ರಾಯಚೂರು ಸೆಪ್ಟಂಬರ್ 24 (ಕರ್ನಾಟಕ ವಾರ್ತೆ): ಜಗತ್ತಿನ ಸುಪ್ರಸಿದ್ಧ ಮೈಸೂರು ದಸರಾ ಉತ್ಸವವು ಪ್ರತೀ ವರ್ಷ ಅದ್ದೂರಿಯಾಗಿ ಆಚರಿಸಲ್ಪಡುತ್ತಿದೆ. ಈ ವರ್ಷವೂಕೂಡ ದಿನಾಂಕ: 11.10.2026ರಿಂದ 20.10.2026ರವರೆಗೆ ಮೈಸೂರು ದಸರಾ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ–2026”ನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ, ಹಳೆ ಡಿ.ಸಿ. ಕಚೇರಿ ಎದುರು, ಮೈಸೂರು ಇಲ್ಲಿ ಏರ್ಪಡಿಸಲು ಉದ್ದೇಶಿಸಿದೆ. ಈ ಪುಸ್ತಕ ಮೇಳದಲ್ಲಿ ಪ್ರತೀ ದಿನ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಸಂಕಿರಣ ಸೇರಿದಂತೆ ಅನೇಕ ಸಾಹಿತ್ಯಕ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಇದೇ ಸಂದರ್ಭದಲ್ಲಿ ರಾಜ್ಯದ ಆಸಕ್ತ ಲೇಖಕರು ಹಾಗೂ ಪ್ರಕಾಶಕರು 2026ರಲ್ಲಿ ಪ್ರಕಟಿಸಿರುವ ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಲು ಬಯಸಿದ್ದಲ್ಲಿ ಪುಸ್ತಕ ಬಿಡುಗಡೆ ಮಾಡಲು ಸಹ ಉದ್ದೇಶಿಲಾಗಿದೆ. ನಾಡಿನ ಖ್ಯಾತ ಸಾಹಿತಿಗಳಿಂದ ಪುಸ್ತಕ ಮೇಳದಲ್ಲಿ ಈ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು. ಪುಸ್ತಕ ಬಿಡುಗಡೆ ಮಾಡಲು ಆಸಕ್ತರು ಅರ್ಜಿ ನಮೂನೆಯನ್ನು ಪ್ರಾಧಿಕಾರದ ವೆಬ್ಸೈಟ್ ವಿಳಾಸ: https://kpp.karnataka.gov.in ನಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಬಿಡುಗಡೆ ಮಾಡಲು ಬಯಸುವ ಪುಸ್ತಕದ 03 ಪ್ರತಿಗಳೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಈ ಪುಸ್ತಕಗಳು ಯಾವುದೇ ವಿವಾದಾತ್ಮಕ ಅಂಶಗಳನ್ನು ಹೊಂದಿರಬಾರದು. ಒಂದುವೇಳೆ ಪುಸ್ತಕ ಸಂಬAಧ ಯಾವುದೇ ಕಾನೂನು ತೊಡಕುಗಳು ಉಂಟಾದಲ್ಲಿ ಅದಕ್ಕೆ ಲೇಖಕರು ಹಾಗೂ ಪ್ರಕಾಶಕರೇ ಜವಾಬ್ದಾರರಾಗಿರುತ್ತಾರೆ. ಬಿಡುಗಡೆಗೆ ಪುಸ್ತಕಗಳನ್ನು ಆಯ್ಕೆ ಮಾಡುವ ಅಥವಾ ತಿರಸ್ಕರಿಸುವ ಸಂಪೂರ್ಣ ಅಧಿಕಾರವನ್ನು ಪ್ರಾಧಿಕಾರ ಹೊಂದಿರುತ್ತದೆ. ದಿನಾಂಕ:05.10.2026ರ ನಂತರ ಯಾವುದೇ ಪುಸ್ತಕಗಳನ್ನು ಬಿಡುಗಡೆಗೆ ಸ್ವೀಕರಿಸುವುದಿಲ್ಲ. ಪುಸ್ತಕ ಬಿಡುಗಡೆಗೆ ಬರುವ ಲೇಖಕರು / ಪ್ರಕಾಶಕರುಗಳಿಗೆ ಯಾವುದೇ ಸಂಭಾವನೆ, ಪ್ರಯಾಣ ವೆಚ್ಚ ಸೇರಿದಂತೆ ಇತರೆ ಯಾವುದೇ ಸೌಲಭ್ಯ ಒದಗಿಸಲು ಅವಕಾಶವಿರುವುದಿಲ್ಲ. ಬಿಡುಗಡೆಗೆ ಸ್ವಿಕೃತವಾಗುವ ಪುಸ್ತಕಗಳನ್ನು ಸಂಖ್ಯೆಗೆ ಅನುಗುಣವಾಗಿ ಪುಸ್ತಕ ಮೇಳ ನಡೆಯುವ 09ದಿನಗಳಿಗೆ ವಿಂಗಡಿಸಿ ಯಾವ ದಿನ ಯಾವ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದೆಂಬ ವಿವರವನ್ನು ಆಯಾ ಲೇಖಕರು / ಪ್ರಕಾಶಕರುಗಳಿಗೆ ತಿಳಿಸಲಾಗುವುದು. ಪುಸ್ತಕ ಬಿಡುಗಡೆಗೆ ಬಯಸುವ ಲೇಖಕರು ತಮ್ಮ ವಿವರಗಳನ್ನು ಮಾನ್ಯ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ದೂರವಾಣಿ ಸಂಖ್ಯೆ:9448056562ಗೆ ಕಳುಹಿಸಬಹುದಾಗಿದೆ ಎಂದು ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



