ರಾಯಚೂರು ಸೆಪ್ಟಂಬರ್ 28 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2026-27ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆಪ್ಟಂಬರ್ 30ರಂದು ವಿವಿಧ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದ್ದು, ಆಸಕ್ತ ಕ್ರೀಡಾಪಟ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ವಿಭಾಗ ಮಟ್ಟದ ಹ್ಯಾಂಡಬಲ್, ಅಥ್ಲೇಟಿಕ್ಸ್, ಈಜು, ಜುಡೋ, ಟೆನ್ನಿಸ್, ಕೊಪ್ಪಳ ಜಿಲ್ಲೆಯಲ್ಲಿ ಟೇಕ್ವಾಂಡೋ, ನೆಟ್ ಬಾಲ್, ಕುಸ್ತಿ, ಕರಾಟೆ, ಬಾಲ್ ಬ್ಯಾಡ್ಮಿಂಟನ್, ಬಾಕ್ಸಿಂಗ್, ರಾಯಚೂರು ಜಿಲ್ಲೆಯಲ್ಲಿ ಬಾಸ್ಕೆಟ್ ಬಾಲ್, ಯೋಗ, ವಾಲಿಬಾಲ್, ಬೀದರ್ ಜಿಲ್ಲೆಯಲ್ಲಿ ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಯಾದಗಿರಿ ಜಿಲ್ಲೆಯಲ್ಲಿ ಭಾರ ಎತ್ತುವುದು, ಖೋ-ಖೋ, ಥ್ರೋಬಾಲ್, ಬಳ್ಳಾರಿ ಜಿಲ್ಲೆಯಲ್ಲಿ ಹಾಕಿ ಫುಟ್ ಬಾಲ್ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಕಬಡ್ಡಿ, ವುಶು ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳು ಕಲಬುರಗಿ ವಿಭಾಗ ಮಟ್ಟದ ಜಿಲ್ಲೆಗಳ ಸ್ಪರ್ಧೆಗಳಿಗೆ ಸೆಪ್ಟಂಬರ್ 30ರ ಬೆಳಿಗ್ಗೆ 8:30 ಗಂಟೆಯೊಳಗಾಗಿ ಆಯಾ ಜಿಲ್ಲೆಗಳ ಜಿಲ್ಲಾ ಕಚೇರಿ/ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು. ಪ್ರಯಾಣ ಭತ್ಯೆಯನ್ನು ಕೆ-2 ಮೂಲಕ ಪಾವಿತಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



