ರಾಯಚೂರು ಸೆಪ್ಟಂಬರ್ 24 (ಕರ್ನಾಟಕ ವಾರ್ತೆ): ಸಮಗ್ರ ಶಿಕ್ಷಣ ಕರ್ನಾಟಕ ರಾಯಚೂರು ವತಿಯಿಂದ 2026-27ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಪ್ರೌಢ ಹಾಗೂ ಪದವಿ ಪೂರ್ವ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಂಬAಧಿತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಜಿಲ್ಲೆಯ 05 ಬ್ಲಾಕ್ಗಳಿಗೆ ಪ್ರತಿ ಬ್ಲಾಕ್ಗೆ ಒಬ್ಬರಂತೆ ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಸಮಾಲೋಚಕರನ್ನು ತಾತ್ಕಾಲಿಕವಾಗಿ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು 06 ತಿಂಗಳ ಅಥವಾ ಫೆಬ್ರವರಿ-2027 ಮಾಹೆವರೆಗಿನ ಅವಧಿಗೆ ಬ್ಲಾಕ್ಗಳಲ್ಲಿ ಕಾರ್ಯನಿರ್ವಹಿಸಲು ಮತ್ತು ವಿದ್ಯಾರ್ಹತೆ ಮನೋವಿಜ್ಞಾನ, ಕ್ಲಿನಿಕಲ್ ಮನೋವಿಜ್ಞಾನ, ಕೌನ್ಸಿಲಿಂಕ್ ಮನೋವಿಜ್ಞಾನ ಅಥವಾ ಸಂಬAಧಿತ ವಿಷಯಗಳಲ್ಲಿ ಎಂ ಎ/ ಎಂ ಎಸ್ಸಿ ಪದವಿಯನ್ನು ಹೊಂದಿರಬೇಕು. ಶಾಲೆ ಅಥವಾ ಸಮುದಾಯ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹಾಗೂ ಕನ್ನಡ, ಇಂಗ್ಲಿಷ್ ಮತ್ತು ಮೂಲಭೂತ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಮತ್ತು ವಯೋಮಿತಿ 26 ರಿಂದ 42 ವರ್ಷದ ಒಳಗಿರಬೇಕು. ಆಸಕ್ತರು ಅರ್ಜಿಯನ್ನು ಈ ಕಛೇರಿಯಲ್ಲಿ ಪಡೆದು ಸ್ವ-ವಿವರದೊಂದಿಗೆ ದಿನಾಂಕ: 05-10-2026 ರ ಕಚೇರಿ ಅವಧಿಯ ಒಳಗಾಗಿ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ಸಮಗ್ರ ಶಿಕ್ಷಣ ಕರ್ನಾಟಕ ಕೂಠಡಿ.ಸಂಖ್ಯೆ ಸಿ-11 & ಸಿ-12 ಬ್ಲಾಕ್ ನೆಲಮಹಡಿ, ನೂತನ ಜಿಲ್ಲಾಡಳಿತ ಭವನ, ಯಕ್ಷಾಸಪೂರ ರಾಯಚೂರು-584104 ಇಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



