗಳಾದವು:

ಆ ಕಾಯುವಿಕೆ ಮತ್ತು ನಿರಾಸೆ ಅವನಲ್ಲಿ ಒಂದು ರೀತಿಯ ತೀವ್ರವಾದ ಮೌನವನ್ನು ಹುಟ್ಟು ಹಾಕಿತು. ಒಮ್ಮೆ ಹಾಗೆ ಸಂಜೆ ಸುರಿಮಳೆ ಸುರಿಯುತ್ತಿದ್ದಾಗ ಸ್ಟೇಷನ್ ಅದೇ ಬೆಂಚಿನ ಮೇಲೆ ಕುಳಿತು ಡೈರಿ ತೆರೆದ. ಮನಸ್ಸಿನಲ್ಲಿರುವ ಭಾವನೆಯನ್ನು ಹೇಳಲಾಗದ ಭಾರವನ್ನುಯಾರೊಂದಿಗೆ ಹೇಳಿಕೊಳ್ಳಲು ಅವನಿಗೆ ಯಾರು ಸ್ನೇಹಿತರು ಇರಲಿಲ್ಲ ಕೊನೆಗೆ ಹೊರ ಹಾಕಲು ಅವನಿಗೆ ಸಿಕ್ಕ ಏಕೈಕ ದಾರಿ ಅವನ ಲೇಖನಿ ಮತ್ತು ಡೈರಿ. ಅವನು ಬರೆಯಲು ಶುರುಮಾಡಿದ್ದು ಕೇವಲ ಕಲ್ಪನೆಯ ಕವಿತೆಗಳಲ್ಲ. ತಾನು ಅನುಭವಿಸಿದ ಪ್ರತಿಯೊಂದು ಕ್ಷಣವನ್ನು ಹೀಗೆ ಬರೆಯುತ್ತಾನೆ ಮೊದಲ ದಿನ ಅವಳು ಮಳೆಯಲ್ಲಿ ಓಡಿಬಂದ ಗಾಳಿಯಲ್ಲಿ ತೆಲಿಬಂದ ಮಣ್ಣಿನ ಸುವಾಸನೆ. ಅರ್ಧ ಗಂಟೆಯ ಮಾತುಗಳಲ್ಲಿ ಅವಳು ಬಿಟ್ಟು ಹೋದ ಆ ಸುಂದರ ನಗು. ಟ್ರೈನ್ ಹೊರಟಾಗ ಕಿಟಕಿಯಿಂದ ಬೀಸಿದ ಕೈ ಮತ್ತು ಮನಸ್ಸಿನಲ್ಲಿ ಉಳಿದ ಶೂನ್ಯ.

ಈ ರೀತಿ ಇನ್ನು ತುಂಬಾ ಬರೆಯುತ್ತಾ ಹೋದನು. ಅವನಿಗೆ ಅನ್ನಿಸಿತು" ಅವಳು ನನಗೆ ಸಿಗದೇ ಇರಬಹುದು ಆದರೆ ಅವಳು ನನ್ನಲ್ಲಿ ಮೂಡಿಸಿದ ಈ ಭಾವನೆ ಎಂದಿಗೂ ಸಾಯಬಾರದು. ನನ್ನ ಪ್ರೀತಿ ನಿಜವಾಗಿದ್ದರೆ ನನ್ನ ಈ ಕಾಯುವಿಕೆಗೆ ಒಂದು ರೂಪ ಸಿಗಬೇಕು ಎಂದು ಅಂದುಕೊಳ್ಳುತ್ತಿದ್ದ ಮತ್ತು ಆ ಸಣ್ಣ ಡೈರಿಯ ಪುಟಗಳು ಸಾಲದಾದವು. ಪ್ರತಿದಿನ ರಾತ್ರಿ ಕೋಣೆಯ ಸಣ್ಣ ದೀಪದ ಬೆಳಕಿನಲ್ಲಿ ನೂರಾರು ಕವಿತೆಗಳು, ಸಾಲುಗಳು ಹುಟ್ಟಿಕೊಂಡವು;ಕಾಯುವಿಕೆಯು ತಪ್ಪನ್ನು ಮಳೆಯ ಸೌಂದರ್ಯ ಮತ್ತು ಅನಿರೀಕ್ಷಿತಾವಾಗಿ ಸಿಕ್ಕು ಕಳೆದುಹೋದ ಒಬ್ಬ ಹುಡುಗಿನ ನೆನಪಿನ ಸಂಗ್ರಹವಾಗಿತ್ತು ಮತ್ತು ಹೀಗೆ ಎಷ್ಟೋ ದಿನಗಳು ಕಳೆದು ಹೋದವು ಅವನು ತುಂಬಾ ಕವನ ಬರೆದನು.ಅವನೂ ತನ್ನ ಕಾಲೇಜಿನಲ್ಲಿ ತನ್ನ ಕ್ಲಾಸ್ ಮೆಂಟ್ ನಾ ಒಬ್ಬ ಹುಡುಗಿಯನ್ನ ಸ್ನೇಹಿತೆಯನ್ನಾಗಿ ಮಾಡಿಕೊಂಡನು ಆದರೆ ಇದರ ಬಗ್ಗೆ ಅವ್ನು ಏನು ಸಹ ಅವಳಿಗೆ ಹೇಳಿರಲಿಲ್ಲ. ಒಂದು ದಿನ ಅವನ ಸ್ನೇಹಿತೆ ಅವನ ಮನೆಗೆ ಭೇಟಿಯಾಗುತ್ತಾಳೆ ಅವನು ತನ್ನ ಬೆಂಚಿನ ಮೇಲೆ ಡೈರಿ ಮತ್ತು ಲೇಖನೆಯೊಂದಿಗೆ ಮಲಗಿರುತ್ತಾನೇ. ಅವಳು ಆ ಡೈರಿಯ ಪುಸ್ತಕವನ್ನು ಓದುತ್ತಾಳೆ ಓದುತ್ತಾ ಓದುತ್ತಾ ಅವಳ ಕಣ್ಣಂಚಿನಲ್ಲಿ ನೀರು ಬರಲು ಶುರುವಾಗುತ್ತೆ. ಇವನೂ ಒಬ್ಬ ಹುಡುಗೀಗೋಸ್ಕರ ಇಷ್ಟೆಲ್ಲಾ ನೊಂದಿದ್ದಾನಾ. ಅವಾಗ ಅವನು ಎಚ್ಚರುಗೋಳ್ಳುತ್ತಾನೆ ಆಗ ಅವಳು ಅವನಿಗೆ ಹೇಳುತ್ತಾಳೆ"ಇದು ನಿನ್ನ ಡೈರಿಯಲ್ಲಿ ಮುಚ್ಚಿಡ ಬೇಕಾದ ಬರಹವಲ್ಲ" "ಇದು ಜಗತ್ತಿಗೆ ತಿಳಿಯಬೇಕಾದ ಕಾವ್ಯ" ಎಂದಾಗ ವಸಂತನಿಗೆ ಹೊಳೆದಿದ್ದು ಒಂದೇ ಉಪಾಯ " ನನ್ನ ಧ್ವನಿ ಅವಳಿಗೆ ತಲುಪಲು ಸಾಧ್ಯವಿಲ್ಲ. ಆದರೆ ಎಂದಾದರೂ ಒಂದು ದಿನ ಈ ಪುಸ್ತಕ ಅವಳ ಕೈ ಸೇರದರೆ ಅವಳಿಗೂ ಗೊತ್ತಾಗಲಿ.... ಅವಳಿಗಾಗಿ ಕಾದ ಒಬ್ಬ ವ್ಯಕ್ತಿ ಈ ಜಗತ್ತಿನಲ್ಲಿದ್ದಾನೆ ಎಂದು"ರೈಲು ನಿಲ್ದಾಣದಲ್ಲಿನ ಭೇಟಿ"ಎಂಬ ಪುಸ್ತಕವನ್ನು ಬಿಡುಗಡೆ ಮಾಡುತ್ತಾನೆ. ಬಿಡುಗಡೆ ಮಾಡಿ ಒಂದು ವರ್ಷದ ನಂತರ ಆ ಪುಸ್ತಕ ಎಲ್ಲ ಕಡೆ ಪ್ರಚಾರ ಮತ್ತು ಒಳ್ಳೆಯ ಪುಸ್ತಕವೆಂದು ಹೆಸರಾಗುತ್ತದೆ. ಆದರೂ ಅವನು ಅವಳ ಕೈಗೆ ಪುಸ್ತಕ ತಲುಪಿತೋ ಇಲ್ವೋ ಅವಳು ಈ ಪುಸ್ತಕವನ್ನು ಓದಿದಳೋ ಇಲ್ಲವೋ ಅನ್ನೋ ಚಿಂತೆಯಲ್ಲೇ ಇದ್ದನು. ಆದರೆ ಒಂದು ದಿನ ಜಿಲ್ಲಾ ಮಟ್ಟದಲ್ಲಿ "ಒಳ್ಳೆಯ ಪುಸ್ತಕ ಬರಹಗಾರಿಗೆ ಪ್ರಶಸ್ತಿ ವಿತರಣೆ ಸಮಾರಂಭವು ಇತ್ತು ಅ ಪ್ರಶಸ್ತಿಗೆ ವಸಂತ ಆಯ್ಕೆಯಾಗಿದ್ದನು.ಅವನು ಮತ್ತು ಅವನ ಸ್ನೇಹಿತೆ ಇಬ್ಬರು ಆ ಸಮಾರಂಭಕ್ಕೆ ಶಿಸ್ತಿನಿಂದ ಹೋಗುತ್ತಾರೆ. ಅಲ್ಲಿ ಅವನ ಬರಹವನ್ನು ಓದಿ ಬಂದಿರೋ ಜನಗಳು ತುಂಬಾ ಇದ್ದರು ಎಲ್ಲ ಸನ್ಮಾನ ಆದಮೇಲೆ ಜನರು ಅವನ ಆಟೋಗ್ರಾಫ್ ಬರೆಸಿಕೊಳ್ಳಲು ಹೋದರು ಅವನಿಗೆ ಆಟೋಗ್ರಾಫ್ ಹಾಕಿ ಹಾಕಿ ಕೈ ನೋವಾಗಿತ್ತು ಆದರೆ ಅವನ ಕಣ್ಣಲಿ ಕಂಬನಿ ಬರಲು ಶುರುವಾಯಿತು."ಪುಸ್ತಕ ಬರೆಯುವಾಗ ನನ್ನ ನೋವನ್ನು ಕೇಳೋರು ಯಾರು ಇದ್ದಿಲ್ಲ. ಇವಾಗ ನೋಡಿದರೆ ನಾನು ಬರೆದಿರುವ ಪುಸ್ತಕವನ್ನು ಓದಿ ಇಷ್ಟೊಂದು ಜನ ನನ್ನ ನೋಡಲು ಬಂದಿದ್ದಾರೇ. "ಆದರೆ ಇದಕ್ಕೆ ಕಾರಣ ನನ್ನ ಸ್ನೇಹಿತೆ ಅವಳು ಇರಲಿಲ್ಲ ಅಂದರೇ ನಾನು ಈ ಮಟ್ಟಕ್ಕೆ ಬರುತ್ತಿರಲಿಲ್ಲ ಎಂದು ಮನಸ್ಸಿನೊಳಗೆ ಅಂದುಕೊಂಡ. ಎಲ್ಲರು ಆಟೋಗ್ರಾಫ್ ಹಾಕಿಸಿಕೊಂಡು ಮನೆಗೆ ತೆರೆಳಿದರು ಆ ಸಭೆ ಯಲ್ಲಿ ಯಾರು ಕೂಡ ಇರಲಿಲ್ಲ ಇದ್ದಿದ್ದು ಅವನ ಸ್ನೇಹಿತೆ ಮತ್ತು ಅವನು.ಇನ್ನೊಂದು ಅಚ್ಚರಿಯ ಸಂಗತಿ ಏನು ಅಂದರೆ ಅವನು ಯಾರಿಗೋಸ್ಕರ ಈ ಪುಸ್ತಕವನ್ನು ಬರೆದಿದ್ದಾನೋ ಅವಳು ಆ ಸಭೆಗೆ ಬಂದಿದ್ದಳು. ಅವಳು ಸಭೆಯ ಪಕ್ಕದಲ್ಲಿರುವ ಕೋಣೆಯಲ್ಲಿ ಒಬ್ಬಳೇ ಕೂತು ಅವನು ಬರೆದಿದ್ದ ಪುಸ್ತಕವನ್ನು ಓದುತ್ತಿರುತ್ತಾಳೆ. ಓದುತ್ತಾ ಓದುತ್ತಾ ಅವಳು ಅಳಲು ಶುರು ಮಾಡುತ್ತಾಳೆ. ಅವಳ ಪಿಸುಧ್ವನಿ ಅವನಿಗೆ ಕೇಳುಸುತ್ತದೆ ಯಾರು ಅಳುತ್ತಿರುದು ಎಂದು ನೋಡಲು ಹೋಗುತ್ತಾನೆ ಅವನು ಅವಳನ್ನು ನೋಡಲು ಹೊರಟಾಗ ಮಳೆ ಬರಲು ಶುರುವಾಗುತ್ತದೆ. ಅವಳು ಅವತ್ತಿನ ದಿನ ಅದೇ ಹಳದಿ ಬಣ್ಣದ ಛತ್ರಿ, ಅವತ್ತು ಅವರ ಭೇಟಯ ದಿನ ಹಾಕಿಕೊಂಡು ಬಂದಿರುವ ಉಡುಪನ್ನೇ ತೊಟ್ಟಿರುತ್ತಾಳೆ ಮತ್ತು ಬಳೆಯ ಶಬ್ದ ಕೂಡ ಬರುತ್ತಿರುತ್ತವೆ .ಕೂತಿರುವ ಅವಳ ಹತ್ತಿರ ವಸಂತ ಹೋಗುತ್ತಾನೆ ಹತ್ತಿರ ಹೋದಂತೆ ಅವನ ಹೃದಯದ ಬಡಿತ ಜಾಸ್ತಿ ಆಗುತ್ತದೆ. ಮನಸಿನಲ್ಲಿ ಇವಳು ಅನನ್ಯ ನಾ ಅಥವೋ ಇಲ್ಲವೋ ಅನ್ನುವ ಅನುಮಾನ ಮತ್ತು ಹೃದಯದ ಬಡಿತ ಲಬ್ ಡಬ್, ಲಬ್ ಡಬ್ ಎಂದು ಜಾಸ್ತಿ ಬಡೆಯಲು ಶುರು ಮಾಡುತ್ತೆ ಮತ್ತು ಅವನ ದೇಹ ಪೂರ್ತಿ ನಡುಗುತ್ತಾ ಇರುತ್ತದೆ. ಅವಳ ಹತ್ತಿರ ಹೋದನು ಅವಳು ಮೆಜಿನ ಮೇಲೆ ಪುಸ್ತಕವಿಟ್ಟು ಅದಕ್ಕೆ ತಲೆ ಅದರ ಮೇಲೆ ಇಟ್ಟು ಅಳುತ್ತ ಇರುತ್ತಾಳೆ. ಅವಳಿಗೆ ಗೊತ್ತಿರುತ್ತೆ ಅವನು ನನ್ನ ಬಳಿ ಬರುತ್ತಿದ್ದಾನೆ ನನ್ನನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾನೆ ಎಂದು. ಅವನು ಅವಳ ಹತ್ತಿರ ಬಂದ ತಕ್ಷಣ ಅವಳು ತನ್ನ ಕಣ್ಣೀರನ್ನು ಒರೆಸಿಕೊಂಡು ಹೇಳುತ್ತಾಳೆ" ನಿಜ ಹೇಳಲೇ ವಸಂತ್" ಅವಳು ಧ್ವನಿ ತಗ್ಗಿಸಿ ಹೇಳಿದಳು" ಆವತ್ತು ಆ ಟ್ರೈನ್ ಹತ್ತಿದ ಮೇಲೆ ಕಿಟಕಿಯಿಂದ ನಿಮ್ಮ್ಮ ಕಣ್ಣಲ್ಲಿದ್ದ ಆ ಹುಡುಕಾಟ ನನಗೆ ತುಂಬಾ ಕಾಣಿಸಿತು.ನಾನು ನಿಮ್ಮನು ಭೇಟಿಯಾಗಬೇಕೆಂದು ನಾನು ಬೆಳಗ್ಗೆ 10 ಗಂಟೆಗೆ ರೈಲ್ವೆ ನಿಲ್ದಾಣಕ್ಕೆ ಬಂದು ನೀವು ಕೂತಿರುವ ಬೆಂಚಿನ ಮೇಲೆ ಕೋರುತ್ತಿದ್ದೇನೆ ದಿನಾಲೂ 1 ಇಲ್ಲ 2 ಗಂಟೆ ಕೂತು ಹೋಗುತ್ತಾ ಇದ್ದೆ. ಆದ್ರೆ ನೀವು ಬರಲೇ ಇಲ್ಲ. ಇದನ್ನು ಕೇಳಿ ಆಶ್ಚರ್ಯದಿಂದ " ಏನು ನೀವು ನನಗಾಗಿ ರೈಲ್ವೆ ನಿಲ್ದಾಣ ದಲ್ಲಿ ಕಾಯುತ್ತಿದ್ದಾರಾ. ನಾನು ಕೂಡ ನಿಮ್ಮನ್ನು ನೋಡಲು ಭೇಟಿಯಾಗಲು ಕಾಯಿತ್ತಿದ್ದೆ ಸಾಯಂಕಾಲ 5 ಗಂಟೆಗೆ. ಯಾರಾದರು ಹಳದಿ ಛತ್ರಿಯನ್ನು ಹಿಡಿದು ಕೊಂಡು ಬಂದರೇ ನೀವೇ ಎಂದು ಕೊಳ್ಳುತ್ತಿದ್ದೆ. ಅವರಿಬ್ಬರ ನಡುವೆ ಮಾತು ಮುಗಿದ ಮೇಲೆ ಮಳೆಯೂ ನಿಂತು ಹೋಯಿತು. ಇದಕ್ಕೆಲ್ಲ ಕಾರಣ ಈ ಪುಸ್ತಕ ಮತ್ತು ನನ್ನ ಸ್ನೇಹಿತೆ ಎಂದು ಅನನ್ಯಳಿಗೆ ಹೇಳುತ್ತಾನೆ ಅವಳು ಅವಳಿಗೆ ನಾವಿಬ್ಬರು ಒಂದಗಲು ಕಾರಣ ನೀವೇ ಕಾರಣ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಮತ್ತು ನಿಮಗೆ ಏನಾದ್ರು ಸಹಾಯ ಬೇಕಿದ್ದರೇ ಹೇಳಿ ಅಂತೇ ಕೇಳುತ್ತಾಳೆ. ಅವಳು ನಂಗೆ ನಿಮ್ಮ ಇಬ್ಬರ ಜೊತೆ ಇರಬೇಕು ನಂಗೆ ಅಷ್ಟೇ ಸಾಕು ಎಂದು ಹೇಳುತ್ತಾಳೆ ಅವಳು ಸರಿ ಎನ್ನುತ್ತಾ. 3 ಜನ ಬೆಂಗಳೂರು ರೈಲ್ವೆ ನಿಲ್ದಾಣಕ್ಕೇ ಹೋಗ್ತಾರೆ. ಹೋಗಿ 10 ನಿಮಿಷಕ್ಕೆ ಟ್ರೈನ್ ಬರುತ್ತೆ. ಅದನ್ನು ನೋಡಿ ವಸಂತ ಅವಳಿಗೆ ಹೇಳುತ್ತಾನೆ ಇವತ್ತು ಒಬ್ಬಳೇ ಹೋಗುತ್ತೀಯೋ ಅಥವಾ ನನ್ನನ್ನು ಕರೆದುಕೊಂಡು ಹೋಗಿತ್ತಿಯೋ ಅಂತ ಕೇಳುತ್ತಾನೆ ಅವಳು ಏನು ಹೇಳಲ್ಲ. ತನ್ನ ಹತ್ತಿರ ಇರುವ ಛತ್ರಿಯನ್ನು ತೆಗೆದು ಅವನ ಕೈ ಹಿಡಿದು ರೈಲು ಹತ್ತುತ್ತಾರೆ ಮತ್ತು ಅವಳ ಸ್ನೇಹಿತೆ ಕೂಡ. ಸುರಿದು ಹೋದ ಮಳೆ ನೆಲವನ್ನು ತಂಪಾಗಿಸಿದಂತೆ, ನಿನ್ನ ನೆನಪುಗಳೇ ನನ್ನ ಕಾವ್ಯವಾದವು... ಅವತ್ತು ರೈಲು ನಿನ್ನನ್ನು ದೂರ ಕೊಂಡೊಯ್ದಿರಬಹುದು, ಆದರೆ ಇವತ್ತು ಅದೇ ಮಳೆ ನಮ್ಮಿಬ್ಬರನ್ನೂ ಒಂದೇ ಛತ್ರಿಯಡಿಯಲ್ಲಿ ನಿಲ್ಲಿಸಿದೆ."

-ಧನರಾಜ್ ಖಾನಾಪೂರ. ಯುವ ಕವಿ ಹಾಗೂ ಡಿಪ್ಲೋಮಾ ವಿದ್ಯಾರ್ಥಿ.