ರಾಯಚೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹಾ ಜಿಲ್ಲಾ ಮಟ್ಟದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆ-2026ರ ಜಿಲ್ಲಾ ವ್ಯಾಪ್ತಿಯ ಹಿರಿಯ ನಾಗರಿಕರಿಗೆ ಸೆಪ್ಟಂಬರ್ 28ರ ಬೆಳಿಗ್ಗೆ 10.30ಗಂಟೆಗೆ ರಾಯಚೂರು ನಗರದ ಜಿಲ್ಲಾ ಮಹತ್ಮಾಗಾಂಧಿ ಕ್ರೀಡಾಂಗಣದಲ್ಲಿ ಹಿರಿಯ ನಾಗರೀಕರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರೀಕರ ಭಾಗವಹಿಸಿ ಯಶ್ವಸಿಗೊಳಿಸಬೇಕೆಂದು ಕೋರಲಾಗಿದೆ. ಮ್ಯೂಸಿಕಲ್ ಚೇರ್ ಮಹಿಳೆಯರು/ಪುರುಷರು 60 ರಿಂದ 70 ವರ್ಷ, ಬಿರುಸಿನ ನಡಿಗೆ ಮಹಿಳೆಯರು/ಪುರುಷರು 60 ರಿಂದ 69 ವರ್ಷ ಮತ್ತು 70 ವರ್ಷ ಹಾಗೂ ಮೇಲ್ಪಟ್ಟವರು, ಬಕೆಟ್‌ನಲ್ಲಿ ಬಾಲ್ ಎಸೆಯುವುದು ಮಹಿಳೆಯರು/ಪುರುಷರು 60 ರಿಂದ 69 ವರ್ಷ ಮತ್ತು 70 ವರ್ಷ ಹಾಗೂ ಮೇಲ್ಪಟ್ಟವರು ಭಾಗವಹಿಸಬಹುದಾಗಿದೆ. ಸಾಂಸ್ಕೃತಿಕ ಸ್ಪರ್ಧೇಗಳಿಗೆ ಸಂಬAಧಿಸಿದAತೆ ಗಾಯನ ಸ್ಪರ್ಧೇ ಪುರುಷರು/ಮಹಿಳೆಯರು 60 ರಿಂದ 69 ವರ್ಷ ಮತ್ತು 70 ವರ್ಷ ಹಾಗೂಮೇಲ್ಪಟ್ಟವರು, ಹಾಗೂ ಏಕ ಪಾತ್ರಾಭಿನಯ ಪುರುಷರು/ಮಹಿಳೆಯರು 60 ರಿಂದ 69 ವರ್ಷ ಮತ್ತು 70 ವರ್ಷ ಹಾಗೂಮೇಲ್ಪಟ್ಟವರು ಭಾಗವಹಿಸಬಹುದಾಗಿದೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಜಿಲ್ಲಾ ವ್ಯಾಪ್ತಿಯ ಹಿರಿಯ ನಾಗರಿಕರು ಸೆಪ್ಟಂಬರ್ 28ರ ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಮಹತ್ಮಾಗಾಂಧಿ ಕ್ರೀಡಾಂಗಣದಲ್ಲಿ ಹಾಜರಾಗಬೇಕೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.