ರಾಯಚೂರು: ಜೆಸ್ಕಾಂ ಇಲಾಖೆಯಿಂದ ರಾಯಚೂರು ಜಿಲ್ಲೆಯಲ್ಲಿ ಆಗಸ್ಟ್-2026ರ ಮಾಹೆಯಲ್ಲಿ ಜೆಸ್ಕಾಂ ಅಧಿಕಾರಿಗಳು, ಜಾಗೃತದಳದವರು ದಾಳಿ ಮಾಡಿ ಅನಧಿಕೃತ ವಿದ್ಯುತ್ ಬಳಕೆ ಮಾಡುತ್ತಿದಂತಹ 195 ಪ್ರಕರಣಗಳು ಪತ್ತೆ ಹಚ್ಚಿ ಸುಮಾರು 18.95 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದ್ದು, ಅನಧಿಕೃತವಾಗಿ ವಿದ್ಯುತ್ ಬಳಕೆ ಮಾಡುತ್ತಿರುವ ಗ್ರಾಹಕರು ತಮ್ಮ ಸ್ಥಾವರಗಳನ್ನು ಮೀಟರ್ ಅಳವಡಿಸಿಕೊಂಡು ಸಕ್ರಮಗೊಳಿಸಬೇಕು. ಹಾಗೂ ಬಾಕಿ ಇರುವ ಸ್ಥಾವರದ ಗ್ರಾಹಕರಗಳು ಬಾಕಿಯನ್ನು ಪಾವತಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಅನಧಿಕೃತ ಸ್ಥಾವರಕ್ಕೆ ಹೆಚ್ಚಿನ ದಂಡವನ್ನು ವಿಧಿಸಲಾಗುವುದು ಹಾಗೂ ಕಾನೂನಿನ ಪ್ರಕಾರ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



