ರಾಯಚೂರು: ನಗರದ ಹರಿಜನವಾಡ ಬಡಾವಣೆಯ ಶ್ರೀ ಸವರಮ್ಮ ಗುಡಿ ಗಜಾನನ ಯುವಕ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ‘ಬಿಗ್ ಡ್ಯಾಡಿ 3.0’ ಗಜಾನನ ಮೂರ್ತಿಯ ವಿಸರ್ಜನಾ ಮಹೋತ್ಸವ ಅತ್ಯಂತ ವೈಭವ ಹಾಗೂ ಅದ್ದೂರಿಯಾಗಿ ನೆರವೇರಿತು.

ವಿಸರ್ಜನಾ ಮೆರವಣಿಗೆಯಲ್ಲಿ ಹರಿಜನವಾಡದ ಯುವಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದರು. ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಯುವಕರು ಮಳೆಯಲ್ಲೇ ಉತ್ಸಾಹದಿಂದ ಕುಣಿದು ಕುಪ್ಪಳಿಸಿ ತಮ್ಮ ನೆಚ್ಚಿನ ಬಿಗ್ ಡ್ಯಾಡಿ ಗಣೇಶನಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.

ಸಾವಿರಾರು ಜನರು ಭಾಗವಹಿಸಿದ್ದರೂ ಮೆರವಣಿಗೆಯನ್ನು ಶಿಸ್ತು ಮತ್ತು ಒಗ್ಗಟ್ಟಿನಿಂದ ನಡೆಸಲಾಯಿತು. ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ವಿಸರ್ಜನಾ ಮಹೋತ್ಸವವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಈ ಮೂಲಕ ಹರಿಜನವಾಡದ ಯುವಶಕ್ತಿ, ಒಗ್ಗಟ್ಟು ಹಾಗೂ ಸೌಹಾರ್ದತೆ ಪ್ರದರ್ಶನಗೊಂಡಿತು ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ವಿಸರ್ಜನಾ ಮಹೋತ್ಸವದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪೊಲೀಸ್ ಇಲಾಖೆ, ಕೆಇಬಿ ಸಿಬ್ಬಂದಿ, ಪೌರಕಾರ್ಮಿಕರು, ಗೃಹರಕ್ಷಕರು, ಬಡಾವಣೆಯ ಹಿರಿಯರು, ಯುವಕರು, ತಾಯಂದಿರು, ಅಕ್ಕಂದಿರು ಹಾಗೂ ಸಾರ್ವಜನಿಕರಿಗೆ ಬಿಗ್ ಡ್ಯಾಡಿ ಗಜಾನನ ಯುವಕ ಸಮಿತಿ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದೆ.

ಸಮಿತಿಯ ಅಧ್ಯಕ್ಷ ಮುನ್ನ, ಉಪಾಧ್ಯಕ್ಷರಾದ ತಿಮ್ಮಪ್ಪ ಮತ್ತು ಸಿ.ಎನ್. ನರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ನರಸಪ್ಪ (ಚಿನ್ನಿ) ಮತ್ತು ಸಚಿನ್, ಖಜಾಂಚಿಗಳಾದ ವಿಷ್ಣು ಹಾಗೂ ಅಜಯ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.