ತುಂಗಾ ಬಿಂಬ/ರಾಯಚೂರು: ರಾಯಚೂರು ಮಹಾನಗರ ಪಾಲಿಕೆಯ ಹಳೆ ಕಟ್ಟಡದಲ್ಲಿ ಪಾಲಿಕೆ ದಾಖಲೆ ಡಿಜಿಟಲೀಕರಣ ಕೊಠಡಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಅಜಯ್ ಧರ್ಮಸಿಂಗ್ ಅವರು ಸೆಪ್ಟಂಬರ್ 17ರ ಗುರುವಾರ ದಂದು ಚಾಲನೆ ನೀಡಿದರು. ಡಿಜಿಟಲೀಕರಣ ಕೊಠಡಿಯು 2 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ದಾಖಲೆ ಆಧುನೀಕರಿಸಿ, ದಾಖಲೆಗಳ ಸುರಕ್ಷಿತ ಸಂರಕ್ಷಣೆ ಮತ್ತು ಸುಲಭ ನಿರ್ವಹಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 1.5 ಲಕ್ಷ ಕಡತಗಳಲ್ಲಿರುವ 10 ಲಕ್ಷ ಪುಟಗಳನ್ನು ಡಿಜಿಟಲೀಕರಿಸುವುದು. ಇದರಲ್ಲಿ ಎ, ಬಿ, ಸಿ, ಮತ್ತು ಡಿವರ್ಗಗಳ ದಾಖಲೆಗಳನ್ನು ಒಳಗೊಂಡAತೆ ಸುರಕ್ಷಿತ ಡಿಜಿಟಲ್ ಸಂಗ್ರಹಣೆ ಹಾಗೂ ತ್ವರಿತ ಮರುಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಸರಳ ಡಿಜಿಟಲ್ ವೇದಿಕೆಯ ಮೂಲಕ ನಾಗರಿಕರಿಗೆ ಅಗತ್ಯ ಮಾಹಿತಿಯನ್ನು ತ್ವರಿತವಾಗಿ ಪಡೆಯುವ ಅವಕಾಶ ಕಲ್ಪಿಸುವುದು. ಮಾಹಿತಿ ಹಕ್ಕು ಅರ್ಜಿಗಳು ಹಾಗೂ ಸಾರ್ವಜನಿಕ ದೂರುಗಳ ಸಲ್ಲಿಕೆ, ಸ್ಥಿತಿ ಪರಿಶೀಲನೆ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವ ವ್ಯವಸ್ಥೆ. ವಿಲೇವಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತದೆ. ಅಲ್ಲದೆ ಜನನ ಮತ್ತು ಮರಣ ಪ್ರಮಾಣ ಪತ್ರಗಳು, ಖಾತೆ/ಮ್ಯುಟೇಶನ್ ಅರ್ಜಿಗಳು ಹಾಗೂ ಆರ್.ಟಿ.ಐ ಅರ್ಜಿಗಳಿಗೆ ಸ್ಪಷ್ಟವಾದ ಪ್ರಕ್ರಿಯೆ, ಟ್ರ‍್ಯಾಕಿಂಗ್ ವ್ಯವಸ್ಥೆ ಮತ್ತು ನಿಗದಿತ ಕಾಲಮಿತಿಯನ್ನು ರೂಪಿಸಲಾಗುವುದೆಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹೊಪಾತ್ರ ಅವರು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಭೋಸುರಾಜು, ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ರಾಯಚೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತ ಶರಣಪ್ಪ ಸೇರಿದಂತೆ ಪಾಲಿಕೆಯ ವಿವಿಧ ಅಧಿಕಾರಿ, ಸಿಬ್ಬಂದಿಗಳು ಇದ್ದರು.