ಜಾಲಹಳ್ಳಿ, ಅ.26: ಸಮೀಪದ ಕಕ್ಕಲದೊಡ್ಡಿ ಗ್ರಾಮದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಗ್ರಾಮದ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ಸಾಧನೆಗಳನ್ನು ಸ್ಮರಿಸಿದರು.
ರಾಮಾಯಣ ಮಹಾಕಾವ್ಯವನ್ನು ರಚಿಸುವ ಮೂಲಕ ಮಹರ್ಷಿ ವಾಲ್ಮೀಕಿ ಅವರು ಜಗತ್ತಿಗೆ ಸತ್ಯ, ಧರ್ಮ, ನ್ಯಾಯ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ನೀಡಿದ್ದಾರೆ. ಅವರ ತತ್ವಾದರ್ಶಗಳು ಸಮಾಜಕ್ಕೆ ಸದಾ ಮಾರ್ಗದರ್ಶಕವಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಾಮರಸ್ಯ ಹಾಗೂ ಸಹಬಾಳ್ವೆಯನ್ನು ಬೆಳೆಸಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಅಂಬರಯ್ಯ ಸ್ವಾಮಿ ಹಿರೇಮಠ, ರಾಚಯ್ಯ ಸ್ವಾಮಿ ಮಠ, ಶಂಕರ್ ಹೂಗಾರ್, ಅಯ್ಯನಗೌಡ ಮಾಲಿ ಪಾಟೀಲ್, ಮಲ್ಲಿಕಾರ್ಜುನ ಮಲ್ಕಾಪುರ, ಮಲ್ಲಿಕಾರ್ಜುನ ಬೆನ್ಕನ್, ಯಂಕನಗೌಡ ಮಾಲಿ ಪಾಟೀಲ್, ಯಲ್ಲನಗೌಡ ಬೆನ್ಕನ್, ಗುರುನಾಥ ರೆಡ್ಡಿ ಕಮತಿಗೆ, ಭೀಮಗೌಡ ಮಾಲಿ ಪಾಟೀಲ್, ಶರಣಗೌಡ ಬೆನಕನ್, ಮಂಜುನಾಥ ಮಲ್ಕಾಪುರ, ಶಿವರೆಡ್ಡಿ ಗಣೇಕಲ್, ಕೊಳಪ್ಪ ದೇಸಾಯಿ, ತಿರುಪತಿ ಹುನಗುಂದವಾಡ, ಮಲ್ಲಣ್ಣ ಮಲ್ಕಾಪುರ, ತಿಮ್ಮಣ್ಣ ಕಾಕರಗಲ್, ಬುಡ್ಡಪ್ಪ ಅಸರಾತಿ, ಶಿವಪ್ಪ ವಟಗಲ್ಲ, ಭೈರಪ್ಪ ಜಮ್ಮಲದಿನ್ನಿ, ಮಾಜಿ ಸದಸ್ಯ ಕರಿಯಪ್ಪ ಜಮಲದಿನ್ನಿ, ಸುರೇಶ್ ನಾಯಕ ಅಸರಾತಿ, ಹನುಮಂತ ರೆಡ್ಡಿ ಅಸರಾತಿ, ಇಮಾಮ್ ಸಾಬ್ ನದಾಫ್ ದೊಡ್ಮನಿ, ರಾಜಸಾಬ್ ನದಾಫ್ ದೊಡ್ಮನಿ, ಗೋವಿಂದರೆಡ್ಡಿ ವಟಗಲ್ಲ, ಚಂದ್ರಮ ಅಸರಾತಿ, ಶಿವಪ್ಪ ನಾಯಕ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



