ರಾಯಚೂರು: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ರಾಯಚೂರು ಘಟಕದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ.
ಅಧ್ಯಕ್ಷರಾಗಿ ಡಾ. ಬಸವರಾಜ ಎಂ. ಪಾಟೀಲ್, ಉಪಾಧ್ಯಕ್ಷರಾಗಿ ಡಾ. ವಿಜಯಶಂಕರ್, ಗೌರವ ಕಾರ್ಯದರ್ಶಿಯಾಗಿ ಡಾ. ಪವನ್ ಕಲ್ಲಿಮಠ, ಖಜಾಂಚಿಯಾಗಿ ಡಾ. ಅರುಣ್ ಮಸ್ಕಿ, ಜಂಟಿ ಕಾರ್ಯದರ್ಶಿಯಾಗಿ ಡಾ. ವೆಂಕಟೇಶ್ ನಾಯಕ್ ಹಾಗೂ ಸಹಾಯಕ ಕಾರ್ಯದರ್ಶಿಯಾಗಿ ಡಾ. ನೇಹಾ ಸುಖಾನಿ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳಿಗೆ ವೈದ್ಯಕೀಯ ವಲಯದ ಗಣ್ಯರು, ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಅವರ ನಾಯಕತ್ವದಲ್ಲಿ ಐಎಂಎ ರಾಯಚೂರು ಘಟಕವು ಇನ್ನಷ್ಟು ಉತ್ತಮ ಸೇವೆ, ಸಂಘಟನಾ ಬಲವರ್ಧನೆ ಹಾಗೂ ವೈದ್ಯಕೀಯ ಕ್ಷೇತ್ರದ ಹಿತಾಸಕ್ತಿಗಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದ್ದಾರೆ.



