ರಾಯಚೂರು: ಯಾವುದೇ ಅರ್ಹರ ಮತದಾರ ಮತದಾರರ ಪಟ್ಟಿಯಿಂದ ಹೊರಗೆ ಉಳಿಯಬಾರದು ಬೇರೆ ಬೇರೆ ತಾಲೂಕುಗಳಿಂದ ತಾವು ದುಡಿಯಲು ಬಂದಿರುತ್ತೀರಿ ತಮ್ಮ ಹೆಸರು ಸಹ ಮತದಾರರ ಪಟ್ಟಿಯಲ್ಲಿ ಸೇರಿಸಬೇಕು ಶುದ್ಧ ಸ್ಪಷ್ಟ ಪಾರದರ್ಶಕ ಮಾದರಿಯ ಮತದಾರರಪಟ್ಟಿಯನ್ನು ತಯಾರಿಸುವುದೇ ಇದರ ಮೂಲ ಉದ್ದೇಶವಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಪರಮೇಶ್ವರ ಅವರು ಹೇಳಿದರು. ಸೆಪ್ಟಂಬರ್ 16ರ ರಾಯಚೂರಿನ ಮಂಚುಕೊAಡ ಆಗ್ರೋಟೆಕ್ ಪ್ರೆöÊವೇಟ್ ಲಿಮಿಟೆಡ್ ಇಂಡಸ್ಟಿçಯಲ್ ಏರಿಯಾದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಎಸ್.ಐ.ಆರ್ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 2026ರ ಅಕ್ಟೋಬರ 01ಕ್ಕೆ ಯಾವ ಯುವಕ, ಯುವತಿಯರು 18 ವರ್ಷ ಪೂರ್ಣಗೊಳ್ಳುತ್ತಾರೊ ಅವರು ಸಹ ತಮಗೆ ಸಂಬAಧಪಟ್ಟ ಬಿ.ಎಲ್.ಓ ಅವರಿಗೆ ಸಂಪರ್ಕಿಸಿ ಫಾರ್ಮ ನಂಬರ್ 6ನ್ನು ತುಂಬಿಕೊಡಬಹುದು, ಮತದಾರರು ಮತದಾರಪಟ್ಟಿಯಿಂದ ಯಾವುದೇ ಕಾರಣಕ್ಕೂ ಹೊರಗೆ ಉಳಿಯಬಾರದೆಂದು ಈಗಾಗಲೇ ಮತದಾರರ ಪಟ್ಟಿಯವರು ರಾಯಚೂರು ಜಿಲ್ಲೆಯಲ್ಲಿ ಪ್ರಕಟಣೆ ಮಾಡಿದ್ದು, ಕೆಲವರು ಹೊರಗೆ ಉಳಿದಿದ್ದರೆ ಅಂತವರ ಸೆಪ್ಟಂಬರ್ 19 ಮತ್ತು 20 ರಂದು ಮತಗಟ್ಟೆಯಲ್ಲಿ ವಿಶೇಷ ಹೆಸರು ನೊಂದಣಿಯ ಕಾರ್ಯಕ್ರಮ ನಡಿಯುತ್ತದೆ. ಹೆಸರನ್ನು ಪುನಃ ಮತದಾರ ಪಟ್ಟಿಯಲ್ಲಿ ಸೇರಿಸುವ ಹಿನ್ನೆಲೆಯಲ್ಲಿ ವಿಶೇಷ ಅಭಿಯಾನ ಕಾರ್ಯಕ್ರಮವನ್ನು ಮಾಡಲಾಗುತ್ತದೆ ಎಂದರು. ಈ ವೇಳೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕರಾದ ಲಕ್ಷ್ಮೀಕಾಂತ ಕುಲಕರ್ಣಿ ಅವರು ಮಾತನಾಡಿ, ಎಸ್.ಐ.ಆರ್ ಅರ್ಜಿಯನ್ನು ಸಕಾಲದಲ್ಲಿ ಭರ್ತಿಮಾಡಿ ಸಂಬAದಪಟ್ಟ ಬಿ.ಎಲ್.ಒ ಇವರಿಗೆ ಸಂಪರ್ಕಿಸಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಮಾಡಿಸಬೇಕೆಂದರು. ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಮಾಸ್ತರ್ ಟೈನಿ ದಂಡಪ್ಪ ಬಿರಾದಾರ ಅವರು ಮಾತನಾಡಿ, ವಿವಿಧ ಕೈಗಾರಿಕೆಗಳಲ್ಲಿ ಬಹಳಷ್ಟು ಜನ ವಿವಿಧ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಬಂದು ವಾಸವಾಗಿರುತ್ತೀರಿ. ಉದ್ಯೋಗದ ನಿಮಿತ್ಯವಾಗಿ ತಾವು ಇಲ್ಲಿಗೆ ಬಂದಿರುತ್ತಿರಿ. ಮತದಾರರು ಮತದಾನ ದಿನ ಮತಗಟ್ಟೆಗೆ ಹೋಗಿ ಮತವನ್ನು ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವ ಆಡಳಿತವನ್ನು ಬಲಪಡಿಸಬೇಕೆಂದರು. ಈ ವೇಳೆ ಮೆ.ಎಸ್.ಪಿ.ಎಸ್ ಆಗ್ರೋನಿಕ್ಸ್ ಮಾಲಿಕರಾದ ಹಾಗೂ ರಾಜ್ಯ ರೈಸ್ ಮಿಲ್ಲ್ ಆಸೋಸಿಯೆಷನ್ ಅಧ್ಯಕ್ಷರಾದ ಚಂದ್ರು ಮಂಚಕೊAಡ ಅವರು ಮಾತಾನಾಡಿ, ನಮ್ಮ ಕೈಗಾರಿಕೆ ವಲಯದಲ್ಲಿರುವ ಕೂಲಿ ಕಾರ್ಮಿಕರು ಮತದಾರರು ಮತದಾರಪಟ್ಟಿಯಿಂದ ಯಾವುದೇ ಕಾರಣಕ್ಕೂ ಹೊರಗೆ ಉಳಿಯಬಾರದೆಂದರು. ಇದೇ ಸಂದರ್ಭದಲ್ಲಿ ಕೈಮಗ್ಗ & ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಸಂತ ಕುಮಾರ ಎಸ್. ಸೇರಿದಂತೆ ಇತರರು ಇದ್ದರು.