ತುಂಗಾ ಬಿಂಬ/ರಾಯಚೂರು, ಸೆ.17: ಕೆ.ಬಿ.ಎಸ್. ಬ್ಯಾಂಕ್ ವತಿಯಿಂದ ಪಿಎಂಜೆಬಿವೈ ಹಾಗೂ ಅವಿವಾ ವಿಮೆ ಯೋಜನೆಯಡಿ ಬ್ಯಾಂಕ್ ಗ್ರಾಹಕರ ಕುಟುಂಬಕ್ಕೆ ₹3 ಲಕ್ಷ ವಿಮೆ ಮೊತ್ತದ ಚೆಕ್ ವಿತರಿಸಲಾಯಿತು. ಬ್ಯಾಂಕ್ನ ಗ್ರಾಹಕರಾಗಿದ್ದ ಈಶ್ವರ ಅವರು ಕೆ.ಬಿ.ಎಸ್. ಬ್ಯಾಂಕ್ನಲ್ಲಿ ₹1 ಲಕ್ಷ ಸಾಲ ಪಡೆದಿದ್ದು, ಪಿಎಂಜೆಬಿವೈ ಹಾಗೂ ಅವಿವಾ ವಿಮೆ ಯೋಜನೆಗೆ ಒಳಪಟ್ಟಿದ್ದರು. ಅವರ ನಿಧನದ ಬಳಿಕ ವಿಮೆ ಯೋಜನೆಯಡಿ ಮಂಜೂರಾದ ₹3 ಲಕ್ಷ ಮೊತ್ತದ ಚೆಕ್ ಅನ್ನು ಅವರ ಪತ್ನಿ ಶ್ರೀಮತಿ ಪದ್ಮ ಅವರಿಗೆ ಹಸ್ತಾಂತರಿಸಲಾಯಿತು. ಚೆಕ್ ವಿತರಿಸಿ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ರೆಡ್ಡಿ ಪ್ರತಾಪಗೌಡ, ವಿಮೆ ಮೊತ್ತವನ್ನು ಕುಟುಂಬದ ಅಗತ್ಯ ಹಾಗೂ ಉತ್ತಮ ಉದ್ದೇಶಗಳಿಗೆ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ವಿಮೆ ಮೊತ್ತದ ಚೆಕ್ ಸ್ವೀಕರಿಸಿದ ಪದ್ಮ ಅವರು ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.



