ಅರಕೇರಾ, ಸೆ.27: ಸತ್ಸಂಗ ಎಂದರೆ ಕೇವಲ ಎಲ್ಲರೂ ಒಂದೆಡೆ ಸೇರಿ ಕುಳಿತುಕೊಳ್ಳುವುದಲ್ಲ, ಸತ್ಯದ ಸಂಗ ಮಾಡುವುದು. ಸತ್ಯದ ಅರಿವು ಮೂಡಿದಾಗ ಮಾತ್ರ ಜೀವನದ ಅನುಭವಕ್ಕೆ ಪರಮಾರ್ಥದ ಅರ್ಥ ಸಿಗುತ್ತದೆ ಎಂದು ಪಂಜಾಬ್ ರಾಜ್ಯದ ಜಲಂಧರ ವಾಲ್ಮೀಕಿ ಆಶ್ರಮದ ಪೀಠಾಧಿಪತಿ ರಾಜಯೋಗಿ ಶಿವನಾಥ ಮಹಾರಾಜರು ಹೇಳಿದರು.

ತಾಲೂಕಿನ ಮದರಕಲ್ ಗ್ರಾಮದ ಅಂಬಾ ಮಠದಲ್ಲಿ ಶನಿವಾರ ಹುಣ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಅನುಭವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಸತ್ಸಂಗದ ಮಹತ್ವ ಕುರಿತು ಪ್ರವಚನ ನೀಡಿದರು.

ಸತ್ಸಂಗವು ವ್ಯಕ್ತಿಯ ಮನಸ್ಸಿಗೆ ಶಾಂತಿ ನೀಡುವುದರ ಜೊತೆಗೆ ಸತ್ಯ, ಧರ್ಮ ಹಾಗೂ ಸನ್ಮಾರ್ಗದ ಅರಿವು ಮೂಡಿಸುತ್ತದೆ. ಜೀವನದಲ್ಲಿ ಆಧ್ಯಾತ್ಮಿಕ ಚಿಂತನೆ ಮತ್ತು ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವ ಮೂಲಕ ಅರ್ಥಪೂರ್ಣ ಬದುಕು ನಡೆಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ತಹಶೀಲ್ದಾರ್ ವೆಂಕನಗೌಡ ಪಾಟೀಲ್ ಮಾತನಾಡಿ, ಸಮಾಜದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಅಂಬಾ ಮಠದ ಪೀಠಾಧಿಪತಿ ಸಂತ ನಾಮದೇವಗೌಡ ಶರಣರು, ಸಿದ್ದರಾಮೇಶ್ವರ ಸ್ವಾಮೀಜಿ ನಾಗನಟಿಗಿ, ಹಿರಿಯ ನ್ಯಾಯವಾದಿ ವಿ.ಎಂ. ಮೇಟ್, ನಿವೃತ್ತ ಡಿಡಿಪಿಐ ಇಂದಿರಾ, ನಿವೃತ್ತ ಪಿಎಸ್‌ಐ ವೆಂಕಣ್ಣ, ವೀರಯ್ಯಸ್ವಾಮಿ, ಸೋಮಪ್ಪ ನಾಯಕ, ಲಿಂಗರಾಜ ಪಾಟೀಲ್, ಅಮರೇಶ, ಬಸವ ರಾಮುಲು, ಅಯ್ಯನಗೌಡ, ಶಿವಪ್ಪ ಪಲಕನಮರಡಿ, ಹನುಮಣ್ಣ ಬಡಿಗೆಪ್ಪ, ಸಾಬಗೌಡ ಪಾಟೀಲ್, ಸಿದ್ದನಗೌಡ ಮಾಲಿಪಾಟೀಲ್, ದೇವನಗೌಡ ಮಾಲಿಪಾಟೀಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಾನಯ್ಯ ಮತ್ತು ಅಲಿಸಾಬ್, ಬಸವರಾಜ ಮಾತ್ಪಳ್ಳಿ, ಬಸವರಾಜ ಚಿಕ್ಕಲ್, ಮುದುಕಪ್ಪ ಶರಣರು, ಸಾಬಣ್ಣ ಶರಣರು, ಸಾಹುಕಾರ ರಂಗಣ್ಣ, ಚಿನ್ನಪ್ಪ ಹರಿಜನ, ರಂಗಪ್ಪ ಹರಿಜನ, ನಿಂಗಪ್ಪ ಬಾಗೂರ್, ಚನ್ನಬಸವ ನಾಯಕ ಮ್ಯಾಕಲದೊಡ್ಡಿ, ಅಮರೇಶ ಊಟಿ ಸೇರಿದಂತೆ ಮಠದ ಸದ್ಭಕ್ತರು, ಗ್ರಾಮದ ಹಿರಿಯರು, ಮಹಿಳಾ ಭಕ್ತ ಮಂಡಳಿ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಭಕ್ತರು ಭಾಗವಹಿಸಿದ್ದರು.