ರಾಯಚೂರು. ಅ.. 4.(ಕರ್ನಾಟಕ ವಾರ್ತೆ):- ಪಾಟ್ನಾದ ಭತ್ತ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಡಾ. ಮಾನಸಿಂಗ್ ಅವರ ನೇತೃತ್ವದ ಅಧಿಕಾರಿಗಳ ತಂಡದಿAದ ಅಕ್ಟೋಬರ್. 4 ರ ರವಿವಾರ ದಂದು ರಾಯಚೂರು ಜಿಲ್ಲೆಯಲ್ಲಿ ಬರ ಸಮೀಕ್ಷೆ ನಡೆಸಲಾಯಿತು. ಭಾರತ ಸರ್ಕಾರದ ವೆಚ್ಚ ಇಲಾಖೆಯ ಅಧೀನ ಕಾರ್ಯದರ್ಶಿ ಪಾರ್ಥ ಪಾಲ್ ಹಾಗೂ ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ರಾಕೇಶ್ ಕುಮಾರ್ ಅವರು ಜಿಲ್ಲೆಯಲ್ಲಿ ಆಗಿರುವ ಮಳೆಯ ಪ್ರಮಾಣ. ಬರದಿಂದ ಆಗಿರುವ ಬೆಳೆ ಹಾನಿ. ಕ್ರಾಫ್ ಕಟಿಂಗ್. ಕುರಿತು ಕೃಷಿ ಇಲಾಖೆ. ತೋಟಗಾರಿಕೆ ಹಾಗೂ ಪಶು ಇಲಾಖೆ ಸೇರಿದಂತೆ ಇತರೆ ಸಂಬAಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳಿಂದ ದೇವದುರ್ಗ ತಾಲ್ಲೂಕು ಪಂಚಾಯತ ಕಛೇರಿ ಸಭಾಂಗಣದಲ್ಲಿ ಸಭೆ ನಡೆಸಿ ಜಿಲ್ಲೆಯ ಬರದಿಂದಾದ ಹಾನಿಯ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಸಭೆಯ ನಂತರ ದೇವದುರ್ಗ ತಾಲ್ಲೂಕಿನ ಮಸರಕಲ್ ಗ್ರಾಮದ ಹೊಲದಲ್ಲಿ ಅನಾವೃಷ್ಟಿಯಿಂದ ಹಾನಿಯಾದ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆ ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆದುಕೊಂಡರು. ನಂತರ ಎನ್ ಗಣೇಕಲ್ ಗ್ರಾಮದ ಹೊಲದಲ್ಲಿ ಹತ್ತಿ ಬೆಳೆಹಾನಿ ವೀಕ್ಷಣೆ ಮಾಡಿ ರೈತರಿಂದ ಮಾಹಿತಿ ಪಡೆದುಕೊಂಡಾಗ ಜಮೀನಿನ ರೈತರು ನಮಗೆ ಈ ವರ್ಷ ಮಳೆ ಬರದೆ ಇರುವುದರಿಂದ ಹೊಲಕ್ಕೆ ಹಾಕಿದ ಬೀಜ ಗೊಬ್ಬರದ ದುಡ್ಡು ಬರದಂತೆ ಆಗಿದೆ. ಪ್ರತಿ ವರ್ಷ ಹತ್ತಿ ಎಕರೆಗೆ 12 ರಿಂದ 15 ಕ್ವಿಂಟಲ್ ಬರುತ್ತಿತ್ತು ಈ ವರ್ಷ ಎಕರೆಗೆ 2 ರಿಂದ ಮೂರು ಕುಂಟಲ ಬಂದಿದೆ ಇದರಿಂದ ನಾವು ಬಹಳ ನಷ್ಟದಲ್ಲಿದ್ದೆವೆ. ಬರಗಾಲದಿಂದ ನಮ್ಮ ಊರಿನ ಜನರು ಬೇರೆ ಕಡೆಗೆ ಗೂಳೆ ಹೋಗುತ್ತಿದ್ದಾರೆ. ಎಕರೆಗೆ 50 ಸಾವಿರ ನಮಗೆ ಬರ ಪರಿಹಾರ ನೀಡಬೇಕೆಂದು ಕೇಂದ್ರ ತಂಡಕ್ಕೆ ಮನವಿ ಮಾಡಿದರು.

ಗಣೇಕಲ್ ಜಲಾಶಯಕ್ಕೆ ಬೇಟಿ ನೀಡಿ ತಂಡ ವಿಬಿ ಜಿ ರಾಮ್ ಜಿ ಕಾಮಗಾರಿಯ ವೀಕ್ಷಣೆ ಮಾಡಿ ಅಲ್ಲಿ ಕೆಲಸ ಮಾಡುತ್ತಿರುವ ಜನರಿಂದ ಕೆಲಸ ಹೇಗೆ ನಡೆಯುತ್ತಿದೆ ಇದರಿಂದ ತಮಗೆ ಆಗುತ್ತಿರುವ ಅನುಕೂಲ ಮತ್ತು ಇತರೆ ಸಮಸ್ಯೆಗಳಿದ್ದರೆ ತಿಳಿಸಿ ಎಂದು ಕೇಳಿದ ಕೇಂದ್ರ ತಂಡದ ಸದಸ್ಯರು ನಮಗೆ ಸಂಬಳ ಇನ್ನೂ ಹೆಚ್ಚಿಸಬೇಕು ದಿನಕ್ಕೆ 375 ರೂ ಕೊಡುತ್ತಾರೆ ಅದೇ ಹೊರಗಡೆ ಕೆಲಸಕ್ಕೆ ಹೋದರೆ 700 ರಿಂದ 800 ರೂ ಕೂಲಿ ಕೊಡುತ್ತಾರೆ ಹಾಗಾಗಿ ನಮಗೆ ಕೂಲಿ ಹೆಚ್ಚಿಸಬೇಕೆಂದು ಕೆಲಸಗಾರರು ಹೇಳಿದರು.

ರಾಯಚೂರು ಜಿಲ್ಲೆಯ ಮಸರಕಲ್. ಎನ್. ಗಣೇಕಲ್. ಮಂದಕಲ್. ಯರಡೋಣ ಸೇರಿದಂತೆ ಇತರೆ ಕಡೆ ಬರ ಸಮೀಕ್ಷೆ ವೀಕ್ಷಣೆ ಮಾಡಿ ರೈತರ ಸಮಸ್ಯೆಗಳನ್ನು ಆಲಿಸಲು ನಾವು ಇಲ್ಲಿಗೆ ಬಂದಿದ್ದೆವೆ ತಮ್ಮ ಜಮೀನುಗಳಲ್ಲಿ ಹಾನಿಯಾದ ಮಾಹಿತಿಯನ್ನು ಪರಿಶೀಲನೆ ಮಾಡಲಾಗಿದೆ ಇದರ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕೇಂದ್ರ ತಂಡ ರೈತರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಗಿರಿಶ್ ಆರ್. ಜಿಲ್ಲಾಧಿಕಾರಿ ಪೂವಿತಾ ಎಸ್. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ. ಸಹಾಯಕ ಆಯುಕ್ತರಾದ ಡಾ. ಹಂಪಣ್ಣ ಸಜ್ಜನ. ರಾಯಚೂರು ಕೃಷಿ ಇಲಾಖೆಯ ಕೃಷಿ ವಿಜ್ಞಾನಗಳು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರಕಾಶ ಚವ್ಹಾಣ. ದೇವದುರ್ಗ ತಹಶಿಲ್ದಾರ ನಾಗಮ್ಮ ಕಟ್ಟಿಮನಿ. ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.