ರಾಯಚೂರು: ಕರ್ನಾಟಕ ರಾಜ್ಯದಲ್ಲಿ 6 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ವಸತಿ ನಿಲಯಗಳ ವಸತಿಯುತ ಶಾಲೆ ಅಥವಾ ಕಾಲೇಜುಗಳ ನೋಂದಣಿ ಕುರಿತು ಅರ್ಜಿ ಆಹ್ವಾನಿಸಲಾಗಿದೆ. ಬಾಲ ನ್ಯಾಯ ಕಾಯ್ದೆಯನ್ವಯ ನೋಂದಣಿಯಾಗಿರುವ ಸಂಸ್ಥೆಗಳನ್ನು ವಸತಿ ನಿಲಯಗಳನ್ನು ಹೊರತುಪಡಿಸಿ 6 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರೇತರ ಸಂಸ್ಥೆಗಳು/ನಾಗರೀಕ ಸಮಾಜ ಸಂಸ್ಥೆಗಳು, ಟ್ರಸ್ಟ್, ಧಾರ್ಮಿಕ, ಖಾಸಗಿ, ವೈಯಕ್ತಿಕವಾಗಿ ನಡೆಸಲ್ಪಡುವ ಯಾವುದೇ ಔಪಚಾರಿಕ, ಅನೌಪಚಾರಿಕ ಶೈಕ್ಷಣಿಕ ವಸತಿ ನಿಲಯಗಳನ್ನು ವಸತಿ ಶಾಲೆ/ಕಾಲೇಜುಗಳನ್ನು ನೊಂದಾಯಿಸಲು ಕಡ್ಡಾಯವಾಗಿ ನಿರ್ವಹಿಸಲು ಕ್ರಮವಹಿಸಬೇಕಾಗಿದ್ದು, ಅರ್ಜಿ ನಮೂನೆಗಳನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಯಚೂರು ಇವರಿಂದ ಪಡೆದು ಭರ್ತಿ ಮಾಡಿ ಅಕ್ಟೋಬರ್ 18ರೊಳಗಾಗಿ ಈ ಕಚೇರಿಗೆ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಣೆಗಳಿಗಾಗಿ ಜಿಲ್ಲಾ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂತ್ರಾಲಯ ರಸ್ತೆ ಐಡಿಎಸ್‌ಎಮ್‌ಟಿ ಲೇಔಟ್ ಮಾವಿನ ಕೆರೆ ಎದುರುಗಡೆ ಅಥವಾ ದೂರವಾಣಿ ಸಂಖ್ಯೆ 08532-226292ಗೆ ಕಚೇರಿಯ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.