ರಾಯಚೂರು ಅ. 07 (ಕರ್ನಾಟಕ ವಾರ್ತೆ): ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ 2023ನೇ ವರ್ಷದಲ್ಲಿ ಪ್ರಕಟಗೊಂಡು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಸ್ವೀಕರಿಸಿದ ಪುಸ್ತಕಗಳನ್ನು ಆಯ್ಕೆ ಸಮಿತಿಯು ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಆಯ್ಕೆಯಾದ ಮತ್ತು ಆಯ್ಕೆಯಾಗದ ಪುಸ್ತಕಗಳ ಪ್ರದರ್ಶನವನ್ನು ಡಾ.ವಿಷ್ಣುವರ್ಧನ ಸ್ಮಾರಕ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರ, ಎಂ.ಸಿ.ಬಡಾವಣೆ, ವಿಜಯನಗರ, ಬೆಂಗಳೂರು-560040 ಇಲ್ಲಿನ ಗ್ರಂಥಾಲಯದ ಸಭಾಂಗಣದಲ್ಲಿ ಅಕ್ಟೋಬರ್‌‍ 12ರಿಂದ 14ವರೆಗೆ ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಏರ್ಪಡಿಸಲಾಗುವುದು.

ಕಾರಣ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಸಲ್ಲಿಸಿದ ಲೇಖಕರು, ಲೇಖಕ-ಪ್ರಕಾಶಕರು, ಮತ್ತು ಪುಸ್ತಕ ಮಾರಾಟಗಾಗಗರು ಆಕ್ಷೇಪಣೆಗಳಿದ್ದಲ್ಲಿ ದಿನಾಂಕ: 12.10.2026 ರಿಂದ 22.10.2026 ಸಂಜೆ 5.30 ಒಳಗಾಗಿ ಆಯುಕ್ತರು ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ,4ನೇ ಮಹಡಿ, ಡಾ:ಅಂಬೇಡ್ಕರ್‌‍ ವೀದಿ, ಬೆಂಗಳೂರು-560001 ಇಲ್ಲಿಗೆ ಲಿಖಿತವಾಗಿ ಮನವಿಗಳನ್ನು ಸಲ್ಲಿಸಲು ತಿಳಿಸಿದೆ. ನಂತರ ಬಂದ ಮನವಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ರಾಯಚೂರು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಿರ್ಮಲಾ ಹೆಚ್. ಹೊಸೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.