ರಾಯಚೂರು ಸೆಪ್ಟಂಬರ್ 24 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಯಚೂರು ಇವರ ಸಹಯೊಗದೊಂದಿಗೆ 2026-27ನೇ ಸಾಲಿನಲ್ಲಿ ನಿರುದ್ಯೋಗಿ ಮಹಿಳೆಯರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಲ್ಲಿ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗಿನಿ ಯೋಜನೆಯಡಿ 21-55 ವಯೋಮಿತಿಯೊಳಗಿರುವ ಆರ್ಥಿಕವಾಗಿ ಹಿಂದುಳಿದ ಮತ್ತು ಸಾಮಾನ್ಯ ಮಹಿಳೆಯರು ಯಾವುದಾದರೂ ಲಾಭದಾಯಕ ಚಟುವಟಿಕೆಯಲ್ಲಿ ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಬ್ಯಾಂಕಿನಿAದ ಗರಿಷ್ಠ 3.0 ಲಕ್ಷ ರೂ.ಗಳವರೆಗೆ ಸಾಲ ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ, ವಿಧವೆ, ಅಂಗವಿಕಲರು ಹಾಗೂ ಸಂಕಷ್ಠ ಮಹಿಳೆಯರಿಗೆ ಗರಿಷ್ಠ 90,000/- ರೂ. ಅಥವಾ ಶೇ.30 ರಷ್ಟು ಗಳವರೆಗೆ ಸಹಾಯಧನ ನೀಡಲಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಹಿಳೆಯರಿಗೆ ಗರಿಷ್ಟ ಶೇ.50 ರಷ್ಟು ಗಳವರೆಗೆ ಸಹಾಯಧನವನ್ನು ನೀಡಲಾಗುವುದು. ಧನಶ್ರೀ, ಚೇತನ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಮಾಜಿ ದೇವದಾಸಿ ಪುನರ್ವಸತಿ ಯೋಜನೆಗಳಲ್ಲಿ 20-55 ವಯೋಮಿತಿಗೊಳಗಿರುವ ಸಂಸ್ಥೆಯಲ್ಲಿ ನೋಂದಣಿಯಾಗಿರುವ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಯಾವುದಾದರೂ ಲಾಭದಾಯಕ ಚಟುವಟಿಕೆಯಲ್ಲಿ ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಆಯ್ಕೆ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ನಿಗಮದಿಂದ ನೇರವಾಗಿ 45,000/- ರೂ. ಸಹಾಯಧನವನ್ನು ಡಿ.ಬಿ.ಟಿ ಮೂಲಕ ಅವರ ಖಾತೆಗೆ ಜಮೆ ಮಾಡಲಾಗುತ್ತದೆ. ದಾಖಲೆಗಳು: ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಮಹಿಳೆಯರಿಗೆ ಆದಾಯ ಮಿತಿ ರೂ. 2.40 ಲಕ್ಷ ಇರಬೇಕು ಹಾಗೂ ಇತರೇ ವರ್ಗದ ಮಹಿಳೆಯರಿಗೆ ಆದಾಯ ಮಿತಿ ರೂ. 1.75 ಲಕ್ಷ ಇರಬೇಕು. ವಿಧವೆ, ಅಂಗವಿಕಲರು, ಸಂಕಷ್ಠಗೊಳಗಾದ ಮಹಿಳೆಯರು ಪ್ರಮಾಣ ಪತ್ರ ಲಗತ್ತಿಸುವುದು. ಯೋಜನಾ ವರದಿ ಹಾಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಪುಸ್ತಕದ ಮುಖಪುಟ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಪ್ರತಿ. ಚೇತನ, ಧನಶ್ರೀ, ಲಿಂಗತ್ವ ಅಲ್ಪಸಂಖ್ಯಾತರ ಯೋಜನೆಯಡಿ ಸಂಬAಧಿಸಿದ ಸಿ.ಬಿ.ಒ ಕಡೆಯಿಂದ ಪತ್ರ ಎ.ಆರ್.ಟಿ ಪತ್ರ ಸ್ವಯಂ ಘೋಷಣೆ ಸಲ್ಲಿಸುವುದು. ವಿವೇಚನ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಚಿಸುವ ಅರ್ಜಿದಾರರು ಮಾನ್ಯ ಸಚಿವರು/ಮಾನ್ಯ ಶಾಸಕರು/ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಇವರ ಶಿಫಾರಸ್ಸು ಪತ್ರದೊಂದಿಗೆ ಅರ್ಜಿ ಸಲ್ಲಿಸುವುದು. ಉದ್ಯೋಗಿನಿ ಯೋಜನೆ ಅರ್ಜಿದಾರರು 21 ರಿಂದ 55 ವರ್ಷದೊಳಗಿರಬೇಕು. ಧನಶ್ರೀ, ಚೇತನ ಲಿಂಗತ್ವ ಅಲ್ಪಸಂಖ್ಯಾತರು ಮಾಜಿ ದೇವದಾಸಿ ಮಹಿಳೆಯರು ಪನರ್ವಸತಿ ಯೋಜನೆ ಅರ್ಜಿದಾರರು 20 ರಿಂದ 55 ವರ್ಷದೊಳಗಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು ಕನಿಷ್ಠ 05 ವರ್ಷದಿಂದ ಕರ್ನಾಟಕ ರಾಜ್ಯದಲ್ಲೇ ಖಾಯಂ ನಿವಾಸಿಯಾಗಿರಬೇಕು. ಸಕ್ಷಮ ಪ್ರಾಧಿಕಾರದ ವಾಸಸ್ಥಳ ದೃಢೀಕರಣ ಪತ್ರ ಒದಗಿಸತಕ್ಕದ್ದು. ಅರ್ಜಿದಾರರು ರಾಷ್ಟ್ರೀಕೃತ ಬ್ಯಾಂಕ್ ಖಾತೆಯನ್ನು ಹೊಂದಿದ್ದು ಚಾಲ್ತಿಯಲ್ಲಿರಬೇಕು. ಈ ಹಿಂದೆ ಕಳೆದ 10 ವರ್ಷಗಳಲ್ಲಿ ನಿಗಮದಿಂದ ಉದ್ಯೋಗಿನಿ ಯೋಜನೆಯಡಿಯಲ್ಲಿ ಸೌಲಭ್ಯ ಪಡೆದಿರಬಾರದು. ಆನ್-ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿಯ ಜೊತೆಗೆ ಕಡ್ಡಾಯವಾಗಿ ಈ ಕೆಳಕಂಡ ವಿವರಗಳು/ದಾಖಲಾತಿಗಳನ್ನು ಸಲ್ಲಿಸಬೇಕು. ವಿಳಾಸ ದೃಢೀಕರಣ ದಾಖಲೆಗಳು (ಮತದಾರರ ಗುರುತಿನ ಚೀಟಿ ಜೊತೆಗೆ ಆಧಾರ್ ಕಾರ್ಡ್/ಪಡಿತರ ಚೀಟಿ). ಬ್ಯಾಂಕ್ ಖಾತೆಯ ಪಾಸ್‌ಬುಂಕ್ ಪುಸ್ತಕದ ನಕಲು ಪ್ರತಿ (ರಾಷ್ಟ್ರೀಕೃತ ಬ್ಯಾಂಕಿನ ಹೆಸರು, ಖಾತೆ ಸಂಖ್ಯೆ ಐ.ಎಫ್.ಎಸ್.ಸಿ ಕೋಡ್ ಸ್ಪಷ್ಟವಾಗಿ ಕಾಣುವಂತಿರಬೇಕು) ಸಹಾಯಧನ ಪಡೆಯಲು ಉದ್ದೇಶಿಸಿದ ಆದಾಯ ಉತ್ಪನ್ನ ಚಟುವಟಿಕೆಯ ಯೋಜನಾ ವರದಿ (ನಿಗದಿತ ನಮೂನೆಯಲ್ಲಿ) ಲಿಂಗತ್ವ ಅಲ್ಪಸಂಖ್ಯಾತರಾಗಿದ್ದಲ್ಲಿ ಜಿಲ್ಲಾಧಿಕಾರಿಯವರಿಂದ ಪಡೆದ ಗುರುತಿನ ಚೀಟಿಯನ್ನು ಲಗತ್ತಿಸಬೇಕು. ಹೆಚ್.ಐ.ವಿ ಭಾದಿತ/ಸೋಂಕಿತ ಮಹಿಳೆಯರು ಕೆಎಸ್‌ಎಪಿಎಸ್ ಯಿಂದ ಪಡೆದ ಎಆರ್‌ಟಿ ಕಾರ್ಡ್ ಲಗತ್ತಿಸಬೇಕು. ದಮನಿತ ಮಹಿಳೆಯರಾಗಿದ್ದಲ್ಲಿ ಸಿಬಿಒ ಡ್ಯಾಪ್ಕೋನಿಂದ ಪಡೆದ ದೃಢೀಕರಣ ಪತ್ರವನ್ನು ಲಗತ್ತಿಸಬೇಕು. ಮಾಜಿ ದೇವದಾಸಿ ಪುನರ್ವಸತಿ ಯೋಜನೆ ಅರ್ಜಿದಾರರು ಯೋಜನಾಧಿಕಾರಿಗಳಿಂದ ಪಡೆದ ಮಾಜಿ ದೇವದಾಸಿ ಪ್ರಮಾಣ ಪತ್ರ ಲಗತ್ತಿಸಬೇಕು. ವಯಸ್ಸಿನ ದೃಢೀಕರಣಕ್ಕಾಗಿ ಜನನ ಪ್ರಮಾಣ ಪತ್ರ/ಶಾಲಾ ದೃಢೀಕರಣ ಪತ್ರದೊಂದಿಗೆ ಅಕ್ಟೋಬರ್ 31ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.