ರಾಯಚೂರು ಅ. 03 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2026-27ನೇ ಸಾಲಿನ ರಾಯಚೂರು ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಪ್ರಕ್ರಿಯೆಯನ್ನು 15 ರಿಂದ 29 ವರ್ಷದೊಳಗಿನವರಿಗೆ ಅಕ್ಟೋಬರ್‌ 30ರ ಬೆಳಿಗ್ಗೆ 9ಗಂಟೆಗೆ ನಗರದ ವೇದಾಂತ ಡಿಗ್ರಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಹಾಗೂ ಸಂಘ-ಸಸ್ಥೆಗಳು, ಯುವಕ/ಯುವತಿ ಮಂಡಳಿಗಳು ಇನ್ನಿತರೇ ಸಂಸ್ಥೆಗಳಿದ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿರೇಶ ನಾಯಕ ಅವರು ತಿಳಿಸಿದ್ದಾರೆ. ನಿಗದಿಪಡಿಸಿದ ದಿನಾಂಕ ಹಾಗೂ ಸ್ಥಳದಂದು ಬೆಳಿಗ್ಗೆ 9ಗಂಟೆಯ ಒಳಗಾಗಿ ಸ್ಪರ್ಧಾಳುಗಳು ತಮ್ಮ ಹೆಸರನ್ನು ನೋಂದಾಯಿಸಕೊಳ್ಳತಕ್ಕದ್ದು, ವಯಸ್ಸಿನ ದೃಢೀಕರಣಕ್ಕೆ ಆಧಾರ ಕಾರ್ಡ ,ಗುರುತಿನ ಚೀಟಿ ಅಥವಾ ಜನ್ಮ ದಿನಾಂಕ ಇರುವ ಸರಕಾರಿ ಪ್ರಮಾಣಪತ್ರವನ್ನು ಹಾಗೂ ಸ್ವಯಂ ಬ್ಯಾಂಕ್‌ ಖಾತೆಯ ಝರಾಕ್‌್ಸ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸುವುದು.

ಸಾಂಸ್ಕೃತಿಕ ಸ್ಪರ್ಧೆಗಳ ವಿವರ: ಜನಪದನೃತ್ಯ ತಂಡದಲ್ಲಿ 7+3 ಭಾಗವಹಿಸುವರ ಸಂಖ್ಯೆಯನ್ನು ಮಿತಿಗೊಳಿಸಲಾಗಿದ್ದು, 5 ರಿಂದ 8 ನಿಮಿಷಕ್ಕೆ ಅವಧಿಯನ್ನು ನಿಗದಿಪಡಿಸಲಾಗಿದೆ.

ಜನಪದ ಗೀತೆ ತಂಡದಲ್ಲಿ 7+3 ಭಾಗವಹಿಸುವರ ಸಂಖ್ಯೆಯನ್ನು ಮಿತಿಗೊಳಿಸಲಾಗಿದ್ದು, 5 ರಿಂದ 8 ನಿಮಿಷಕ್ಕೆ ಅವಧಿಯನ್ನು ನಿಗದಿಪಡಿಸಲಾಗಿದೆ. ಕವಿತೆ ಬರೆಯುವುದು (ಪ್ರಾದೇಶಿಕಭಾಷೆ/ಹಿಂದಿ/ಆಗ್ಲ) ಒಬ್ಬರು ಭಾಗವಹಿಸುವರ ಸಂಖ್ಯೆಯನ್ನು ಮಿತಿಗೊಳಿಸಲಾಗಿದ್ದು, 1 ಗಂಟೆ 30 ನಿಮಿಷಕ್ಕೆ ಅವಧಿಯನ್ನು ನಿಗದಿಪಡಿಸಲಾಗಿದೆ.

ನುಕ್ಕಾಡ್‌ ನಾಟಕ 10 ಜನ ಭಾಗವಹಿಸುವರ ಸಂಖ್ಯೆಯನ್ನು ಮಿತಿಗೊಳಿಸಲಾಗಿದ್ದು, ಯಾವುದೇ ಸಮಯವನ್ನು ನಿಗದಿಪಡಿಸಿರುವುದಿಲ್ಲ. ಚಿತ್ರಕಲೆ (ವೈಯಕ್ಕಿಕ) 6 ಗಂಟೆ ನಿಮಿಷಕ್ಕೆ ಅವಧಿಯನ್ನು ನಿಗದಿಪಡಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ವಿರೇಶ ನಾಯಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.