ರಾಯಚೂರು: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಪಿಎಫ್‌ಒ ಅಡಿಯಲ್ಲಿ ಕಡ್ಡಾಯ ವ್ಯಾಪ್ತಿಗೆ ಒಳಪಡುವ ವೇತನ ಮಿತಿಯನ್ನು ತಿಂಗಳಿಗೆ 15,000 ರಿಂದ 25,000ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿದೆ. ಈ ನಿರ್ಧಾರದಿಂದ 51 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಉದ್ಯೋಗಿಗಳು ಇಪಿಎಫ್‌ಒ ವ್ಯಾಪ್ತಿಗೆ ಬರುವ ನಿರೀಕ್ಷೆಯಿದ್ದು, ಸಾಮಾಜಿಕ ಭದ್ರತಾ ಸೌಲಭ್ಯಗಳ ವ್ಯಾಪ್ತಿ ಮತ್ತಷ್ಟು ವಿಸ್ತರಿಸಲಿದೆ. 2014ರ ನಂತರದ ವೇತನ, ಆದಾಯ ಹಾಗೂ ಔಪಚಾರಿಕ ಉದ್ಯೋಗದಲ್ಲಿನ ಏರಿಕೆಯನ್ನು ಪರಿಗಣಿಸಿ ಕೈಗೊಂಡಿರುವ ಈ ಕ್ರಮವು ಉದ್ಯೋಗದ ಔಪಚಾರಿಕೀಕರಣ, ಉದ್ಯೋಗಿಗಳ ಉಳಿಕೆ ಹಾಗೂ ದೀರ್ಘಕಾಲೀನ ನಿವೃತ್ತಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಿದೆ. ಸರ್ಕಾರದ ವಾರ್ಷಿಕ ವೆಚ್ಚವು ಸುಮಾರು 11,339 ಕೋಟಿಯಾಗಿದ್ದು, ಐದು ವರ್ಷಗಳಲ್ಲಿ ಅಂದಾಜು 56,696 ಕೋಟಿಯಾಗಲಿದೆ. ಈ ನಿರ್ಧಾರದ ಅನುಷ್ಠಾನಕ್ಕಾಗಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಾಗೂ ಇPಈಔ ಅಗತ್ಯ ಕಾನೂನುಬದ್ಧ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಿದ್ದು, ಇದು ವಿಕಾಸಿತ್ ಭಾರತ್@2047ರ ದೃಷ್ಟಿಕೋನದತ್ತ ಭಾರತದ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಇಪಿಎಫ್‌ಒ ಪ್ರಾದೇಶಿಕ ಕಚೇರಿಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.