ರಾಯಚೂರು: ರಾಯಚೂರು ಜಿಲ್ಲಾ ಗೃಹರಕ್ಷಕ ದಳ ವತಿಯಿಂದ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಕಚೇರಿಯ ಆವರಣದಲ್ಲಿ ವಿಜ್ರಂಭಣೆಯಿAದ ಆಚರಣೆ ಮಾಡಲಾಯಿತು. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ದೀಪಾ ಗೋಡೆಪಾಡ್ ಅವರು ರಾಷ್ಟç ಧ್ವಜಾರೋಹಣವನ್ನು ನೆರೆವರಿಸಿ, ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ದೀಪಾ ಗೋಡೆಪಾಡ್ ಅವರು ಮಾತನಾಡಿ ಕಲ್ಯಾಣ-ಕರ್ನಾಟಕ ಪ್ರದೇಶ ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರö್ಯಗೊAಡು 79 ವರ್ಷಗಳಾಗಿವೆ. ಇದಕ್ಕಾಗಿ ಹೋರಾಡಿದ ಎಲ್ಲ ಮಹನೀಯರಿಗೆ ಇಂದು ನಾವು ಸ್ಮರಿಸಬೇಕಿದೆ. ಹೈದರಾಬಾದ್ ನಿಜಾಮ ಮಾತ್ರ ಸ್ವತಂತ್ರವಾಗಿರಲು ಹವಣಿಸಿ, ರಾಜ ಪ್ರಭುತ್ವದ ನಿರಂಕುಶ ಆಡಳಿತವನ್ನು ಜನರ ಮೇಲೆ ಹೇರಲು ನಿರ್ಧರಿಸಿದ. 1947ರ ಜೂನ್ 26ರಂದು ಭಾರತ ಒಕ್ಕೂಟ ವ್ಯವಸ್ಥೆಗೆ ಸೇರುವುದಿಲ್ಲ, ಸ್ವತಂತ್ರವಾಗಿರುತ್ತೇನೆ ಎಂದು ರ್ಮಾನನ್ನು ಹೊರಡಿಸಿದನು. ಈ ಸಂದರ್ಭದಲ್ಲಿ ಹೈದರಾಬಾದ್ ಪ್ರಾಂತ್ಯದಲ್ಲಿ ಸ್ವಾತಂತ್ರö್ಯದ ಕಹಳೆ ಬುಗಿಲೆದ್ದಿತು ಎಂದು ಇತಿಹಾಸವನ್ನು ಸ್ಮರಿಸಿಕೊಂಡರು. ಗೃಹರಕ್ಷಕರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಆರ್ಥಿಕ ನೆರವು ಕಲ್ಪಿಸುವ ದೃಷ್ಟಿಯಿಂದ ಕೋರಿ ಬಂದ ಅರ್ಜಿಗಳಲ್ಲಿ ವೈದ್ಯಕೀಯ ವೆಚ್ಚಗಳ ಅಡಿಯಲ್ಲಿ ಅರ್ಹರಾದ ಪ್ರವೀಣ್ ಕುಮಾರ್, ಗೃಹರಕ್ಷಕ ಮೆಟಲ ಸಂಖ್ಯೆ: 377 ಇವರ ಮಗನ ಹೃದಯದ ಶಸ್ತç ಚಿಕಿತ್ಸೆ ಸಂಬAಧ 1,49,964 ರೂ. ಹಾಗೂ ಭವಾಂಜಿರಾವ್, ಪಿ.ಎಲ್.ಸಿ ಇವರ ಅಪಘಾತ ಚಿಕಿತ್ಸಾ ವೆಚ್ಚ ಸಂಬAಧ 53,308 ರೂ. ಮತ್ತು ಉನ್ನತ ವ್ಯಾಸಂಗ ವೆಚ್ಚಗಳ ಅಡಿಯಲ್ಲಿ ಅರ್ಹರಾದ ತಿಮ್ಮನಗೌಡ, ಘಟಕಾಧಿಕಾರಿ ಇವರ ಮಗನ 1ನೇ ವರ್ಷದ ಎಂ.ಎಸ್.ಡಬ್ಲೂö್ಯ ಸಂಬAಧ 14,000 ರೂ. ಗಳ ಮೊತ್ತದ ಚೆಕ್ಕನ್ನು ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕದಳ ನಿಧಿಯಿಂದ ಪಾವತಿಸಲಾಯಿತು. ಈ ವೇಳೆ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು. ಗೃಹರಕ್ಷಕ ದಳದ ಕಚೇರಿ ಸಿಬ್ಬಂದಿ ಹಾಗೂ ಗೃಹರಕ್ಷಕದಳದ ಎಲ್ಲಾ ಸ್ವಯಂ ಸೇವಕ ಅಧಿಕಾರಿಗಳು ಮತ್ತು ಗೃಹರಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ತಮ್ಮ ಕೊಡುಗೆ ನೀಡಿದರು. ಇದೇ ಜಿಲ್ಲಾ ಬೋಧಕರಾದ ಕಿಶೋರ್ ಅಮ್ಮನಭಾವಿ, ಎಫ್.ಡಿ.ಎ ಸರಸ್ವತಿ, ಎಸ್.ಡಿ.ಎ ದೇವಮ್ಮ, ವಾಹನ ಚಾಲಕರಾದ ಮಂಜುನಾಥ ದೇಸಾಯಿ, ಗೃಹ ರಕ್ಷಕದಳದ ಸ್ವಯಂ ಸೇವಕ ಅಧಿಕಾರಿಗಳಾದ ನಿಂಬನಗೌಡ, ಸೈಯದ್ ಜಾವೇದ್ ಪಾಷಾ, ವೀರಭದ್ರಪ್ಪ, ಹೆಚ್.ಮಲ್ಲಿಕಾರ್ಜುನ ಮತ್ತು ಎನ್.ಸಿ.ಓ ಬಸವಂತಸಿAಗ್, ಹುಲಿಗೆಪ್ಪ ಸೇರಿದಂತೆ ಇತರರು ಇದ್ದರು.



